Tax India: ಇಂತಹ ಹಣಕ್ಕೆ ಕಟ್ಟಬೇಕು 60% ತೆರಿಗೆ, ಆದಾಯ ತೆರಿಗೆ ಇಲಾಖೆಯ ಬಿಗ್ ಅಪ್ಡೇಟ್.

ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯ ಬಿಗ್ ಅಪ್ಡೇಟ್, ನಗದು ವಹಿವಾಟುಗಳಿಗೆ ಕಟ್ಟಬೇಕು 60% ತೆರಿಗೆ.

Income Tax New Update 2023: ಇತ್ತೀಚಿನ ದಿನಗಳಲ್ಲಿ ಆದಾಯ ಇಲಾಖೆ ತೆರಿಗೆಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitaraman) ಅವರು ತೆರಿಗೆ ಸಂಬಂಧಿತ ಅನೇಕ ಬದಲಾವಣೆಯನ್ನು ಪರಿಚಯಿಸಿದ್ದಾರೆ.

ಇನ್ನು ತೆರಿಗೆ (Tax) ಪಾವತಿದಾರರಿಗೆ ಕೆಲವು ಆದಾಯಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತಿದೆ. ಇನ್ನು ಇತ್ತೀಚೆಗಷ್ಟೇ ಆರ್ ಬಿಐ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆದಿದೆ. ಈ ನಿಟ್ಟಿನಲ್ಲಿ ಜನರು ತಮ್ಮ ಬಳಿ ಇರುವ ಹಣವನ್ನು ಠೇವಣಿ ಅಥವಾ ವಿನಿಮಯ ಮಾಡುವಲ್ಲಿ ತೊಡಗಿದ್ದಾರೆ. ಇನ್ನು ಸೆಪ್ಟೆಂಬರ್ 30 ರವರೆಗೆ ಠೇವಣಿ ಅಥವಾ ವಿನಿಮಯ ಪ್ರಕ್ರಿಯೆಗೆ ಸರ್ಕಾರ ಸಮಯಾವಕಾಶವನ್ನು ನೀಡಿದೆ.

ನೀವು ಒಂದು ದಿನದಲ್ಲಿ 20,000 ಹಣವನ್ನು ವಿನಿಮಯ ಮಾಡಬಹುದಾಗಿದೆ. ಇದೀಗ ಆದಾಯ ಇಲಾಖೆ ನಗದು ಠೇವಣಿ ಮತ್ತು ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. 

Income Tax Department's Big Update for Tax Payers
Image Credit: outlookmoney

ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯ ಬಿಗ್ ಅಪ್ಡೇಟ್
ಆದಾಯ ತೆರಿಗೆ ಕೌಯ್ದೆಯ ಪ್ರಕಾರ, ಬ್ಯಾಂಕಿನಲ್ಲಿ ನಗದು ಠೇವಣಿ ಮತ್ತು ಹಿಂಪಡೆಯುವ ಮಿತಿಗಳು ಹಾಗೆ ಕೆಲವು ವಹಿವಾಟುಗಳನ್ನು ನಿರ್ದಿಷ್ಟ ಹಣಕಾಸಿನ ವಹಿವಾಟು ಎಂದು ಪರಿಗಣಿಸಲಾಗುತ್ತದೆ.

ಒಬ್ಬ ವ್ಯಕ್ತಿಯು ತನ್ನ ಉಳಿತಾಯ ಖಾತೆಯಲ್ಲಿ ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಪಾಯಿ ಹಣವನ್ನು ಠೇವಣಿ ಮಾಡಿದರೆ, ಅಂತಹ ವ್ಯವಹಾರಗಳ ಬಗ್ಗೆ ಬ್ಯಾಂಕ್ ಗೆ ವರದಿ ಮಾಡಬೇಕಾಗುತ್ತದೆ. ಮತ್ತೊಂದೆಡೆ, ಒಬ್ಬ ವ್ಯಕ್ತಿಯು ಆರ್ಥಿಕ ವರ್ಷದಲ್ಲಿ 50 ಲಕ್ಷ ರೂಪಾಯಿಗಳನ್ನು ಚಾಲ್ತಿ ಖಾತೆಯಲ್ಲಿ ಠೇವಣಿ ಮಾಡಿದರೆ, ಅಂತಹ ವಹಿವಾಟುಗಳನ್ನು ಬ್ಯಾಂಕ್ ವರದಿ ಮಾಡಬೇಕಾಗುತ್ತದೆ.

Join Nadunudi News WhatsApp Group

Income Tax Department's Big Update for Tax Payers
Image Credit: businesstoday

ತೆರಿಗೆ ನಿಯಮವನ್ನು ಪಾಲಿಸದಿದ್ದರೆ ಕಟ್ಟಬೇಕು ಹೆಚ್ಚಿನ ದಂಡ
ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 194N ನ ಪ್ರಕಾರ, ನಿರ್ಧಿಷ್ಟ ಮಿತಿಯನ್ನು ಮೀರಿ ನಗದು ಹಿಂಪಡೆಯುವಿಕೆಯ ಮೇಲೆ TDS ಅನ್ನು ಕಡಿತಗೊಳಿಸಲಾಗುತ್ತದೆ. ಕಳೆದ ಮೂರು ವರ್ಷಗಳಿಂದ ನಿರತ್ನರವಾಗಿ ITR ಸಲ್ಲಿಸುತ್ತಿದ್ದರೆ ಆರ್ಥಿಕ ವರ್ಷದಲ್ಲಿ 1 ಕೋಟಿಗಿಂತ ಹೆಚ್ಚಿನ ಹಣವನ್ನು ಹಿಂತೆಗುದುಕೊಂಡಾಗ ಶೇ. 2 ರಷ್ಟು TDS ಅನ್ನು ಕಡಿತಗೊಳಿಸಲಾಗುತ್ತದೆ.

ಇಂತಹ ಹಣಕ್ಕೆ ಕಟ್ಟಬೇಕು 60 % ತೆರಿಗೆ
ಇನ್ನು ಆರ್ಥಿಕ ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚು ಹಣವನ್ನು ವಿತ್ ಡ್ರಾ ಮಾಡಲು 2 % TDS ಮತ್ತು ಒಂದು ಕೋಟಿಗಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು 5 % TDS ಅನ್ನು ಕಡಿತಗೊಳಿಸಲಾಗುತ್ತದೆ.

Income Tax Department's Big Update for Tax Payers
Image Credit: news18

ಬ್ಯಾಂಕಿನಲ್ಲಿ ಇರಿಸಿದ ಹಣದ ಮೂಲದ ಬಗ್ಗೆ ಆದಾಯ ಇಲಾಖೆಗೆ ಮಾಹಿತಿ ನೀಡಬೇಕು. ಆದಾಯ ತೆರಿಗೆ ಇಲಾಖೆಗೆ ಹಣದ ಮೂಲದ ಮಾಹಿತಿಯನ್ನು ನೀಡದಿದ್ದರೆ ಬ್ಯಾಂಕಿನಲ್ಲಿ ಇರಿಸಿದ ಮೊತ್ತದ 60 ಪ್ರತಿಶತ ತೆರಿಗೆ, ಪ್ರತಿಶತ ಹೆಚ್ಚುವರಿ ಶುಲ್ಕ ಮತ್ತು 4 ಪ್ರತಿಶತ ಸೆಸ್ ಅನ್ನು ವಿಧಿಸಲಾಗುತ್ತದೆ.

Join Nadunudi News WhatsApp Group