New Repo Rate: ಗೃಹ ಸಾಲ ಮತ್ತು ವಾಹನ ಸಾಲ ಮಾಡಿದವರಿಗೆ ಗುಡ್ ನ್ಯೂಸ್, ನಿರ್ಧಾರ ಹೊರಹಾಕಿದ RBI

ಗೃಹ ಸಾಲ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿ ದರದಲ್ಲಿ RBI ಯ್ತಸ್ಥಿತಿಯನ್ನ ಕಾಯ್ದುಕೊಂಡಿದೆ.

Repo Rate 2023: 2023 -24 ಹಣಕಾಸು ವರ್ಷ (Financial Year) ಏಪ್ರಿಲ್ 1 2023 ರಿಂದ ಆರಂಭಗೊಂಡಿದೆ. ಈ ಹೊಸ ಹಣಕಾಸು ವರ್ಷದ ಆರಂಭದಿಂದಾಗಿ ಅನೇಕ ಹಣಕಾಸಿನ ನಿಯಮಗಳಲ್ಲಿ ಬದಲಾವಣೆಯಾಗಿದೆ.

ಇನ್ನು ಜನಸಾಮಾನ್ಯರು ಈ ಹೊಸ ಹಣಕಾಸು ವರ್ಷದ ಆರಂಭದಿಂದ ಹಣದುಬ್ಬರದ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ. ಜನರ ಆರ್ಥಿಕ ಪರಿಸ್ಥಿತಿಯ ಮೇಲೆ ಈ ಹಣದುಬ್ಬರ ಪ್ರಭಾವ ಬೀರುತ್ತಿದೆ.

New Repo Rate 2023
Image Source: BQ Prime

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್
ಇನ್ನು ಹೊಸ ಹಣಕಾಸು ವರ್ಷಕ್ಕೆ ಹೊಸ ಹೊಸ ಹಣಕಾಸು ನೀತಿಗಳು ಜಾರಿಗೊಳ್ಳಲಿದೆ. ಈ ಬಾರಿಯ ಹಣಕಾಸು ನೀತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಅವರು ಪ್ರಕಟಿಸಲಿದ್ದಾರೆ.

ಕಚ್ಚಾ ತೈಲಗಳು, ಅಡುಗೆ ಅನಿಲಗಳು, ಆಹಾರ ಪದಾರ್ಥಗಳು ಸೇರಿದಂತೆ ಇನ್ನು ಹತ್ತು ಹಲವು ದಿನ ಬಳಕೆಯ ವಸ್ತುಗಳ ಬೆಲೆಯಲ್ಲಿ ವಿಪರೀತ ಏರಿಕೆ ಕಂಡು ಬರುತ್ತಿದೆ, ಆದರೆ ಈಗ RBI ಹೊಸ ರೆಪೋ ದರವನ್ನ ಪ್ರಕಟ ಮಾಡಿದೆ.

New Repo Rate 2023
Image Source: India Today

ಯಥಾಸ್ಥಿತಿಯಲ್ಲಿ ರೆಪೋ ದರ
ಕಳೆದ ಹಣಕಾಸು ವರ್ಷದಲ್ಲಿ ಕೂಡ ಜನಸಾಮಾನ್ಯರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸಿದ್ದರು. ಕಳೆದ ಬಾರಿ ಆರ್ ಬಿಐ ಆರು ಬಾರಿ ರೆಪೊದರವನ್ನು ಹೆಚ್ಚಿಸಿದೆ. ಕಳೆದ ವರ್ಷದ ಮೇ ತಿಂಗಳಿನಿಂದ RBI ರೆಪೋ ದರದಲ್ಲಿ ಶೇ. 2.5 ಏರಿಕೆ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಶೇ. 4 ಕ್ಕೆ ನಿಗಧಿಯಾಗಿದ್ದ ಆರ್ ಬಿಐ ರೆಪೋ ದರ 2023 ರ ಜನವರಿ ವೇಳೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು.

Join Nadunudi News WhatsApp Group

ಇಂದು RBI ರೆಪೋ ದರ ಮತ್ತೆ ಹೆಚಲ ಮಾಡುತ್ತದೆ ಎಂದು ಹೇಳ್ಲಗುತ್ತಿತ್ತು, ಆದರೆ ಸಾಲಗಳ ಹೊರಎ ಹೆಚ್ಚಾಗಬಾರದು ಅನ್ನುವ ಉದ್ದೇಶದಿಂದ RBI ರೆಪೋ ದರದಲ್ಲಿ ಯಥಾಸ್ಥಿತಿಯನ್ನ ಕಾಯ್ದುಕೊಂಡಿದೆ.

New Repo Rate 2023
Image Source: Vistara News

ಸಾಲಗಳ ಬಡ್ಡಿದರ ಹೆಚ್ಚಾಗಲಿಲ್ಲ
2023 ರ ಜನವರಿ ವೇಳೆಯಲ್ಲಿ ಆರ್ ಬಿಐ ರೆಪೋ ದರ ಶೇ. 6.50 ಕ್ಕೆ ಏರಿಕೆಯಾಗಿದೆ. ಈ ರೆಪೋ ದರಗಳ ಹೆಚ್ಚಳ ಗೃಹ ಸಾಲ ಮತ್ತು ವಾಹನ ಸಾಲಗಳ ಮೇಲು ದೊಡ್ಡ ರೀತಿಯಲ್ಲಿ ಪರಿಣಾಮ ಬೀರಲಿದೆ. ಇದೀಗ ಹಣದುಬ್ಬರವು ಶೇ. 6 ಕಿಂತ ಹೆಚ್ಚಿದೆ.

ಈ ಕಾರಣದಿಂದಾಗಿ ಆರ್ ಬಿಐ ತನ್ನ ತನ್ನ ರೆಪೋ ದರವನ್ನು ಮತ್ತೆ 0.25 ರಷ್ಟು ಹೆಚ್ಚಿಸುವ ಸಾಧ್ಯತೆ ಎಂದು ಹೇಳಲಾಗುತ್ತಿತ್ತು, ಆದರೆ ಈಗ RBI ರೆಪೋ ದರದಲ್ಲಿ ಯಾವುದೇ ರೀತಿಯ ಏರಿಕೆ ಮಾಡಿಲ್ಲ. RBI ರೆಪೋ ದರ ಹೆಚ್ಚಾದರೆ ಬ್ಯಾಂಕ್ ಗಳ ಸಾಲದ ದರಗಳು ಕೂಡ ಹೆಚ್ಚಾಗುತ್ತದೆ.

New Repo Rate 2023
Image Source: India Today

Join Nadunudi News WhatsApp Group