Bank Merge: ಶೀಘ್ರದಲ್ಲಿ ವಿಲೀನವಾಗಲಿದೆ ದೇಶದ ಇನ್ನೊಂದು ಪ್ರತಿಷ್ಠಿತ ಬ್ಯಾಂಕ್, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ

ಶೀಘ್ರದಲ್ಲಿ ದೇಶದ ಇನ್ನೊಂದು ಬ್ಯಾಂಕ್ ವಿಲೀನವಾಗಲಿದೆ

IDFC First Bank And IDFC Limited Merger: ಪ್ರಸ್ತುತ ದೇಶದಲ್ಲಿ ಕೆಲವು ಪ್ರತಿಷ್ಠಿತ ಬ್ಯಾಂಕ್ ಗಳು ವಿಲೀನವಾಗುತ್ತಿದೆ. ಈಗಾಗಲೇ ದೇಶದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ಬ್ಯಾಂಕ್ ಹಾಗೂ HDFC Ltd ಜುಲೈ 1 ರಿಂದಲೇ ವಿಲೀನವಾಗಿದೆ. ಈ ವಿಲೀನ ಪ್ರಕ್ರಿಯೆ ಬಳಿಕ ಕಳೆದ ಎರಡು ತಿಂಗಳಿನಲ್ಲಿ ಬ್ಯಾಂಕ್ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ಜಾರಿಗೊಳಿಸಲಾಗಿದೆ.

ಇದೀಗ HDFC ಬ್ಯಾಂಕ್ ವಿಲೀನದ ನಂತರ ಇನ್ನೆರಡು ಬ್ಯಾಂಕ್ ಗಳು ವಿಲೀನವಾಗಲಿದೆ. ಹೌದು ಎರಡು ಬ್ಯಾಂಕುಗಳು ಈಗ ವಿಲೀನವಾಗಲಿದ್ದು ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಹೇಳಬಹುದು. ವಿಲೀನವಾಗುತ್ತಿರುವ ಈ ಎರಡು ಬ್ಯಾಂಕ್ ಗಳ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

IDFC First Bank And IDFC Limited
Image Credit: Business-standard

ಶೀಘ್ರದಲ್ಲಿ ವಿಲೀನವಾಗಲಿದೆ ದೇಶದ ಇನ್ನೊಂದು ಪ್ರತಿಷ್ಠಿತ ಬ್ಯಾಂಕ್
ಇದೀಗ HDFC ಬ್ಯಾಂಕ್ ವಿಲೀನದ ನಂತರ ದೇಶದ ಮತ್ತೆರೆಡು ಬ್ಯಾಂಕ್ ಗಳು ವಿಲೀನವಾಗಲು ಸಿದ್ಧತೆ ನಡೆಸುತ್ತಿದೆ. ಬ್ಯಾಂಕ್ ವಿಲೀನ ಪ್ರಕ್ರಿಯೆಯು ಕೋಟ್ಯಾಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಬ್ಯಾಂಕ್ ವಿಲೀನ ಪ್ರಕ್ರಿಯೆಯ ನಂತರ ಷೇರುಗಳ ವಹಿವಾಟಿನಲ್ಲಿ ಬಾರಿ ಬದಲಾವಣೆ ಆಗಲಿದೆ.

ನೀವು IDFC First Bank ಮತ್ತು IDFC Limited ಬ್ಯಾಂಕ್ ನ ಗ್ರಾಹಕರಾಗಿದ್ದರೆ ಈ ಸುದ್ದಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ HDFC ಬ್ಯಾಂಕ್ ವಿಲೀನದ ನಂತರ ಇದೀಗ ದೇಶದ ಈ ಎರಡು ಪ್ರತಿಷ್ಠಿತ ಬ್ಯಾಂಕ್ ಗಳು ವಿಲೀನಗೊಳ್ಳಲಿದೆ. IDFC ಲಿಮಿಟೆಡ್ IDFC ಫಸ್ಟ್ ಬ್ಯಾಂಕ್ ಜೊತೆ ವಿಲೀನಗೊಳ್ಳಲಿದೆ.

IDFC First Bank And IDFC Limited Merger
Image Credit: Live Mint

IDFC ಹಾಗೂ IDFC First Bank ವಿಲೀನ
ಇದೀಗ IDFC ಫಸ್ಟ್ ಬ್ಯಾಂಕ್ ಮತ್ತು IDFC ವಿಲೀನಗೊಳ್ಳಲಿದೆ. ಇವೆರಡರ ವಿಲೀನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಡಿಸೆಂಬರ್ 18 ರಂದು ಒಪ್ಪಿಗೆ ನೀಡಿದೆ. ಈ ವರ್ಷದಲ್ಲಿಯೇ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.
ಯಾರು ಎಷ್ಟು ಷೇರುಗಳನ್ನು ಪಡೆಯುತ್ತಾರೆ…?
IDFC ಫಸ್ಟ್ ಬ್ಯಾಂಕ್ ಮತ್ತು IDFC ಲಿಮಿಟೆಡ್ 100:155 ಷೇರು ಹಂಚಿಕೆಯ ಬಗ್ಗೆ ನಿರ್ಧರಿಸಲಾಗಿದೆ. ಈ ಷೇರು ಹಂಚಿಕೆಯ ಪ್ರಕಾರ, IDFC ಲಿಮಿಟೆಡ್ ಪ್ರತಿ 100 ಷೇರಿಗೆ ಬದಲಾಗಿ IDFC ಫಸ್ಟ್ ಬ್ಯಾಂಕ್ ನ 155 ಇಕ್ವಿಟಿ ಷೇರ್ ಸಿಗಲಿದೆ. ಬ್ಯಾಂಕ್ ವಿಲೀನದ ನಂತರ ಪ್ರತಿ ಷೇರಿನ ಮೌಲ್ಯವು ಶೇ. 4.9 ರಷ್ಟು ಹೆಚ್ಚಾಗಿವೆ.

Join Nadunudi News WhatsApp Group

Join Nadunudi News WhatsApp Group