Tax Rule Updated: ಆದಾಯ ತೆರಿಗೆ ಕಟ್ಟುವವರಿಗೆ ಹೊಸ ರೂಲ್ಸ್, 5 ತೆರಿಗೆ ನಿಯಮ ಬದಲಿಸಿದ ಕೇಂದ್ರ ಸರ್ಕಾರ.

ಆದಾಯ ತೆರಿಗೆ ನಿಯಮದಲ್ಲಿ 5 ಮಹತ್ವದ ಬದಲಾವಣೆಯನ್ನ ಜಾರಿಗೆ ತರಲಾಗಿದೆ.

Income Tax Return Rules Updated: ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಅನೇಕ ಅಪ್ಡೇಟ್ ಗಳು ಲಭಿಸುತ್ತಿದೆ. ಆದಾಯ ತೆರಿಗೆ ಪಾವತಿಯ ಕುರಿತಾಗಿ ನಿರ್ಮಲ ಸೀತಾರಾಮನ್ (Nirmala Sitaraman) ಅವರು ವಿವಿಧ ನಿಯಮಗಳನ್ನು ಜಾರಿಗೊಳಿಸುತ್ತಿದ್ದಾರೆ. ಇನ್ನು ತೆರಿಗೆದಾರರು ನಿಗದಿತ ಸಮಯದೊಳಗೆ ತೆರಿಗೆ ಪಾವತಿಸಬೇಕೆನ್ನುವ ಬಗ್ಗೆ ಈಗಾಗಲೇ ಕೇಂದ್ರದಿಂದ ಸೂಚನೆ ಬಂದಿದೆ.

ತೆರೆದಾರರು ತೆರಿಗೆ ಪಾವತಿಸುವ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಇನ್ನು ಐಟಿ ರಿಟರ್ನ್ (ITR) ಸಲ್ಲಿಕೆಗೆ ಸಂಬಂಧಿಸಿದಂತೆ ತೆರಿಗೆ ಇಲಾಖೆ ಈಗಾಗಲೇ ಸಾಕಷ್ಟು ಅಪ್ಡೇಟ್ ಗಳನ್ನು ಹೊರಡಿಸಿದೆ. ಇದೀಗ ಐಟಿ ರಿಟರ್ನ್ ಸಲ್ಲಿಕೆಯ ಕುರಿತು ಆದಾಯ ಇಲಾಖೆ ಮಹತ್ವದ ಸೂಚನೆಯನ್ನು ಹೊರಡಿಸಿದೆ. 

5 significant changes have been implemented in the income tax rules.
Image Credit: indiafilings

ಆದಾಯ ತೆರಿಗೆ ರಿಟರ್ನ್ ಸಲಿಕೆ ಕಡ್ಡಾಯ
ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ. ಐಟಿ ರಿಟರ್ನ್ ಸಲಿಕೆಯಲ್ಲಿ ಕೂಡ ಆದಾಯ ಇಲಾಖೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ.

ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಇ ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು. ಐಟಿಆರ್ ಸಲಿಕೆಯಲ್ಲಿ ಇತ್ತೀಚಿಗೆ ಹೊಸ ನಿಯಮಗಳು ಜಾರಿಯಾಗಿವೆ. ನೀವು ತೆರಿಗೆದಾರರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

5 significant changes have been implemented in the income tax rules.
Image Credit: timesofindia

ಆದಾಯ ತೆರಿಗೆ ಕಟ್ಟುವವರಿಗೆ ಐದು ಹೊಸ ರೂಲ್ಸ್
*ಡಿಜಿಟಲ್ ಕರೆನ್ಸಿಯ ವರ್ಗಾವಣೆಯಿಂದ ಬರುವ ಆದಾಯ ಅಂದರೆ ಕ್ರಿಪ್ಟೋಗೆ ಶೇಕಡಾ 30 ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಪಾವತಿಯ ಜೊತೆಗೆ ಹೆಚ್ಚುವರಿ ಶುಲ್ಕ ಮತ್ತು ಸೆಸ್ ಕೂಡ ಪಾವತಿಸಬೇಕಾಗುತ್ತದೆ. ಇತಹಾಹಾ ಆದಾಯದ ಮೇಲೆ ITR-1 ಅಥವಾ ITR-4 ಅನ್ನು ಸಲ್ಲಿಸಲು ಸಾಧ್ಯವಿಲ್ಲ ಆದರೆ ITR-2 ಅಥವಾ ITR-3 ಫಾರ್ಮ್ ಅನ್ನು ಸಲ್ಲಿಸಬಹುದು.

Join Nadunudi News WhatsApp Group

*ಹೊಸ ತೆರಿಗೆ ಆಡಳಿತ ವಿಭಾಗ 115BAC ಅಡಿಯಲ್ಲಿ ಐಚ್ಛಿಕ ತೆರಿಗೆ ಆಡಳಿತವನ್ನು ಆಯ್ಕೆ ಮಾಡುವ ಆಯ್ಕೆ ಇದೆ. ಆದರೆ ಸರ್ಕಾರದ ಕಡೆಯಿಂದ ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

5 significant changes have been implemented in the income tax rules.
Image Credit: briefing

*ಸೆಕ್ಷನ್ 80G ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡುತ್ತಿದ್ದರೆ, ಫಾರ್ಮ್ 10BE ನಲ್ಲಿ ದೇಣಿಗೆ ರಸೀದಿ ಮತ್ತು ದೇಣಿಗೆ ಪ್ರಮಾಣಪತ್ರ ಲಭ್ಯವಿರಬೇಕು. ಕಡಿತವನ್ನು ಕ್ಲೈಮ್ ಮಾಡಲು, ತೆರಿಗೆ ಪಾವತಿದಾರನು ತನ್ನ ದೇಣಿಗೆಯ ವಿವರಗಳನ್ನು ITR ರೂಪದಲ್ಲಿ ಅನ್ವಯವಾಗುವ 80G ವೇಳಾಪಟ್ಟಿಯಲ್ಲಿ ಒದಗಿಸಬೇಕು.

* ಇನ್ನು ಈ ವರ್ಷದ ಐಟಿಆರ್ ಫಾರ್ಮ್ ವಿಶೇಷ ವಿಭಾಗ ಭಾಗ-ಎ ಟ್ರೇಡಿಂಗ್ ಖಾತೆಯನ್ನು ಒಳಗೊಂಡಿದೆ. ಇಲ್ಲಿ ನೀವು ನಿಮ್ಮ ಇಂಟ್ರಾಡೇ ಟ್ರೇಡಿಂಗ್ ಚಟುವಟಿಕೆಗಳ ಬಗ್ಗೆ ಪ್ರತ್ಯೇಕ ಮಾಹಿತಿಯನ್ನು ನೀಡಬೇಕಾಗುತ್ತದೆ.

5 significant changes have been implemented in the income tax rules.
Image Credit: outlookmoney

*ವಿಭಾಗ 89A ಅಧಿಕಾರಿಗಳು ನಿರ್ಧಿಷ್ಟ ದೇಶಗಳಲ್ಲಿ ಹೊಂದಿರುವ ನಿವೃತ್ತಿ ಲಾಭದ ಖಾತೆಗಳಿಂದ ಬರುವ ಆದಾಯದ ಮೇಲಿನ ತೆರಿಗೆಯಿಂದ ಪರಿಹಾರವನ್ನು ಒದಗಿಸುತ್ತದೆ. ಒಬ್ಬ ವ್ಯಕ್ತಿಯು ಅಂತಹ ಪರಿಹಾರವನ್ನು ಕ್ಲೈಮ್ ಮಾಡಿದ್ದರೆ, ತೆರಿಗೆದಾರರು ವೇಳಾಪಟ್ಟಿಯ ವೇತನದಲ್ಲಿ ಸರಿಯಾದ ಮಾಹಿತಿಯನ್ನು ನೀಡಬೇಕಾಗುತ್ತದೆ.

Join Nadunudi News WhatsApp Group