Tax Updates: ಆದಾಯ ತೆರಿಗೆ ಪಾವತಿ ಮಾಡುವವರಿಗೆ ಗುಡ್ ನ್ಯೂಸ್, ಇನ್ನೊಂದು ನವೀಕರಣ ಮಾಡಿದ ಕೇಂದ್ರ.

ತೆರಿಗೆ ಪಾವತಿದಾರರಿಗೆ ಹೊಸ ಸುದ್ದಿ ನೀಡಿದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್.

Income Tax New Update: ಹೊಸ ಹಣಕಾಸು ವರ್ಷದ (New Financial Year) ಆರಂಭವಾದ ಬೆನ್ನಲ್ಲೇ ಅನೇಕ ನಿಯಮಗಳಲ್ಲಿ ಬಾರಿ ಬದಲಾವಣೆ ಆಗಿದೆ. ಇನ್ನು ಇತ್ತೀಚೆಗಂತೂ ತೆರಿಗೆ ಸಂಬಂಧಿತ ಅನೇಕ ಅಪ್ಡೇಟ್ ಗಳು ಹೊರಬರುತ್ತಲೇ ಇದೆ. ತೆರಿಗೆ (Tax) ಪಾವತಿಯಲ್ಲಿ ಸಾಕಷ್ಟು ರೀತಿಯ ವಿನಾಯಿತಿಗಳು ಲಭ್ಯವಿದೆ.

ಇದೀಗ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಹೊಸ ಮಾಹಿತಿಯೊಂದು ಲಭಿಸಿದೆ. ಇನ್ನು ಯಾರು ತೆರಿಗೆಯನ್ನು ಕಟ್ಟಬೇಕು ಹಾಗೂ ಯಾರಿಗೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ಸಿಗಲಿದೆ ಎನ್ನುವ ಬಗ್ಗೆ ಈಗಾಗಲೇ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitaraman) ಮಾಹಿತಿ ನೀಡಿದ್ದಾರೆ. ಇದೀಗ ಕೇಂದ್ರ ಸರ್ಕಾರ ತೆರಿಗೆ ಪಾವತಿಯಲ್ಲಿ ಹೊಸ ನವೀಕರಣವನ್ನು ಮಾಡಿದೆ. ಈ ಬದಲಾವಣೆ ಲಕ್ಷಾಂತರ ತೆರಿಗೆದಾರರಿಗೆ ಸಹಾಯವಾಗಲಿದೆ.

Good news for income tax payers
Image Credit: news18

ಆದಾಯ ತೆರಿಗೆ ಪಾವತಿ ಮಾಡುವವರಿಗೆ ಗುಡ್ ನ್ಯೂಸ್
ಇನ್ನು ನಿಮ್ಮ ಆದಾಯವು 2 .5 ಲಕ್ಷಕ್ಕಿಂತ ಕಡಿಮೆ ಇದ್ದರೆ ನೀವು ತೆರಿಗೆ ಪಾವತಿಸುವ ಅಗತ್ಯವಿರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇನ್ನು ಹೊಸ ತೆರಿಗೆ ನಿಯಮದ ಪ್ರಕಾರ 7 ಲಕ್ಷದ ತನಕ ಆದಾಯ ಇರುವವರು ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಇದೀಗ ತೆರಿಗೆ ಪಾವತಿಯಲ್ಲಿ ಹೊಸ ನವೀಕರಣ ಜಾರಿಗೊಳಿಸಲಾಗಿದೆ. ಮುಂಗಡ ತೆರಿಗೆ ಪಾವತಿಗಾಗಿ ತೆರಿಗೆದಾರರಿಗೆ ಸರ್ಕಾರದಿಂದ ನಿರಂತರವಾಗಿ ಮಾಹಿತಿ ನೀಡಲಾಗುತ್ತಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜೂನ್ 17 ರವರೆಗೆ ದೇಶದ ನಿವ್ವಳ ನೇರ ತೆರಿಗೆ ಸಂಗ್ರಹ ಶೇ.11 .18 ರಷ್ಟು ಏರಿಕೆಯಾಗಿದೆ. ಇನ್ನು 3 .80 ಲಕ್ಷ ಕೋಟಿ ರೂ. ಮುಂಗಡ ಪಾವತಿಯಿಂದಾಗಿ ಈ ಹೆಚ್ಚಳವಾಗಲಿದೆ.

Central Govt made another update on income tax payment
Image Credit: outlookindia

ಆದಾಯ ತೆರಿಗೆ ಪಾವತಿಯಲ್ಲಿ ಇನ್ನೊಂದು ನವೀಕರಣ ಮಾಡಿದ ಕೇಂದ್ರ ಸರ್ಕಾರ
ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ತೆರಿಗೆ ಪಾವತಿದಾರರಿಗೆ ಹೊಸ ಸುದ್ದಿ ನೀಡಿದ್ದಾರೆ. 2021 -22 ರ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದವರು ದಾಖಲೆಯ ತೆರಿಗೆಯನ್ನು ಠೇವಣಿ ಮಾಡಿದ್ದರು. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜೂನ್ 17 ರವರೆಗೆ 1,16,776 ಲಕ್ಷ ಕೋಟಿ ಮುಂಗಡ ತೆರಿಗೆ ಸಂಗ್ರಹವಾಗಿದೆ.

Join Nadunudi News WhatsApp Group

ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 13.70 ಶೇಕಡಾ ಹೆಚ್ಚಾಗಿದೆ. ಇನ್ನು 1,56,949 ಕೋಟಿ ಕಾರ್ಪೊರೇಟ್ ತೆರಿಗೆ (ಸಿಐಟಿ೦ ಸೇರಿದಾಂತೆ ಜೂನ್ 17 ರವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹವು 3,79,760 ಕೋಟಿ ರೂ. ಆಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆಯಾಗಿ ರೂ. 222196 ಕೋಟಿ ರೂಗಳನ್ನು ಸಂಗ್ರಹಿಸಲಾಗಿದೆ.

Join Nadunudi News WhatsApp Group