Fake iPhone: ಐಫೋನ್ ಬಾಕ್ಸ್ ನಲ್ಲಿ ಈಗ ಹೈ ಸೆಕ್ಯೂರಿಟಿ ಫೀಚರ್, ಖರೀದಿಸುವ ಮುನ್ನ ಈ ರೀತಿ ಚೆಕ್ ಮಾಡಿ.

iPhone ಬಾಕ್ಸ್ ನಲ್ಲಿ ಹೈ ಸೆಕ್ಯೂರಿಟಿ ಸಿಸ್ಟಮ್ ಅಳವಡಿಕೆ.

High Security Feature In iPhone 15: ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ iPhone 15 ಬಾರಿ ಬೇಡಿಕೆ ಪಡೆಯುತ್ತಿದೆ. iPhone ಖರೀದಿಗಾಗಿ ಜನರು ಕ್ಯೂ ನಿಂತಿದ್ದಾರೆ. iPhone ನ ನಾಲ್ಕು ಮಾದರಿಗಳು ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.

ಇನ್ನು ದೇಶಿಯ ಮಾರುಕಟ್ಟೆಯಲ್ಲಿ Apple ಬ್ರಾಂಡ್ ಅತಿ ದುಬಾರಿ ಬ್ರಾಂಡ್ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇನ್ನು ಈ ಅತಿ ದುಬಾರಿ ಮೌಲ್ಯದ ಐಫೋನ್ ಖರೀದಿಯಲ್ಲಿ ಇತ್ತೀಚಿಗೆ ವಂಚನೆ ನಡೆಯುತ್ತಿದೆ ಎನ್ನಬಹುದು. ಸದ್ಯ ಈ ಸಮಸ್ಯೆಗೆ ಸ್ವತಃ Apple ಕಂಪನಿ ಗ್ರಾಹಕರಿಗೆ ಪರಿಹಾರ ನೀಡಿದೆ.

High Security Feature In iPhone 15
Image Credit: Gizchina

ಹೆಚ್ಚುತ್ತಿದೆ ನಕಲಿ iPhone ಗಳ ಮಾರಾಟ
iPhone ಖರೀದಿಸಲು ಎಲ್ಲರು ಇಷ್ಟಪಡುತ್ತಾರೆ. ಇನ್ನು ಇತ್ತೀಚಿಗೆ ಮಾರುಕಟ್ಟೆಯಲ್ಲಿ ನಕಲಿ iPhone ಗಳ ಹಾವಳಿ ಹೆಚ್ಚುತ್ತಿದೆ ಎನ್ನಬಹುದು. ಸಾಕಷ್ಟು ಕಡೆಯಲ್ಲಿ ನಕಲಿ iPhone ಗಳನ್ನೂ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ನಕಲಿ iPhone ಗಳ ಮಾರಾಟ ಸದ್ಯ Apple ಕಂಪನಿಯ ಗಮನಿಕೆ ಬಂದಿದೆ. ಈ ನಿಟ್ಟಿನಲ್ಲಿ ಕಂಪನಿಯು ಗ್ರಾಹಕರಿಗೆ ತೊಂದರೆ ಆಗಬಾರದು ಎಂದು iPhone 15 ಮಾರಾಟದಲ್ಲಿ ಹೈ ಸೆಕ್ಯೂರಿತು ಸಿಸ್ಟಮ್ ಅನ್ನು ಅಳವಡಿಸಿದೆ.

ಐಫೋನ್ ಬಾಕ್ಸ್ ನಲ್ಲಿ ಈಗ ಹೈ ಸೆಕ್ಯೂರಿಟಿ ಫೀಚರ್
ಸದ್ಯ ಮಾರುಕಟ್ಟೆಯಲ್ಲಿ ನಕಲಿ iPhone ಗಳ ಮಾರಾಟ ಹೆಚ್ಚುತ್ತಿರುವ ಕಾರಣ ಜನರು iPhone ಖರೀದಿಸುವಾಗ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ. ನಕಲಿ ಐಫೋನ್ ಗಳ ಮಾರಾಟ ಹೆಚ್ಚುತ್ತಿರುವ ಹಿನ್ನಲೆ Apple ಕಂಪನಿ iPhone 15 ಬಾಕ್ಸ್ ನಲ್ಲಿ ಹೈ ಸೆಕ್ಯೂರಿಟಿ ಸಿಸ್ಟಮ್ ಅನ್ನು ಅಳವಡಿಸಿದೆ. ಇದರ ಮೂಲಕ ಸುಲಭವಾಗಿ ಐಫೋನ್ ನ ಅಸಲೀಯತ್ತನ್ನು ಪರಿಶೀಲಿಸಿಕೊಳ್ಳಬಹುದು.

Join Nadunudi News WhatsApp Group

iPhone ಖರೀದಿಸುವ ಮುನ್ನ ಈ ರೀತಿ ಚೆಕ್ ಮಾಡಿ
*ಹೊಸ iPhone 15 ರ ಬಾಕ್ಸ್‌ಗಳು UV ಬೆಳಕಿನ ಅಡಿಯಲ್ಲಿ ಹೊಲೊಗ್ರಾಮ್‌ ಗಳನ್ನು ಪ್ರದರ್ಶಿಸುವ ಭದ್ರತಾ ವ್ಯವಸ್ಥೆಯನ್ನು ಹೊಂದಿದೆ. ನೈಜ ಪೆಟ್ಟಿಗೆಗಳನ್ನು ಗುರುತಿಸಲು ಮತ್ತು ಜನರು ವಂಚನೆಗೊಳಗಾಗುವುದನ್ನು ತಡೆಯಲು ಆಪಲ್ ಕಂಪನಿ ಈ ಫೀಚರ್ ಅನ್ನು ಪರಿಚಯಿಸಿದೆ.

* ಫೋನ್‌ ನ Setting​ ಗೆ ತೆರಳಿ Application ಗೆ ಹೋಗುವ ಮೂಲಕ ಅಥವಾ ಫೋನ್‌ನ ಹಿಂಭಾಗದಲ್ಲಿ ತೋರಿಸಿರುವ ಮಾಹಿತಿಯನ್ನು ನೋಡುವ ಮೂಲಕ ಬಾಕ್ಸ್‌ನಲ್ಲಿ ನೀಡಲಾದ ಸರಣಿ ಸಂಖ್ಯೆ ಅಥವಾ IMEI ಸಂಖ್ಯೆಯನ್ನು ನೀವು ಪರಿಶೀಲಿಸಬಹುದು. ಇದಲ್ಲದೆ SIM ಟ್ರೇನಲ್ಲಿ IMEI ಸಂಖ್ಯೆಯನ್ನು ಸಹ ಬರೆಯಲಾಗಿದೆ. ಈ ಮೂಲಕ ಫೋನ್ ನಿಜವಾಗಿಯೂ ಅಸಲಿಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು.

* ಇನ್ನು ಫೋನ್ ಅನ್ನು ಖರೀದಿಸುವಾಗ Apple ID ಗೆ Login ಆದಾಗ ಫೋನ್ ಕ್ಲೋನ್ ಆಗಿದ್ದರೆ Apple ID Login ಆಗುವುದಿಲ್ಲ.

Join Nadunudi News WhatsApp Group