Tax Payment: ಪ್ರತಿ ತಿಂಗಳು ಸಂಬಳ ಪಡೆಯುವ ವ್ಯಕ್ತಿಗಳು ಆದಾಯ ತೆರಿಗೆ ಹೇಗೆ ಕಟ್ಟಬೇಕು, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಆದಾಯ ತೆರಿಗೆ ಹೇಗೆ ಪಾವತಿಸಬೇಕು ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.

Income Tax New Rule in India: ಹೊಸ ಹಣಕಾಸು ವರ್ಷದ (New Financial Year) ಆರಂಭವಾದ ಬೆನ್ನಲ್ಲೇ ಅನೇಕ ನಿಯಮಗಳಲ್ಲಿ ಬಾರಿ ಬದಲಾವಣೆ ಆಗಿದೆ. ಇನ್ನು ಇತ್ತೀಚಿಗಂತೂ ತೆರಿಗೆ (Tax) ಸಂಬಂಧಿತ ಅನೇಕ ಅಪ್ಡೇಟ್ ಗಳು ಹೊರಬರುತ್ತಲೇ ಇದೆ. ತೆರಿಗೆ ಪಾವತಿಯಲ್ಲಿ ಸಾಕಷ್ಟು ರೀತಿಯ ವಿನಾಯಿತಿಗಳು ಲಭ್ಯವಿದೆ.

ಇದೀಗ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಹೊಸ ಮಾಹಿತಿಯೊಂದು ಲಭಿಸಿದೆ. ಯಾರು ತೆರಿಗೆಯನ್ನು ಕಟ್ಟಬೇಕು ಹಾಗೂ ಯಾರಿಗೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ಸಿಗಲಿದೆ ಎನ್ನುವ ಬಗ್ಗೆ ಇದೀಗ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಮಾಹಿತಿ ನೀಡಿದ್ದಾರೆ. ಆದಾಯ ತೆರಿಗೆ ರಿಟರ್ನ್ ಅನ್ನು ಹೊಸ ತೆರಿಗೆ ಪದ್ಧತಿ ಹಾಗೂ ಹಳೆಯ ತೆರಿಗೆ ಪದ್ದತಿಗಳ ಪ್ರಕಾರ ವಿಧಿಸಲಾಗುತ್ತದೆ.

Income Tax New Rule in India
Image Credit: Livemint

ಆದಾಯ ತೆರಿಗೆ ನಿಯಮ
ಭಾರತದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಫಾರ್ಮ್ 16 ಪ್ರಮುಖ ದಾಖಲೆಯಾಗಿದೆ. ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾದ ಟಿಡಿಎಸ್ ಮತ್ತು ಸಂಬಳದ ಅಂಶದ ವಿವರಗಳೊಂದಿಗೆ ಉದ್ಯೋಗದಾತರು ಉದ್ಯೋಗಿಗಳಿಗೆ ಒದಗಿಸುತ್ತಾರೆ.

ಆದಾಯ ತೆರಿಗೆ ನಿಯಮಗಳ ಪ್ರಕಾರ ಪ್ರತಿಯೊಬ್ಬ ಉದ್ಯೋಗದಾತರು ಟಿಡಿಎಸ್ ಗೆ ಒಳಪಟ್ಟಿರುವ ಆದಾಯ ಹೊಂದಿರುವ ಉದ್ಯೋಗಿಗಳಿಗೆ ಫಾರ್ಮ್ 16 ಅನ್ನು ನೀಡಬೇಕು. ಫಾರ್ಮ್ 16 ಅನ್ನು ನೀಡದಿರುವ ನಿದರ್ಶನಗಳು ಇರಬಹುದು. ಒಬ್ಬ ವ್ಯಕ್ತಿಗೆ ಫಾರ್ಮ್ 16 ಅನ್ನು ಒದಗಿಸದಿದ್ದರೆ ಅವನು ಇನ್ನು ಆದಾಯ ತೆರಿಯೆ ರಿಟರ್ನ್ ಅನ್ನು ಸಲ್ಲಿಸಬಹುದು.

Income Tax New Rule in India
Image Credit: News18

ಆದಾಯ ತೆರಿಗೆ ರಿಟರ್ನ್
ಫಾರ್ಮ್ 16 ಇಲ್ಲದೆಯೂ ಐಟಿಆರ್ ಸಲ್ಲಿಸಲು ಸಾಧ್ಯವಿದೆ. 2023-24 ರ ಮೌಲ್ಯಮಾಪನ ವರ್ಷಕ್ಕೆ ಫಾರ್ಮ್ 16 ಇಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಿದೆ ಎಂದು ತೆರಿಗೆ ತಜ್ಞರು ದೃಢಪಡಿಸಿದ್ದಾರೆ.

Join Nadunudi News WhatsApp Group

ಫಾರ್ಮ್ 16 ಅನ್ನು ಸಾಮಾನ್ಯವಾಗಿ ಸಂಬಳ ಪಡೆಯುವ ಉದ್ಯೋಗಿಗಳ ಪ್ರಕ್ರಿಯೆಯನ್ನು ಸರಳಗೊಳಿಸಲು ಬಳಸುತ್ತಾರೆ. ಫಾರ್ಮ್ 16 ರ ಅನುಪಸ್ಥಿತಿಯಲ್ಲಿ ವ್ಯಕ್ತಿಗಳು ತಮ್ಮ ಐಟಿಆರ್ ಅನ್ನು ಪಾವತಿ ಸ್ಲಿಪ್ ಗಳು ಫಾರ್ಮ್ 26 AS ನಂತಹ ಇತರ ದಾಖಲೆಗಳನ್ನು ಬಳಸಿಕೊಂಡು ಹೂಡಿಕೆ ದಾಖಲೆಯೊಂದಿಗೆ ಕಡಿತವನ್ನು ಕ್ಲೈಮ್ ಮಾಡಲು ಸಲ್ಲಿಸಬಹುದು.

Join Nadunudi News WhatsApp Group