Tax On Salary: 7.5 ಲಕ್ಷಕ್ಕಿಂತ ಹೆಚ್ಚಿನ ಸಂಬಳದ ಮೇಲೆ ಎಷ್ಟು ತೆರಿಗೆ ಕಟ್ಟಬೇಕು…? ತೆರಿಗೆ ನಿಯಮ ಹೀಗಿದೆ

7.5 ಲಕ್ಷಕ್ಕಿಂತ ಹೆಚ್ಚಿನ ಸಂಬಳದ ಮೇಲೆ ಎಷ್ಟು ತೆರಿಗೆ ಪಾವತಿಸಬೇಕು..? ಇಲ್ಲಿದೆ ಡೀಟೇಲ್ಸ್

Income Tax Rule On Salary: ಆದಾಯ ತೆರಿಗೆ ಪಾವತಿದಾರರು ಎರಡು ಆಯ್ಕೆಗಳನ್ನು ಬಳಸಿಕೊಂಡು ತೆರಿಗೆಯನ್ನು ಪಾವತಿಸಬಹುದು. ಹೊಸ ಆದಾಯ ತೆರಿಗೆ ಪದ್ಧತಿ ಹಾಗೂ ಹಳೆಯ ಆದಾಯ ತೆರಿಗೆ ಪದ್ದತಿಯ ಎರಡು ಆಯ್ಕೆಗಳಲ್ಲಿ ತೆರಿಗೆ ಪಾವತಿದಾರರು ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು.

ನೀವು ಹಳೆಯ ತೆರಿಗೆ ಪದ್ದತಿಯ ಆಯ್ಕೆಯಲ್ಲಿ ITR ಸಲ್ಲಿಕೆಗೆ ಮುಂದಾದರೆ ಕೆಲವು ಹೂಡಿಕೆಯ ದಾಖಲೆಗಳನ್ನು ನೀಡುವ ಮೂಲಕ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಹೊಸ ತೆರಿಗೆ ಪದ್ದತಿಯಲ್ಲಿ ತೆರಿಗೆ ಕಡಿತದ ಲಾಭ ಲಭ್ಯವಾಗುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.

Income Tax Rule On salary
Image Credit: Informal News

7.5 ಲಕ್ಷಕ್ಕಿಂತ ಹೆಚ್ಚಿನ ಸಂಬಳದ ಮೇಲೆ ಎಷ್ಟು ತೆರಿಗೆ ಕಟ್ಟಬೇಕು…?
2023 ರ ಬಜೆಟ್ ಸಮಯದಲ್ಲಿ, ಕೇಂದ್ರ ಸರ್ಕಾರವು ಹೊಸ ತೆರಿಗೆ ಪದ್ಧತಿಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ ಮತ್ತು 7 ಲಕ್ಷದವರೆಗಿನ ಮೊತ್ತವನ್ನು ತೆರಿಗೆ ಮುಕ್ತಗೊಳಿಸುವುದಾಗಿ ಘೋಷಿಸಿತು. ಹಳೆಯ ಮತ್ತು ಹೊಸ ಆದಾಯ ತೆರಿಗೆ ವ್ಯವಸ್ಥೆಗಳಲ್ಲಿ ರೂ. 50 ಸಾವಿರದ Standard Deduction ಪ್ರಯೋಜನವೂ ಲಭ್ಯವಿದೆ. ಈ ತೆರಿಗೆ ನಿಯಮದ ಪ್ರಕಾರ, ಹೊಸ ತೆರಿಗೆ ಸ್ಲ್ಯಾಬ್‌ ನಲ್ಲಿ 7.50 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ. ಆದರೆ ವಾರ್ಷಿಕ ಆದಾಯವು ಒಂದು ರೂಪಾಯಿಯಿಂದ 7.5 ಲಕ್ಷಕ್ಕಿಂತ ಹೆಚ್ಚಿದ್ದರೆ ಹೊಸ ದರಗಳ ಪ್ರಕಾರ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಇಷ್ಟು ವ್ಯವಹಾರ ಮಾಡಿದ್ರೆ ತೆರಿಗೆ ಕಟ್ಟಬೇಕು
ಹೊಸ ತೆರಿಗೆ ಪದ್ಧತಿಯ ಪ್ರಕಾರ, ವಾರ್ಷಿಕ ಆದಾಯ 0 ರಿಂದ 3 ಲಕ್ಷದವರೆಗೆ ಶೇಕಡಾ 0 ರಷ್ಟು ಆದಾಯ ತೆರಿಗೆ, 3 ರಿಂದ 6 ಲಕ್ಷ ರೂಪಾಯಿಗಳ ಆದಾಯದ ಮೇಲೆ ಶೇಕಡಾ 5 ರಷ್ಟು, 6 ರಿಂದ 9 ಲಕ್ಷ ರೂಪಾಯಿಗಳ ಆದಾಯದ ಮೇಲೆ ಶೇಕಡಾ 10 ರಷ್ಟು, 10 ರಿಂದ 12 ಲಕ್ಷ ಆದಾಯದ ಮೇಲೆ ಶೇಕಡಾ 15 ರಷ್ಟು ಆದಾಯ ತೆರಿಗೆ, 15 ಲಕ್ಷಕ್ಕಿಂತ ಕಡಿಮೆ ಆದಾಯದ ಮೇಲೆ ಶೇಕಡಾ 20 ಮತ್ತು 15 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇಕಡಾ 30 ರ ದರದಲ್ಲಿ 12 ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

Income Tax Rules 2024
Image Credit: Business Today

ಹೊಸ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆ ನಿಯಮ ಹೀಗಿದೆ
ಹೊಸ ತೆರಿಗೆ ಪದ್ಧತಿಯ ಪ್ರಕಾರ, 3 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಉಳಿದ 4 ಲಕ್ಷ 60 ಸಾವಿರ ರೂ. ಗೆ ತೆರಿಗೆ ವ್ಯಾಪ್ತಿಗೆ ಬರಲಿದೆ. 3 ಲಕ್ಷದಿಂದ 6 ಲಕ್ಷದವರೆಗಿನ ಆದಾಯಕ್ಕೆ ಶೇಕಡಾ 5 ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಅದು 15,000 ರೂ. ಆಗಿದೆ. ಇದಾದ ನಂತರ ಉಳಿದ 1 ಲಕ್ಷದ 60 ಸಾವಿರದಿಂದ 50 ಸಾವಿರ Standard Deduction ಕಳೆಯುವ ಮೂಲಕ 1 ಲಕ್ಷ 10 ಸಾವಿರ ತೆರಿಗೆ ವ್ಯಾಪ್ತಿಗೆ ಬರಲಿದ್ದು, ಅದು ಶೇ 10ರ ತೆರಿಗೆ Slab ಗೆ ಸೇರ್ಪಡೆಯಾಗಲಿದೆ.

Join Nadunudi News WhatsApp Group

ಇದರ ಮೇಲಿನ ಆದಾಯ ತೆರಿಗೆ 11,000 ರೂ. ಈ ರೀತಿಯಲ್ಲಿ 7,60,000 ರೂ.ಗಳ ಆದಾಯದ ಒಟ್ಟು ಆದಾಯ ತೆರಿಗೆ 26,000 ರೂ. ಆಗುತ್ತದೆ. ಆದರೆ ಇಲ್ಲಿ ಆದಾಯ ತೆರಿಗೆ ಇಲಾಖೆಯ ವಿಭಿನ್ನ ನಿಯಮ ಅನ್ವಯಿಸುತ್ತದೆ. 7 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೊತ್ತ ಮತ್ತು ಅದರ ಮೇಲೆ ವಿಧಿಸುವ ತೆರಿಗೆ ಯಾವುದು ಕಡಿಮೆಯೋ ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ.

Join Nadunudi News WhatsApp Group