GST Rules: GST ನಿಯಮದಲ್ಲಿ ದೊಡ್ಡ ಬದಲಾವಣೆ, ಮಾರ್ಚ್1 GST ಕಟ್ಟುವವರಿಗೆ ಕೇಂದ್ರದಿಂದ ಹೊಸ ರೂಲ್ಸ್

ಮಾರ್ಚ್ 1 ರಿಂದ GST ನಿಯಮದಲ್ಲಿ ದೊಡ್ಡ ಬದಲಾವಣೆ, ಕೇಂದ್ರದಿಂದ ಹೊಸ ರೂಲ್ಸ್

GST Rules Change 2024: ಸದ್ಯ ದೇಶದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಸಾಕಷ್ಟು ಹಣಕಾಸೇತರ ನಿಯಮವನ್ನು ಜಾರಿಗೊಳಿಸುತ್ತಿದ್ದಾರೆ. ಇತ್ತೀಚೆಗಂತೂ ನಿರ್ಮಲ ಸೀತಾರಾಮನ್ ಅವರು ಆದಾಯ ತೆರಿಗೆ ಸಂಬಂಧಿತ ನಿಯಮದ ಜೊತೆಗೆ GST ಗೆ ಸಂಬಂಧಿಸಿದಂತೆ ಅನೇಕ ನಿಯಮವನ್ನು ಪರಿಚಯಿಸಿದ್ದಾರೆ.

ಸದ್ಯ 2024 ಆರಂಭವಾಗಿದ್ದು ಇನ್ನೇನು ನಾಲ್ಕೇ ತಿಂಗಳಿನಲ್ಲಿ 2024 -25 ರ ಹಣಕಾಸು ವರ್ಷ ಆರಂಭವಾಗಲಿದೆ. ಇದೀಗ ಕೇಂದ್ರ ಸರ್ಕಾರ GST ನಿಯಮದಲ್ಲಿ ದೊಡ್ಡ ಬದಲಾವಣೆಯನ್ನು ಜಾರಿಗೆ ತಂದಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

GST Rules Change 2024
Image Credit: Samacharjagat

GST ನಿಯಮದಲ್ಲಿ ದೊಡ್ಡ ಬದಲಾವಣೆ
ಸದ್ಯ ಕೇಂದ್ರ ಸರ್ಕಾರ ದೇಶದಲ್ಲಿ ಹೊಸ GST ನಿಯಮವನ್ನು ಪರಿಚಯಿಸಿದೆ. ಹೆಚ್ಚಿನ ವಹಿವಾಟು ಹೊಂದಿರುವ ವ್ಯಾಪಾರಗಳಿಗೆ ಕೇಂದ್ರ ಸರ್ಕಾರ ಹೊಸ GST ನಿಯಮವನ್ನು ವಿಧಿಸಿದೆ. ಇನ್ನುಮುಂದೆ 5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯವಹಾರಗಳು ಎಲ್ಲಾ ವ್ಯಾಪಾರ ವಹಿವಾಟುಗಳಿಗೆ E-Invoice ನೀಡದೆ ಇ-ವೇ ಬಿಲ್‌ ಗಳನ್ನು ನೀಡಲು ಸಾಧ್ಯವಾಗುವುದಿಲ್ಲ.

ಈ ಹೊಸ ನಿಯಮವು ಮಾರ್ಚ್ 1, 2024 ರಿಂದ ಜಾರಿಯಾಗಲಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ, 50,000 ರೂ.ಗಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಲು ಇ-ವೇ ಬಿಲ್ ಹೊಂದಿರುವುದು ಅವಶ್ಯಕ. ವಿಶ್ಲೇಷಣೆಯ ಆಧಾರದ ಮೇಲೆ ರಾಷ್ಟ್ರೀಯ ಮಾಹಿತಿ ಕೇಂದ್ರ (NIC), ಇ-ಇನ್‌ ವಾಯ್ಸ್‌ ಗಾಗಿ ಕೆಲವು ಅರ್ಹ ತೆರಿಗೆದಾರರು B2B (ಸಂಸ್ಥೆಯಿಂದ ಸಂಸ್ಥೆಗೆ) ಮತ್ತು B2E (ರಫ್ತುದಾರರಿಂದ ಕಂಪನಿಗಳಿಗೆ) ವಹಿವಾಟುಗಳಿಗೆ ಇ-ವೇ ಬಿಲ್‌ ಗಳನ್ನು ಬಳಸುತ್ತಿಲ್ಲ ಎಂದು ಕಂಡುಹಿಡಿದಿದೆ.

GST Rule Change From March 1 2024
Image Credit: Original Source

ಮಾರ್ಚ್ 1 ರಿಂದ GST ಕಟ್ಟುವವರಿಗೆ ಕೇಂದ್ರದಿಂದ ಹೊಸ ರೂಲ್ಸ್
ಇ-ವೇ ಬಿಲ್ ಮತ್ತು ಇ-ಇನ್‌ ವಾಯ್ಸ್ ಅಡಿಯಲ್ಲಿ ಪ್ರತ್ಯೇಕವಾಗಿ ಸಲ್ಲಿಸಲಾದ ಚಲನ್ ಸ್ಟೇಟ್‌ ಮೆಂಟ್ ಕೆಲವು ಪ್ಯಾರಾಮೀಟರ್‌ ಗಳಲ್ಲಿ ಹೊಂದಿಕೆಯಾಗುವುದಿಲ್ಲ. ಈ ಕಾರಣದಿಂದಾಗಿ ಇ-ವೇ ಬಿಲ್ ಮತ್ತು ಇ-ಇನ್‌ ವಾಯ್ಸ್ ಸ್ಟೇಟ್‌ ಮೆಂಟ್ ನಡುವೆ ಯಾವುದೇ ಹೊಂದಾಣಿಕೆ ಇಲ್ಲ. ಇದನ್ನು ತಪ್ಪಿಸಲು ಮಾರ್ಚ್ 1, 2024 ರಿಂದ ಇ-ಚಲನ್ ಸ್ಟೇಟ್‌ಮೆಂಟ್ ಇಲ್ಲದೆ ಇ-ವೇ ಬಿಲ್ ಅನ್ನು ರಚಿಸಲು ಅನುಮತಿಸಲಾಗುವುದಿಲ್ಲ ಎಂದು NIC GST ತೆರಿಗೆದಾರರಿಗೆ ತಿಳಿಸಿದೆ. ಆದರೆ ಗ್ರಾಹಕರು ಅಥವಾ ಸರಬರಾಜು ಮಾಡದ ಇತರ ವಹಿವಾಟುಗಳಿಗೆ ಇ-ವೇ ಬಿಲ್ ಮೊದಲಿನಂತೆಯೇ ಮುಂದುವರಿಯುತ್ತದೆ ಎಂದು NIC ಸ್ಪಷ್ಟನೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group