Hero v/s TVS: Hero Xtreme 125R ಮತ್ತು TVS ರೈಡರ್ 125 ಬೈಕ್ ನಲ್ಲಿ ಯಾವುದು ಬೆಸ್ಟ್..? ಇಲ್ಲಿದೆ ಡೀಟೇಲ್ಸ್

Hero Xtreme 125R ಮತ್ತು TVS Raider 125 ಬೈಕ್ ನಲ್ಲಿ ಯಾವ ಬೈಕ್ ಬೆಸ್ಟ್..?

Hero Xtreme 125R v/s TVS Raider 125: ಸದ್ಯ ಭಾರತೀಯ ಆಟೋ ವಲಯದಲ್ಲಿ ವಿವಿಧ ಕಂಪನಿಗಳು ಹೊಸ ಹೊಸ ಸ್ಪೋರ್ಟಿ ಬೈಕ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸಿವೆ. ಹೊಸ ಹೊಸ ವಿನ್ಯಾಸದ ಬೈಕ್ ಗಳನ್ನು ಪರಿಚಯಿಸುತ್ತ Hero ಹಾಗೂ TVS ಕಂಪನಿಯ ಬೈಕ್ ಗಳು ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿದೆ. ಇದೀಗ ನಾವು Hero ಹಾಗೂ TVS ಕಂಪನಿಯ ಬೈಕ್ ಗಳಲ್ಲಿ ಯಾವ ಬೈಕ್ ಬೆಸ್ಟ್ ಆಗಿದೆ..? ಹಾಗಾದರೆ ಈ ಎರಡು ಬೈಕ್ ನಲ್ಲಿ ಯಾವುದು ಬೆಸ್ಟ್ ಅನ್ನುವುದರ ಬಗ್ಗೆ ತಿಳಿಯೋಣ

Hero Xtreme 125R Bike Price In India
Image Credit: Bike Wale

Hero Xtreme 125R v/s TVS Raider 125
ಸ್ಪೋರ್ಟಿ ವಿನ್ಯಾಸದೊಂದಿಗೆ Hero Xtreme 125R ಮತ್ತು TVS Raider 125 ಬೈಕ್ ಬರ್ಜರಿಗಾಗಿ ರೆಡಿಯಾಗಿವೆ. ಈ ಎರಡು ಮಾದರಿಯ ಬೈಕ್ ಗಳು ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಎರಡು ವಿಭಿನ್ನ ಕಂಪನಿಗಳು ಪರಿಚಯಿಸಿರುವ ಈ ಸ್ಪೋರ್ಟ್ಸ್ ಬೈಕ್ ನಲ್ಲಿ ವೈಶಿಷ್ಟ್ಯಗಳು ಕೂಡ ವಿಭಿನ್ನವಾಗಿರುತ್ತದೆ. ಮೈಲೇಜ್, ಬೆಲೆ, ಫೀಚರ್ ಎಲ್ಲವು ಕೂಡ ವಿಭಿನ್ನವಾಗಿರುತ್ತದೆ. ಇದೀಗ ನಾವು Hero Xtreme 125R ಮತ್ತು TVS Raider 125 ಬೈಕ್ ನಲ್ಲಿ ಯಾವುದು ಬೆಸ್ಟ್ ಎನ್ನುವುದನ್ನು ತಿಳಿಯೋಣ.

Hero Xtreme 125R
ಹೀರೋ ಕಂಪನಿಯು ಇದೀಗ ಹೊಸದಾಗಿ Xtreme 125R ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಹೊಸ ಆಯ್ಕೆಯನ್ನು ನೀಡಿದೆ. ನೀವು ಮಾರುಕಟ್ಟೆಯಲ್ಲಿ Xtreme 125R ಬೈಕ್ ನ ಎರಡು ರೂಪಾಂತರಗಳನ್ನು ನೋಡಬಹುದು. ಮಾರುಕಟ್ಟೆಯಲ್ಲಿ Xtreme 125R ಬೈಕ್ ನ Integrated braking system ರೂಪಾಂತರವು ರೂ. 95,000 ಬೆಲೆಯನ್ನು ಹೊಂದಿದ್ದರೆ, Antilock braking system ರೂಪಾಂತರವು 99,500 ರೂ. ಎಕ್ಸ್ ಶೋರೂಮ್ ಬೆಲೆಯಲ್ಲಿ ಪರಿಚಯವಾಗಿದೆ.

ಹೀರೋ ಎಕ್ಸ್‌ ಟ್ರೀಮ್ 125ಆರ್ ಮೋಟಾರ್‌ ಸೈಕಲ್ 125 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ ನಿಂದ ಚಾಲಿತವಾಗಿದ್ದು, ಪ್ರತಿ ಲೀಟರ್ ಗೆ ಬರೋಬ್ಬರಿ 66km ಮೈಲೇಜ್ ನೀಡುವುದರಲ್ಲಿ ಎರಡು ಮಾತಿಲ್ಲ. 5-ಸ್ಪೀಡ್ ಗೇರ್ ಬಾಕ್ಸ್ ಸಹ ಆಯ್ಕೆಯಾಗಿ ಲಭ್ಯವಿದೆ.

TVS Raider 125 Bike Price And Feature
Image Credit: Bike Wale

TVS Raider 125 Bike
ಬೈಕ್ ಗಳ ಮೇಲಿನ ಹೆಚ್ಚುತ್ತಿರುವ ಹಿನ್ನಲೆ TVS ಕಂಪನಿ ತನ್ನ ಟಾಪ್ ಮಾಡೆಲ್ ಬೈಕ್ ಅನ್ನು ಕಡಿಮೆ ಬೆಲೆಗೆ ನೀಡಲು ನಿರ್ಧರಿಸಿದೆ. ಅದರಲ್ಲಿ TVS Raider 125 ಬೈಕ್ ಕೂಡ ಒಂದಾಗಿದೆ. ಈ ಬೈಕ್ ನಲ್ಲಿ ಬಲಿಷ್ಠ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಪಡೆಯಬಹುದಾಗಿದೆ. TVS Raider 125 ಬೈಕ್ ಹೊಸ Smartxonnect ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿ ಮಾರುಕಟ್ಟೆಗೆ ಪರಿಚಯಿಸಿದೆ.

Join Nadunudi News WhatsApp Group

ಕಂಪನಿಯ ಬೈಕ್ TVS Raider 125 Smartxonnect ಏರ್-ಕೂಲ್ಡ್ ತಂತ್ರಜ್ಞಾನದ ಆಧಾರದ ಮೇಲೆ ಮೂರು-ವಾಲ್ವ್ ಎಂಜಿನ್ ಹೊಂದಿದೆ. ಈ ಬೈಕ್ 124.8cc ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದ್ದು, 7,500rpm ನಲ್ಲಿ 11.2bhp ಗರಿಷ್ಟ ಪವರ್ ಜೊತೆಗೆ 6,000 rpm ನಲ್ಲಿ 11.2Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು TVS ರೈಡರ್ ಮೈಲೇಜ್ ಬಗ್ಗೆ ಹೇಳುವುದಾದರೆ, ಈ ಬೈಕ್ ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 67 ಕೀ ಮೀ ಮೈಲೇಜ್ ಕೊಡುತ್ತದೆ. TVS ರೈಡರ್ ಆರಂಭಿಕ ಬೆಲೆ ಸುಮಾರು 95 ಸಾವಿರದಿಂದ 1 .03 ಲಕ್ಷ ರೂ. ಆಗಿದೆ.

Join Nadunudi News WhatsApp Group