Minors Smartphone: ಪದೇ ಪದೇ ಮಕ್ಕಳು ಮೊಬೈಲ್ ಬಳಸುತ್ತಿದ್ದರೆ ಹೆದರಬೇಡಿ,ಬಂದಿದೆ ಹೊಸ ಸೊಲ್ಯೂಶನ್

ಇತ್ತೀಚೆಗಂಟೆ ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಉಪಯುಕ್ತವಿಲ್ಲದ ಮಾಹಿತಿ ಕೂಡ ತೋರಿಸಲಾಗುತ್ತದೆ.ಆದರೆ ಸಣ್ಣ ಮಕ್ಕಳಿಗೆ ಮೊಬೈಲ್ ಬಳಕೆಯಿಂದ ಉಂಟಾಗುವ ಸಮಸ್ಯೆಯನ್ನು ಎದುರಿಸುವ ಶಕ್ತಿ ಇರುವುದಿಲ್ಲ.

Minors Smartphone Use: ಇತ್ತೀಚಿಗೆ ಮೊಬೈಲ್(Mobile) ಬಳಕೆ ಹೆಚ್ಚುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ದರು ಕೂಡ ಅತಿಯಾಗಿ ಮೊಬೈಲ್ ಅನ್ನು ಬಳಸುತ್ತಿದ್ದಾರೆ. ಇನ್ನು ವಯಸ್ಕರು ಮೊಬೈಲ್ ಬಳಸಿದರೆ ಅದರಿಂದ ಉಂಟಾಗುವ ಪರಿಣಾಮವನ್ನು ಎದುರಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಆದರೆ ಸಣ್ಣ ಮಕ್ಕಳಿಗೆ ಮೊಬೈಲ್ ಬಳಕೆಯಿಂದ ಉಂಟಾಗುವ ಸಮಸ್ಯೆಯನ್ನು ಎದುರಿಸುವ ಶಕ್ತಿ ಇರುವುದಿಲ್ಲ.

ಅತಿಯಾದ ಮೊಬೈಲ್ ಬಳಕೆ ಮಕ್ಕಳ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಹೆಚ್ಚು ಮೊಬೈಲ್ ಬಳಸುದರಿಂದ ಭವಿಷ್ಯದಲ್ಲಿ ಮಕ್ಕಳು ಕಣ್ಣಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಪೋಷಕರು ಎಷ್ಟು ಕಡಿವಾಣ ಹಾಕಿದರೂ ಕೂಡ ಮಕ್ಕಳು ಮೊಬೈಲ್ ಬಳಸದೆ ಇರುವುದಿಲ್ಲ.

Minors Smartphone Use
Image Source: Mashable

ಸ್ಮಾರ್ಟ್ ಫೋನ್ ಬಳಸುತ್ತಿರುವ ಸಣ್ಣ ಮಕ್ಕಳಿಗೆ ಮಹತ್ವದ ಮಾಹಿತಿ
ಹಿಂದಿನ ಕಾಲದಲ್ಲಿ ಹೊರಗಡೆ ಹೋಗಿ ಆತ ಆಡಿದರೆ ಇಂದು ಮೊಬೈಲ್ ನಲ್ಲಿ ಒಳಗೆ ಕುಳಿತು ಎಲ್ಲ ರೀತಿಯ ಆಟವನ್ನು ಆಡಲು ಪ್ರಾರಂಭಿಸಿದ್ದಾರೆ. ಕೆಲ ಮಕ್ಕಳು ಮೊಬೈಲ್ ಇಲ್ಲದೆ ಊಟವನ್ನೇ ಮಾಡುವುದಿಲ್ಲ. ಇತ್ತೀಚೆಗಂಟೆ ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಉಪಯುಕ್ತವಿಲ್ಲದ ಮಾಹಿತಿ ಕೂಡ ತೋರಿಸಲಾಗುತ್ತದೆ.

ಕೆಟ್ಟ ವಿಷಯಗಳು ಸಣ್ಣ ಮಕ್ಕಳ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಅತಿಯಾದ ಮೊಬೈಲ್ ಬೆಳಸುವಿಕೆ ಮಕ್ಕಳ ಬೆಳೆವಣಿಗೆ ತೊಂದರೆಯಾಗುತ್ತದೆ. ಹೀಗಾಗಿ ಇದೀಗ ಸರ್ಕಾರ ಸಣ್ಣ ಮಕ್ಕಳು ಸ್ಮಾರ್ಟ್ ಬಳಕೆಗೆ ಕಡಿವಾಣ ಹಾಕಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಮಕ್ಕಳಿಗಾಗಿ ಹೊಸ ಉಪಾಯವನ್ನು ಹೂಡಿದೆ. ಮಕ್ಕಳು ಮೊಬೈಲ್ ಬಳಸುವುದನ್ನು ಕಡಿಮೆ ಮಾಡುವುದು ಮಕ್ಕಳ ಹಕ್ಕು ಆಯೋಗದ ಉದ್ದೇಶವಾಗಿದೆ.

Minors Smartphone Use
Image Source: Parents

ಅಪ್ರಾಪ್ತ ಮಕ್ಕಳು ಮೊಬೈಲ್ ಬಳಸದೆ ಇರಲು ಬಂದಿದೆ ಹೊಸ ಆಪ್
ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಮಕ್ಕಳ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಹೊಸ ಆಪ್ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ನಿಮ್ಮ ಮಗುವಿಗೆ 18 ವರ್ಷ ಆಗಿಲ್ಲ ಎಂತಾದರೆ ಈ ಆಪ್ ಇದ್ದರೆ ನಿಮ್ಮ ಸ್ಮಾರ್ಟ್ ಫೋನ್ ಬಳಸಲು ಆಗುವುದಿಲ್ಲ. ಮಕ್ಕಳು ಸ್ಮಾರ್ಟ್ ಫೋನ್ ಅನ್ನು ತೆರೆಯಲು ಪ್ರಯತ್ನಿಸಿದಾಗ ಹೊಸ ಆಪ್ ಫೋನ್ ಓಪನ್ ಆಗದಂತೆ ತಡೆಯಲು ಸಹಾಯವಾಗುತ್ತದೆ. ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನಾಗೇಶ್ ಅವರು ಮಾಹಿತಿ ನೀಡಿದ್ದಾರೆ. ಇನ್ನು ಈ ಹೊಸ ಅಪ್ಲಿಕೇಶನ್ ಪರಿಚಯಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು ಸದ್ಯದಲ್ಲೇ ಹೆಚ್ಚಿನ ಅಪ್ಡೇಟ್ ಸಿಗಲಿದೆ.

Join Nadunudi News WhatsApp Group

Join Nadunudi News WhatsApp Group