ITR Filing: ಸತ್ತ ವ್ಯಕ್ತಿಗೂ ಕಟ್ಟಬೇಕು ಆದಾಯ ತೆರಿಗೆ, ಆದಾಯ ತೆರಿಗೆ ಇಲಾಖೆಯ ಮಾರ್ಗಸೂಚಿ ಪ್ರಕಟ.

ವ್ಯಕ್ತಿ ಮರಣ ಹೊಂದಿದ ನಂತರವೂ ಕಟ್ಟಬೇಕು ಆದಾಯ ತೆರಿಗೆ, ತೆರಿಗೆ ಕಟ್ಟುವ ತಿಳಿದುಕೊಳ್ಳಿ.

Income Tax Return Update: ಆದಾಯ ತೆರಿಗೆ ಇಲಾಖೆಯು ಐಟಿಆರ್ (ITR) ಸಲ್ಲಿಕೆಯಲ್ಲಿ ಅನೇಕ ನಿಯಮವನ್ನು ಬದಲಿಸಿದೆ. ಇನ್ನು ಇತ್ತೀಚಿಗೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ತೆರಿಗೆ ಪಾವತಿದಾರರಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದರು. ಇನ್ನು ಕೆಲವೊಮ್ಮೆ ಕೆಲವು ಆದಾಯದ ಮೇಲಿನ ತೆರಿಗೆಯು ಶೂನ್ಯವಾಗಿರುತ್ತದೆ.

ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಲಭ್ಯವಿರುವ ತೆರಿಗೆ ಕಡಿತ ಹಾಗೂ ತೆರಿಗೆ ವಿನಾಯಿತಿಗಳ ಬಗ್ಗೆ ಮಾಹಿತಿ ತಿಳಿದುಕೊಂಡು ತೆರಿಗೆ ಪಾವತಿ ಮಾಡುವುದು ಸೂಕ್ತ. ಇನ್ನು ಸತ್ತ ವ್ಯಕ್ತಿಯು ಆದಾಯ ರಿಟರ್ನ್ ಸಲ್ಲಿಸಬೇಕೇ ಅಥವಾ ಇಲ್ಲವ ಎನ್ನುವ ಬಗ್ಗೆ ಆದಾಯ ಇಲಾಖೆ ಮಾಹಿತಿಯನ್ನು ನೀಡಿದೆ.

Income tax department guidelines published.
Image Credit: Zeenews

ಸತ್ತ ವ್ಯಕ್ತಿಗೂ ಕಟ್ಟಬೇಕು ಆದಾಯ ತೆರಿಗೆ
ಆದಾಯ ತೆರಿಗೆ ರಿಟರ್ನ್ ಪಾವತಿದಾರರು ತೆರಿಗೆಯ ನಿಯಮಗಳ ಬಗ್ಗೆ ಮಾಹಿತಿ ತಿಳಿದಿರಬೇಕು. ಆದಾಯ ತೆರಿಗೆ ಇಲಾಖೆಯ ನಿಯಮದ ಪ್ರಕಾರ ಸತ್ತ ವ್ಯಕ್ತಿಗೂ ಆದಾಯ ತೆರಿಗೆಯನ್ನು ಕಟ್ಟಬೇಕು.

ಒಬ್ಬ ವ್ಯಕ್ತಿಯ ಮರಣದ ನಂತರವೂ ಅವನ ಆದಾಯವನ್ನು ಲೆಕ್ಕಹಾಕಿ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯು ಮರಣದ ನಂತರವೂ ಯಾವುದೇ ಆದಾಯವನ್ನು ಹೊಂದಿದ್ದರೆ ಅವರ ಹೆಸರಿನಲ್ಲಿ ಆದಾಯ ತೆರಿಗೆ ರಿಟರ್ನ್ ಆದಾಯ ಇಲಾಖೆಯು ಸೌಲಭ್ಯವನ್ನು ನೀಡುತ್ತದೆ.

ವ್ಯಕ್ತಿಯ ಮರಣದ ನಂತರ ಅವರ ITR ಅನ್ನು ಯಾರು ಸಲ್ಲಿಸಬಹುದು
ವ್ಯಕ್ತಿಯು ಮರಣ ಹೊಂದಿದ ನಂತರ ಆದಾಯ ತೆರಿಗೆ ರಿಟರ್ನ್ ಅನ್ನು ಅವನ ಕಾನೂನುಬದ್ಧ ಉತ್ತರಾಧಿಕಾರಿ ಸಲ್ಲಿಸಬಹುದು. ಇನ್ನು ಆದಾಯ ತೆರಿಗೆ ರಿಟರ್ನ್ ಅನ್ನು ಮನೆಯಲ್ಲಿಯೇ ಕುಳಿತು ಸಲ್ಲಿಸಬಹುದು. ಮೃತ ವ್ಯಕ್ತಿಯ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು, ಮೊದಲನೆಯದಾಗಿ ನೀವು ಅವನನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕು.
ಉತ್ತರಾಧಿಕಾರಿಯು ಮೊದಲು ತನ್ನನ್ನು ನೋಂದಾಯಿಸಿಕೊಳ್ಳಬೇಕು.

Join Nadunudi News WhatsApp Group

Income tax department guidelines published.
Image Credit: Livemint

ಉತ್ತರಾಧಿಕಾರಿ ನೋಂದಾಯಿಸಿಕೊಂಡ ನಂತರವೇ ನೀವು ತೆರಿಗೆ ರಿಟರ್ನ್ ಸಲ್ಲಿಸಬಹುದು. ವಾರಸುದಾರರು ತೆರಿಗೆ ಪಾವತಿಸಬೇಕಾಗುತ್ತದೆ. ಇದರ ನಂತರ ನೀವು ಮರುಪಾವತಿಯನ್ನು ಕ್ಲೈಮ್ ಮಾಡಬಹುದು. ITR ರಿಟರ್ನ್ ಅನ್ನು ಸಲ್ಲಿಸಲು www.incometaxindiaefiling.gov.in/home ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಲ್ಲಿಸಬಹುದು. ಪಾನ್ ಕಾರ್ಡ್ ಆಧಾರದ ಮೂಲಕ ಕಾನೂನು ಉತ್ತರಾಧಿಕಾರಿ ತನ್ನ ಮಾಹಿತಿಯನ್ನು ನೀಡಬೇಕಾಗುತ್ತದೆ. ಮೃತ ವ್ಯಕ್ತಿಯ ಆದಾಯದ ಮೇಲೆ ITR ಅನ್ನು ಸಲ್ಲಿಸಬೇಕು.

Join Nadunudi News WhatsApp Group