Income Tax: ಟ್ಯಾಕ್ಸ್ ಕಟ್ಟುವವರಿಗೆ ಕೇಂದ್ರದ ಹೊಸ ಸೂಚನೆ

ಇತ್ತೀಚಿನ ದಿನಗಳಲ್ಲಿ ತೆರಿಗೆ ಸಂಬಂಧಿತ ಅನೇಕ ಅಪ್ಡೇಟ್ ಗಳು ಹೊರಬರುತ್ತಲೇ ಇದೆ. ತೆರಿಗೆ ಪಾವತಿಯಲ್ಲಿ ಸಾಕಷ್ಟು ರೀತಿಯ ನಿಯಮಗಳು ಬದಲಾಗಿವೆ.

Income Tax Return: 2023 ರ ಬಜೆಟ್ ಮಂಡನೆಯ ಸಮಯದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಆದಾಯ ತೆರಿಗೆ ರಿಟರ್ನ್ (Income Tax Return) ಸಲ್ಲಿಕೆಯ ಕುರಿತು ಸಾಕಷ್ಟು ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೆರಿಗೆ ಸಂಬಂಧಿತ ಅನೇಕ ಅಪ್ಡೇಟ್ ಗಳು ಹೊರಬರುತ್ತಲೇ ಇದೆ. ತೆರಿಗೆ ಪಾವತಿಯಲ್ಲಿ ಸಾಕಷ್ಟು ರೀತಿಯ ನಿಯಮಗಳು ಬದಲಾಗಿವೆ.

ಉದ್ಯೋಗಿಗಳು ಮೊದಲ ಬಾರಿಗೆ ಆದಾಯ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಗೊಂದಲಕ್ಕೆ ಒಳಗಾಗುತ್ತಾರೆ. ಆದರೆ ಇ-ಫೈಲಿಂಗ್ ಐಟಿಆರ್ ಪ್ರಕ್ರಿಯೆಯು ಸುಲಭವಾಗಿದೆ. ನೀವು ಮನೆಯಲ್ಲಿ ಕುಳಿತು ಇದನ್ನು ಮಾಡಬಹುದು.

ಆದಾಯ ತೆರಿಗೆ ರಿಟರ್ನ್
ತೆರೆದಾರರು ತೆರಿಗೆ ಪಾವತಿಸುವ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಇನ್ನು ಐಟಿ ರಿಟರ್ನ್ (ITR) ಸಲ್ಲಿಕೆಗೆ ಸಂಬಂಧಿಸಿದಂತೆ ತೆರಿಗೆ ಇಲಾಖೆ ಈಗಾಗಲೇ ಸಾಕಷ್ಟು ಅಪ್ಡೇಟ್ ಗಳನ್ನು ಹೊರಡಿಸಿದೆ. ಇದೀಗ ಐಟಿ ರಿಟರ್ನ್ ಸಲ್ಲಿಕೆಯ ಕುರಿತು ಆದಾಯ ಇಲಾಖೆ ಮಹತ್ವದ ಸೂಚನೆಯನ್ನು ಹೊರಡಿಸಿದೆ.

Income Tax Return
Image Source: India Today

ಆದಾಯ ತೆರಿಗೆ ರಿಟರ್ನ್ ಸಲಿಕೆ ಕಡ್ಡಾಯ
ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ. ಐಟಿ ರಿಟರ್ನ್ ಸಲಿಕೆಯಲ್ಲಿ ಕೂಡ ಆದಾಯ ಇಲಾಖೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಇ ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು. ಐಟಿಆರ್ ಸಲಿಕೆಯಲ್ಲಿ ಇತ್ತೀಚಿಗೆ ಹೊಸ ನಿಯಮಗಳು ಜಾರಿಯಾಗಿವೆ. ನೀವು ತೆರಿಗೆದಾರರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಆದಾಯ ತೆರಿಗೆ ಕಟ್ಟುವವರಿಗೆ ಹೊಸ ಮಾಹಿತಿ
ಡಿಜಿಟಲ್ ಕರೆನ್ಸಿಯ ವರ್ಗಾವಣೆಯಿಂದ ಬರುವ ಆದಾಯ ಅಂದರೆ ಕ್ರಿಪ್ಟೋಗೆ ಶೇಕಡಾ 30 ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಪಾವತಿಯ ಜೊತೆಗೆ ಹೆಚ್ಚುವರಿ ಶುಲ್ಕ ಮತ್ತು ಸೆಸ್ ಕೂಡ ಪಾವತಿಸಬೇಕಾಗುತ್ತದೆ. ಇಂತಹ ಆದಾಯದ ಮೇಲೆ ITR-1 ಅಥವಾ ITR-4 ಅನ್ನು ಸಲ್ಲಿಸಲು ಸಾಧ್ಯವಿಲ್ಲ ಆದರೆ ITR-2 ಅಥವಾ ITR-3 ಫಾರ್ಮ್ ಅನ್ನು ಸಲ್ಲಿಸಬಹುದು.ಹೊಸ ತೆರಿಗೆ ಆಡಳಿತ ವಿಭಾಗ 115BAC ಅಡಿಯಲ್ಲಿ ಐಚ್ಛಿಕ ತೆರಿಗೆ ಆಡಳಿತವನ್ನು ಆಯ್ಕೆ ಮಾಡುವ ಆಯ್ಕೆ ಇದೆ. ಆದರೆ ಸರ್ಕಾರದ ಕಡೆಯಿಂದ ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

Join Nadunudi News WhatsApp Group

Income Tax Return
Image Source: India Today

Join Nadunudi News WhatsApp Group