Indian Railway: ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ಸೇವೆ, ಟಿಕೆಟ್ ನಿಯಮದಲ್ಲಿ ದೊಡ್ಡ ಬದಲಾವಣೆ.

ನಿಮ್ಮ ರೈಲ್ವೆ ಟಿಕೆಟ್ ಅನ್ನು ಬೇರೆಯವರಿಗೆ ವರ್ಗಾಯಿಸಲು ರೈಲ್ವೆ ಇಲಾಖೆಯಿಂದ ಹೊಸ ನಿಯಮ ಜಾರಿ.

Indian Railway New Rules: ಭಾರತೀಯ ರೈಲ್ವೆ (Indian Railway) ತನ್ನ ಪ್ರಯಾಣಿಕರಿಗೆ ಹೊಸ ಹೊಸ ನಿಯಮಗಳನ್ನು ತರುತ್ತಲೇ ಇರುತ್ತದೆ. ಭಾರತೀಯ ರೈಲ್ವೆ ಇತ್ತೀಚಿಗೆ ತನ್ನ ಪ್ರಯಾಣಿಕರಿಗೆ ಕೆಲವು ಸೌಲಭ್ಯಗಳನ್ನು ಒದಗಿಸಿದೆ. ಭಾರತೀಯ ರೈಲ್ವೆ ಇಲಾಖೆಯಿಂದ ಇದೀಗ ಪ್ರಯಾಣಿಕರಿಗೆ ಮತ್ತೊಂದು ಸಿಹಿಸುದ್ದಿ ಲಭಿಸಿದೆ.

ನೀವು ನಿಮ್ಮ ರೈಲು ಟಿಕೆಟ್ ಅನ್ನು ಬುಕ್ ಮಾಡಿದ್ದರೆ ನೀವು ಹೊಸ ವಿಚಾರದ ಬಗ್ಗೆ ಮಾಹಿತಿ ತಿಳಿಯೋದು ಉತ್ತಮ. ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಹಾಗಾಗಿ ನೀವು ಕೂಡ ರೈಲು ಟಿಕೆಟ್ ಕಾಯ್ದಿರಿಸಲು ಹೋಗುತ್ತಿದ್ದರೆ ಅಥವಾ ಯೋಚಿಸುತ್ತಿದ್ದರೆ ಟಿಕೆಟ್ ನಿಯಮವನ್ನ ಬದಲಾಯಿಸಲಾಗಿದೆ.

A new rule has been issued by the Railway Department to transfer your railway ticket.
Image Credit: Newsdayexpress

ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ
ಪ್ರಯಾಣಿಕನು ತನ್ನ ಟಿಕೆಟ್ ಅನ್ನು ತಾಯಿ, ತಂದೆ, ಸಹೋದರ, ಸಹೋದರಿ, ಮಗ, ಮಗಳು, ಗಂಡ, ಹೆಂಡತಿಯಂತಹ ಕುಟುಂಬದ ಸದಸ್ಯರಿಗೆ ವರ್ಗಾಯಿಸಬಹುದು. ರೈಲ್ವೆ ನಿಯಮಗಳ ಪ್ರಕಾರ ನೀವು ನಿಮ್ಮ ಟಿಕೆಟ್ ಅನ್ನು ನಿಮ್ಮ ಪೋಷಕರು, ಒಡಹುಟ್ಟಿದವರು, ಮಗ ಅಥವಾ ಮಗಳು ಅಥವಾ ಹೆಂಡತಿಯಂತಹ ನಿಮ್ಮ ಕುಟುಂಬದ ಸದಸ್ಯರ ಹೆಸರಿಗೆ ಮಾತ್ರ ವರ್ಗಾಯಿಸಬಹುದು, ಆದರೆ ನಿಮ್ಮ ಸ್ನೇಹಿತರು ನಿಮ್ಮ ಟಿಕೆಟ್ ನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ.

ವರ್ಗಾವಣೆ ಟಿಕೆಟ್ ಅನ್ನು ಹೇಗೆ ಪಡೆಯುವುದು
ಟಿಕೆಟ್ ಅನ್ನು ವರ್ಗಾಯಿಸಲು, ಮೊದಲು ನೀವು ಆ ಟಿಕೆಟ್‌ ನ ಪ್ರಿಂಟ್‌ ಔಟ್ ತೆಗೆದುಕೊಂಡು ಅದರೊಂದಿಗೆ ನಿಮ್ಮ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ಟಿಕೆಟ್ ಅನ್ನು ಯಾರ ಹೆಸರಿಗೆ ವರ್ಗಾಯಿಸಬೇಕೋ ಆ ವ್ಯಕ್ತಿಯ ಆಧಾರ್ ಕಾರ್ಡ್‌ ನಂತಹ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು. ಇದನ್ನು ಅನ್ವಯಿಸುವ ಮೂಲಕ ನೀವು ಟಿಕೆಟ್ ವರ್ಗಾವಣೆಗೆ ಅರ್ಜಿಯನ್ನು ನೀಡಬೇಕಾಗುತ್ತದೆ.

A new rule has been issued by the Railway Department to transfer your railway ticket.
Image Credit: Thebegusarai

ನಿಯಮಗಳ ಪ್ರಕಾರ ನೀವೂ ಬೇರೆಯವರ ಹೆಸರಿಗೆ ಟಿಕೆಟ್ ವರ್ಗಾವಣೆ ಮಾಡಲು 24 ಗಂಟೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ನಿಮ್ಮ ಟಿಕೆಟ್ ಅನ್ನು ನಿಮಗೆ ಒಮ್ಮೆ ಮಾತ್ರ ವರ್ಗಾಯಿಸಬಹುದಾಗಿದೆ. ಅದನ್ನು ಮತ್ತೆ ಮತ್ತೆ ನೀವು ಬೇರೆಯವರ ಹೆಸರಿಗೆ ವರ್ಗಾಯಿಸಲು ಸಾಧ್ಯವಿಲ್ಲ.

Join Nadunudi News WhatsApp Group

Join Nadunudi News WhatsApp Group