Income Tax Fine: ಆದಾಯ ತೆರಿಗೆ ಕಟ್ಟುವವರಿಗೆ 10,000 ರೂ ದಂಡ, ಕೇಂದ್ರ ಸರ್ಕಾರದ ಆದೇಶ.

ಗಡುವು ಮುಗಿದ ನಂತರ ಆದಾಯ ತೆರಿಗೆ ಪಾವತಿ ಮಾಡಿದರೆ ಕಟ್ಟಬೇಕು ೧೦೦೦೦ ರೂಪಾಯಿ ದಂಡ.

Income Tax Return Deadline Fine: ಇತ್ತೀಚಿನ ದಿನಗಳಲ್ಲಿ ತೆರಿಗೆ (Income Tax) ಸಂಬಂಧಿತ ಅನೇಕ ಅಪ್ಡೇಟ್ ಗಳು ಹೊರಬರುತ್ತಲೇ ಇದೆ. ಹೊಸ ಹಣಕಾಸು ವರ್ಷದ (New Financial Year) ಆರಂಭವಾದ ಬೆನ್ನಲ್ಲೇ ಅನೇಕ ನಿಯಮಗಳಲ್ಲಿ ಬಾರಿ ಬದಲಾವಣೆ ಆಗಿದೆ.

ತೆರಿಗೆ ಪಾವತಿಯಲ್ಲಿ ಸಾಕಷ್ಟು ರೀತಿಯ ನಿಯಮಗಳು ಬದಲಾಗಿವೆ. ಇದೀಗ ಆದಾಯ ತೆರಿಗೆ ಸಂಭಂದಿಸಿದಂತೆ ನಿರ್ಮಲ ಸೀತಾರಾಮನ್ (Nirmala Sitharaman) ಮಹತ್ವದ ಘೋಷಣೆಯನ್ನು ಹೊರಡಿಸಿದ್ದಾರೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಲ್ಲಿ ಮಹತ್ವದ ಸೂಚನೆಯನ್ನು ನೀಡಿದ್ದಾರೆ.

10000 rupees penalty for not paying income tax within the last date
Image Credit: theprint

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ
ಇನ್ನು ಆದಾಯ ತೆರಿಗೆ ರಿಟರ್ನ್ (Income Tax Return) ಅನ್ನು ಸಲ್ಲಿಕೆಗೆ ಸಂಬಂಧಿಸಿದಂತೆ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಜುಲೈ 31 ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಜುಲೈ 31 ರ ವಳಗೆ ಆದಾಯ ರಿಟರ್ನ್ ಅನ್ನು ಸಲ್ಲಿಸುವುದು ಅನಿವಾರ್ಯವಾಗಿದೆ. 2022 -23 ಹಣಕಾಸು ವರ್ಷಕ್ಕೆ ಜುಲೈ 31 ರ ವಳಗೆ ಲೆಕ್ಕಪರಿಶೋದನೆಯ ಅಗತ್ಯವಿಲ್ಲದ ಅಂತಹ ಸಂಬಳದ ವರ್ಗದ ಪರವಾಗಿ ITR ಅನ್ನು ಭರ್ತಿ ಮಾಡಲಾಗುತ್ತದೆ.

If the tax is not paid by July 31, a penalty of up to Rs 10,000 will have to be paid.
Image Credit: livelaw

ಐಟಿಆರ್ ಸಲ್ಲಿಕೆ ಆಗದಿದ್ದರೆ ದಂಡ
ಐಟಿಆರ್ ಸಲ್ಲಿಕೆ ನಿಗದಿತ ಸಮಯದೊಳಗೆ ಆಗದಿದ್ದರೆ ತೆರಿಗೆ ಇಲಾಖೆಯು ದಂಡವನ್ನು ವಿಧಿಸುತ್ತದೆ. ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ಪ್ರಕಾರ, ನಿಗದಿತ ಸಮಯದೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಆಗದಿದ್ದರೆ, ತಡವಾದ ITR ಫೈಲಿಂಗ್ ಗೆ 5,000 ರೂ. ದಂಡವನ್ನು ವಿಧಿಸಲಾಗುತ್ತದೆ.

Join Nadunudi News WhatsApp Group

ಕೊನೆಯ ದಿನಾಂಕದೊಳಗೆ ITR ಫೈಲಿಂಗ್ ಆಗದಿದ್ದರೆ 10,000 ರೂಪಾಯಿ ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ITR ಸಲ್ಲಿಕೆ ಕ್ರಮವಾಗಿ ಮಾಡುವುದರಿಂದ ಯಾವುದೇ ರೀತಿಯ ಸಾಲವನ್ನು ಪಡೆಯಲು ಇದು ಸಹಾಯವಾಗುತ್ತದೆ. ಐಟಿಆರ್ ಸಲ್ಲಿಕೆಯಲ್ಲಿ ಸರ್ಕಾರವು ಕೆಲವು ಕಡಿತಗಳನ್ನು ಅನುಮತಿಸುತ್ತವೆ. ಈ ಕಡಿತವು ತೆರಿಗೆದಾರರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

Join Nadunudi News WhatsApp Group