MCLR Hike: HDFC ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ, ಬ್ಯಾಂಕಿನ ಬಡ್ಡಿ ದರದಲ್ಲಿ ಮತ್ತೆ ಇಷ್ಟು ಹೆಚ್ಚಳ

ಸಾಲಗಳ ಮೇಲಿನ MCLR ದರವನ್ನ ಮತ್ತೆ ಹೆಚ್ಚಳ ಮಾಡಿದ HDFC

HDFC Bank MCLR Hike: ಈ ಬಾರಿಯ ಹಣಕಾಸು ವರ್ಷ ಜನಸಾಮ್ಯಾರಿಗೆ ಸಾಕಷ್ಟು ಆರ್ಥಿಕ ನಷ್ಟವನು ನೀಡಿದೆ. ಹಣಕಾಸು ವರ್ಷದ ಆರಂಭದಿಂದ ಹಣದುಬ್ಬರ ಪರಿಸ್ಥಿತಿ ಹೆಚ್ಚುತ್ತಿದೆ. ಹೊಸ ವರ್ಷದ ಆರಂಭದಿಂದ ಅನೇಕ ನಿಯಮಗಳಲ್ಲಿ RBI ಬದಲಾವಣೆ ತಂದಿದೆ.

ಇನ್ನು ಗ್ರಾಹಕರಿಗೆ ಅನುಕೂಲವಾಗಲು ಸಾಕಷ್ಟು ಹೊಸ ರೀತಿಯ ಸೇವೆಗಳನ್ನು ಕೂಡ ಪರಿಚಯಿಸಿದೆ. ಇದೀಗ ದೇಶದಲ್ಲಿಯೇ ಪ್ರತಿಷ್ಠಿತ ಸರ್ಕಾರಿ ಬ್ಯಾಂಕ್ ಆದ HDFC ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೌದು ನಿನ್ನೆ RBI ರೆಪೋ ದರವನ್ನ ಪರಿಷ್ಕರಣೆ ಮಾಡಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು, ಆದರೆ HDFC ಬ್ಯಾಂಕ್ MCLR ದರವನ್ನ ಹೆಚ್ಚಳ ಮಾಡಿದ ಕಾರಣ ಸಾಲದ EMI ಕೂಡ ಹೆಚ್ಚಳ ಆಗಿದೆ.

HDFC Bank MCLR Hike
Image Credit: Live Mint

HDFC ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ
ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆದ HDFC ತನ್ನ ಗ್ರಾಹಕರಿಗೆ ಇದೀಗ ಶಾಕ್ ನೀಡಿದೆ. HDFC ಬ್ಯಾಂಕ್ ಫಂಡ್ ಆಧಾರಿತ ಸಾಲದ ದರವನ್ನು ಅಂದರೆ MCLR ದರಗಳನ್ನು ಹೆಚ್ಚಿಸಿದೆ. ಇನ್ನು HDFC ಬ್ಯಾಂಕ್ ತನ್ನ ಬಡ್ಡಿದರವನ್ನು ಹೆಚ್ಚಿಸಿದರೆ ಅದರ ನೇರ ಪರಿಣಾಮ ಬ್ಯಾಂಕ್ ನಲ್ಲಿ ಸಾಲ ಪಡೆದವರ ಮೇಲೆ ಬೀಳುತ್ತದೆ.

ಮೊದಲೇ ಹಣದುಬ್ಬರದ ಪರಿಸ್ಥಿಯನ್ನು ಎದುರಿಸುತ್ತಿರುವ ಗ್ರಾಹಕರಿಗೆ ಇದೀಗ ಹೆಚ್ಚಿನ ಬಡ್ಡಿದರದ ಪಾವತಿ ಜನರನ್ನು ಇನ್ನಷ್ಟು ಆರ್ಥಿಕವಾಗಿ ಕುಗ್ಗಿಸಲಿದೆ. ಸದ್ಯ HDFC ಬ್ಯಾಂಕ್ ನ ಹೊಸ MCLR ದರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

HDFC Bank MCLR December 2023
Image Credit: Live Mint

HDFC Bank New MCLR
•HDFC ಬ್ಯಾಂಕ್ ಒಂದು ರಾತ್ರಿಯ MCLR ಅನ್ನು 5 BPS ನಿಂದ 8.65 ಶೇಕಡಾದಿಂದ 8.70 ಶೇಕಡಕ್ಕೆ ಹೆಚ್ಚಿಸಲಾಗಿದೆ.

Join Nadunudi News WhatsApp Group

•HDFC ಬ್ಯಾಂಕ್ ಒಂದು ತಿಂಗಳ MCLR ಅನ್ನು 5 BPS ನಿಂದ 8.70 ಶೇಕಡಾದಿಂದ 8.75 ಶೇಕಡಕ್ಕೆ ಹೆಚ್ಚಿಸಲಾಗಿದೆ.

•HDFC ಬ್ಯಾಂಕ್ 3 ತಿಂಗಳ MCLR 5 BPS ನಿಂದ ಶೇಕಡಾ 8.90 ರಿಂದ 8.95 ಕ್ಕೆ ಹೆಚ್ಚಿಸಲಾಗಿದೆ.

•HDFC ಬ್ಯಾಂಕ್ ಅರ್ಧ ವಾರ್ಷಿಕ MCLR ಕೇವಲ 9.15 ಶೇಕಡಾ. ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

•HDFC ಬ್ಯಾಂಕ್ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ MCLR 9.20 ಪ್ರತಿಶತ ನಿಗದಿಮಾಡಿದೆ. ಇದರಲ್ಲಿ ಕೂಡ ಯಾವುದೇ ಬದಲಾವಣೆ ಆಗಿಲ್ಲ.

•HDFC ಬ್ಯಾಂಕ್ 2 ವರ್ಷ ಕ್ಕಿಂತ ಹೆಚ್ಚಿನ ಅವಧಿಗೆ MCLR ಅನ್ನು 9.20 ಶೇಕಡಾದಿಂದ 9.25 ಕ್ಕೆ ಹೆಚ್ಚಿಸಿದೆ.

•HDFC ಬ್ಯಾಂಕ್ 3 ವರ್ಷ ಕ್ಕಿಂತ ಹೆಚ್ಚಿನ ಅವಧಿಗೆ MCLR ಶೇಕಡಾ 9.25 ಆಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

HDFC Bank MCLR Latest Update
Image Credit: NDTV profit

ಈ ದರಗಳು ಡಿಸೇಂಬರ್ 7 ರಿಂದ ಜಾರಿಗೆ ಬಂದಿವೆ
ಬ್ಯಾಂಕ್ ಗಳು MCLR ಅನ್ನು ನಿರ್ಧರಿಸುವಾಗ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ರೆಪೊ ದರದಲ್ಲಿನ ಬದಲಾವಣೆಗಳು MCLR ದರದ ಮೇಲೆ ಪರಿಣಾಮ ಬೀರುತ್ತವೆ. ಆದರೆ ಈಗ ರೆಪೋ ದರದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಬ್ಯಾಂಕ್ MCLR ಅನ್ನ ಬದಲಾವಣೆ ಮಾಡಿದೆ. ಈ ದರಗಳು ಡಿಸೇಂಬರ್ 7 ರಿಂದ ಜಾರಿಗೆ ಬಂದಿವೆ. MCLR ಸಾಲದ ಬಡ್ಡಿದರಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಸಾಲಗಾರರ EMI ಹೆಚ್ಚಾಗುತ್ತದೆ.

ಸಾಲಗಾರರ EMI ಹೆಚ್ಚಳ
MCLR ಹೆಚ್ಚಳದ ಪರಿಣಾಮ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಗಳ ಮೇಲೆ ಬೀರುತ್ತದೆ. ಇದರಿಂದ ಸಾಲದ ಗ್ರಾಹಕರು ಮೊದಲಿಗಿಂತ ಹೆಚ್ಚು EMI ಪಾವತಿಸಬೇಕಾಗುತ್ತದೆ. ಹೊಸ ಸಾಲವನ್ನು ತೆಗೆದುಕೊಳ್ಳುವ ಗ್ರಾಹಕರು ಹೆಚ್ಚಿನ ಬಡ್ಡಿಗೆ ಸಾಲವನ್ನು ಪಡೆದುಕೊಳ್ಳಬೇಕಾಗುತ್ತದೆ.’

Join Nadunudi News WhatsApp Group