Income Tax File: ಇಷ್ಟು ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ಇಲ್ಲ, ಕೇಂದ್ರ ಸರ್ಕಾರದ ನಿಯಮ.

ಇಷ್ಟು ಆದಾಯಗಳಿಗೆ ಯಾವುದೇ ರೀತಿಯ ತೆರಿಗೆ ಕಟ್ಟುವ ಅಗತ್ಯ ಇಲ್ಲ ಎಂದು ತೆರಿಗೆ ಇಲಾಖೆ ತಿಳಿಸಿದೆ.

Income Tax Reduction 2023: 2023 ರ ಬಜೆಟ್ ಮಂಡನೆಯ ಸಮಯದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಆದಾಯ ತೆರಿಗೆ ರಿಟರ್ನ್ (Income Tax Return) ಸಲ್ಲಿಕೆಯ ಕುರಿತು ಸಾಕಷ್ಟು ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೆರಿಗೆ ಸಂಬಂಧಿತ ಅನೇಕ ಅಪ್ಡೇಟ್ ಗಳು ಹೊರಬರುತ್ತಲೇ ಇದೆ.

ತೆರಿಗೆ ಪಾವತಿಯಲ್ಲಿ ಸಾಕಷ್ಟು ರೀತಿಯ ನಿಯಮಗಳು ಬದಲಾಗಿವೆ. ಇದೀಗ ಆದಾಯ ತೆರಿಗೆ ಸಂಭಂದಿಸಿದಂತೆ ನಿರ್ಮಲ ಸೀತಾರಾಮನ್ ಮಹತ್ವದ ಘೋಷಣೆಯನ್ನು ಹೊರಡಿಸಿದ್ದಾರೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಲ್ಲಿ ಮಹತ್ವದ ಸೂಚನೆಯನ್ನು ನೀಡಿದ್ದಾರೆ.

The tax department said that there is no need to pay any kind of tax on this income.
Image Credit: thehindu

ಹೊಸ ತೆರಿಗೆ ಪದ್ದತಿಯಲ್ಲಿ ಅನೇಕ ಬದಲಾವಣೆ ತಂದ ನಿರ್ಮಲ ಸೀತಾರಾಮನ್
2023 ರ ಬಜೆಟ್ ಮಂಡಿಸುವಾಗ ಆದಾಯ ತೆರಿಗೆ ಪಾವತಿಯಲ್ಲಿ ಸಾಕಷ್ಟು ನಿಯಮಗಳನ್ನು ಬದಲಾಯಿಸಲಾಗಿದೆ. ಈ ಬದಲಾವಣೆಯ ಅಡಿಯಲ್ಲಿ ತೆರಿಗೆ ಸ್ಲ್ಯಾಬ್ ಅನ್ನು ಹೆಚ್ಚಿಸಲಾಗಿದೆ. ಈ ಹಿಂದೆ ವಾರ್ಷಿಕ 2.5 ಲಕ್ಷ ಆದಾಯದ ಮೇಲೆ ಯಾವುದೇ ರೀತಿಯ್ ತೆರಿಗೆ ಸ್ಲ್ಯಾಬ್ ಇರಲಿಲ್ಲ.

ಹೊಸ ತೆರಿಗೆ ಪದ್ದತಿಯಲ್ಲಿ ಅದನ್ನು ವಾರ್ಷಿಕವಾಗಿ 3 ಲಕ್ಷಕ್ಕೆ ಹೆಚ್ಚಲಾಗಿದೆ. ಅಂದರೆ ವಾರ್ಷಿಕ ಮೂರು ಲಕ್ಷ ರೂಪಾಯಿಗಳ ಆದಾಯದ ಮೇಲೆ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಶೂನ್ಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

Central Government has implemented many concessions in the Tax Act 2023
Image Credit: livelaw

ಹೊಸ ತೆರಿಗೆ ಪದ್ದತಿಯಲ್ಲಿ ರಿಯಾಯಿತಿ
ಇನ್ನು ಹೊಸ ತೆರಿಗೆ ಪದ್ದತಿಯಲ್ಲಿ ನಿರ್ಮಲ ಸೀತಾರಾಮನ್ ತೆರಿಗೆ ರಿಯಾಯಿತಿಯನ್ನು ಕೂಡ ಘೋಷಿಸಿದ್ದಾರೆ. ಹೊಸ ತೆರಿಗೆ ಪದ್ದತಿಯಲ್ಲಿ ತೆರಿಗೆ ರಿಯಾಯಿತಿಯ ಮಿತಿಯನ್ನು 7 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ಆದಾಯ ರಿಟರ್ನ್ ಸಲ್ಲಿಕೆ ಮಾಡುವವರಿಗೆ ವಾರ್ಷಿಕವಾಗಿ 7 ಲಕ್ಷದ ವರೆಗೆ ರಿಯಾಯಿತಿ ಪಡೆಯಬಹುದು. ಈ ಕಾರಣದಿಂದಾಗಿ ತೆರಿಗೆದಾರರು ತೆರಿಗೆ ಪಾವತಿಸಬೇಕೆಂದಿಲ್ಲ.

Join Nadunudi News WhatsApp Group

ಇನ್ನು ಕೇಂದ್ರದ ಮೋದಿ ಸರ್ಕಾರ ಮೊತ್ತೊಂದು ಘೋಷಣೆಯನ್ನು ಹೊರಡಿಸಿದೆ. ವೇತನದಾರರಿಗೆ 50 ಸಾವಿರ ರೂ. ಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ನಿಂದಾಗಿ ಜನರಿಗೆ ಹೆಚ್ಚಿನ ಲಾಭ ಲಭಿಸಿದೆ. ಈ ಕಾರಣದಿಂದಾಗಿ ಜನರು ವಾರ್ಷಿಕವಾಗಿ 7.5 ಲಕ್ಷ ರೂ. ವರೆಗೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸುವ ಅವಶ್ಯಕತೆ ಇಲ್ಲ.

Join Nadunudi News WhatsApp Group