HSRP 2024: HSRP ನಂಬರ್ ಪ್ಲೇಟ್ ಅಳವಡಿಸುವುದು ಹೇಗೆ…? ವಾಹನ ಇದ್ದವರು ಫೆಬ್ರವರಿ 17 ರೊಳಗೆ ಕೆಲಸ ಮುಗಿಸಿ

ವಾಹನ ಮಾಲೀಕರಿಗೆ ಫೆಬ್ರವರಿ 17 ಕೊನೆಯ ದಿನಾಂಕ, ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಲು ಇಲ್ಲಿದೆ ಸುಲಭ ಮಾರ್ಗ.

HSRP Number Plate Update: ಸದ್ಯ ವಾಹನ ಮಾಲೀಕರಿಗೆ HSRP Number Plate ಅಳವಡಿಕೆಯನ್ನು ಸಾರಿಗೆ ಇಲಾಖೆ ಕಡ್ಡಾಯಗೊಳಿಸಿದೆ. ಎಲ್ಲ ವಾಹನ ಮಾಲೀಕರು ನಿಗದಿತ ಸಮಯದೊಳಗೆ ನಂಬರ್ ಪ್ಲೇಟ್ ಅಳವಡಿಸುವುದು ಅಗತ್ಯವಾಗಿದೆ.

ಈ ಹಿಂದೆ HSRP ಅಳವಡಿಕೆಗೆ ನವೆಂಬರ್ 17 ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಸಾರಿಗೆ ಇಲಾಖೆ ಈ ದಿನಾಂಕವನ್ನು ವಿಸ್ತರಿಸಿದ್ದು ಮತ್ತೆ ಮೂರು ತಿಂಗಳುಗಳ ಕಾಲ ಸಮಯಾವಕಾಶವನ್ನು ನೀಡಿದೆ. ನೀವು ಯಾವುದೇ ಕಚೇರಿಗೆ ಭೇಟಿ ನೀಡದೆ ಮನೆಯಲ್ಲಿಯೇ ಕುಳಿತು ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳಬಹುದು. ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಲು ಇಲ್ಲಿದೆ ಸುಲಭ ಮಾರ್ಗ.

HSRP Number Plate Latest Update
Image Credit: Justdial

ವಾಹನ ಮಾಲೀಕರಿಗೆ ಫೆಬ್ರವರಿ 17 ಕೊನೆಯ ದಿನಾಂಕ
ಇನ್ನು 2019 ಏಪ್ರಿಲ್ 1 ರ ನಂತರ ನೋಂದಣಿಯಾಗಿರುವ ವಾಹನಗಳಲ್ಲಿ ಈಗಾಗಲೇ ಅತಿ ಸುರಕ್ಷತೆಯ ನೋಂದಣಿ ಫಲಕವನ್ನು ಅಳವಡಿಸಲಾಗಿದೆ. ಹೀಗಾಗಿ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಫೆಬ್ರವರಿ 17 ರೊಳಗೆ High Security Registration Plate (HSRP) ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. HSRP ಅಳವಡಿಸದಿದ್ದರೆ ಅಂತಹ ವಾಹನದ ಮಾಲೀಕರಿಗೆ 500 ರಿಂದ 1000 ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದೆ.

ಎಚ್‌ಎಸ್‌ಆರ್‌ಪಿ ನೋಂದಣಿ ಫಲಕಗಳು ಹೆಚ್ಚು ಸುರಕ್ಷಿತವಾಗಿರುತ್ತವೆ ಮತ್ತು ಅವುಗಳನ್ನು ಬದಲಾಯಿಸಲು ಅಥವಾ ತಿದ್ದಲು ಸಾಧ್ಯವಿಲ್ಲ. ನಂಬರ್ ಪ್ಲೇಟ್‌ ನ ಒಂದು ಬದಿಯು ನೀಲಿ ಚಕ್ರವನ್ನು ಹೋಲುವ ಹೋಲೋಗ್ರಾಮ್ ಹೊಂದಿದೆ. ಇದರ ಕೆಳಗೆ 10-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಇರಲಿದೆ. HSRP ಅಲ್ಯೂಮಿನಿಯಂ ಲೋಹದಿಂದ ಮಾಡಲ್ಪಟ್ಟಿದೆ ಮತ್ತು ವಾಹನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಸ್ಕ್ಯಾನ್ ಮಾಡಬಹುದಾದ ಲೇಸರ್ ಕೋಡ್ ಅನ್ನು ಹೊಂದಿದೆ.

HSRP Number Plate Latest
Image Credit: Spinny

ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಲು ಇಲ್ಲಿದೆ ಸುಲಭ ಮಾರ್ಗ
*https:transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ಬುಕ್ HSRP ಕ್ಲಿಕ್ ಮಾಡಿ.

Join Nadunudi News WhatsApp Group

*ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.

*ವಾಹನದ ಮೂಲ ವಿವರವನ್ನು ಭರ್ತಿ ಮಾಡಬೇಕು.

*ನಿಮಗೆ ಅನುಕೂಲವಾಗುವ ಡೀಲರ್ಸ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.

*ಶುಲ್ಕ ವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

*ನಂತರ ಮಾಲೀಕರ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

*ನಿಮಗೆ ಬೇಕಾದ ದಿನಾಂಕ, ಸ್ಥಳ, ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು.

*ಮಾಲೀಕರು HSRP ಯನ್ನು ಅಂಟಿಸಲು ವಾಹನ ತಯಾರಕರು ಅಥವಾ ಡೀಲರ್ ಗೆ ಭೇಟಿ ನೀಡಬೇಕು.

Join Nadunudi News WhatsApp Group