Ladies Seat Reservation: ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ Indian Railway, ನಿಮಗಾಗಿ ಪ್ರತ್ಯೇಕ ಆಸನಗಳು.

ದೇಶದಲ್ಲಿ ಹೆಚ್ಚಿನ ಜನರು ರೈಲು ಪ್ರಯಾಣವನ್ನ ಅವಲಂಭಿಸಿದ್ದಾರೆ. ದೂರ ಊರುಗಳನ್ನ ಬಹಳ ಬೇಗ ತಲುಪಬಹುದು, ಕಡಿಮೆ ಆಯಾಸ ಮತ್ತು ಟಿಕೆಟ್ ಬೆಲೆ ಕೂಡ ಕಡಿಮೆ ಅನ್ನುವ ಕಾರಣಕ್ಕೆ ಜನರು Train Journey ಇಷ್ಟಪಡುತ್ತಾರೆ. ಭಾರತೀಯ ರೈಲ್ವೆ ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಈಗಾಗಲೇ ಹಲವು ನಿಯಮಗಳನ್ನ ಜಾರಿಗೆ ತಂದಿದೆ ಮತ್ತು ಈಗಲೂ ಕೂಡ ಕೆಲವು ನಿಯಮಗಳನ್ನ ಜಾರಿಗೆ ತಂದಿದೆ. ದೇಶದಲ್ಲಿ ಪ್ರತಿನಿತ್ಯ ಕೋಟ್ಯಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣವನ್ನ ಮಾಡುತ್ತಾರೆ. ಸದ್ಯ ರೈಲಿನಲ್ಲಿ ಪ್ರಯಾಣ ಮಾಡುವ ಮಹಿಳಾ ಪ್ರಯಾಣಿಕರು ಹಲವು ಸಮಯಗಳಿಂದ Indian Railway ಬಳಿ ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳ ಬಗ್ಗೆ ಮನವಿಯನ್ನ ಮಾಡಿಕೊಂಡಿದ್ದು ಈಗ ಅವರ ಮನವಿಗೆ ಭಾರತೀಯ ರೈಲ್ವೆ ಸ್ಪಂಧಿಸಿದೆ ಎಂದು ಹೇಳಬಹುದು.

ಹೌದು ರೈಲಿನಲ್ಲಿ ಪ್ರಯಾಣ ಮಾಡುವ ಮಹಿಳಾ ಪ್ರಯಾಣಿಕರ ಅನುಕೂಲದ ಉದ್ದೇಶದಿಂದ ಇಂಡಿಯನ್ ರೈಲ್ವೆ ಹೊಸ ನಿವ್ಯಮವನ್ನ ಜಾರಿಗೆ ತಂದಿದ್ದು ಇದು ಮಹಿಳಾ ಪ್ರಯಾಣಿಕರ ಸಂತಸಕೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಹೇಗೆ ಬಸ್ಸುಗಳಲ್ಲಿ ಮಹಿಳೆಯರು ಸೀಟುಗಳನ್ನ ಕಾಯ್ದಿರಿಸಲಾಗುತ್ತದೆ ಮತ್ತು ಈ ನಿಯಮಗಳು ಬಸ್ಸುಗಳಲ್ಲಿ ಮಾತ್ರ ಜಾರಿಯಲ್ಲಿ ಇದ್ದು ಈಗ ರೈಲಿನಲ್ಲಿ ಕೂಡ ಜಾರಿಗೆ ತರಲು ತೀರ್ಮಾನವನ್ನ ಮಾಡಲಾಗಿದೆ.

Ladies Seat Reservation
Image Credit: www.indiatoday.in

ಇನ್ನುಮುಂದೆ ರೈಲುಗಳಲ್ಲಿ ಮಹಿಳೆಯರಿಗಾಗಿ ಪ್ರತಿ ಬೋಗಿಯಲ್ಲಿ ಇಂತಿಷ್ಟು ಸೀಟುಗಳನ್ನ ಕಾಯ್ದಿರಿಸಲಾಗುತ್ತದೆ. ರೈಲಿನಲ್ಲಿ Ladies Seat Reservation ನಿಯಮವನ್ನ ಜಾರಿಗೆ ತಾರಲಾಗಿದ್ದು ಇನ್ನುಮುಂದೆ ರೈಲಿನಲ್ಲಿ ಮಹಿಳೆಯರಿಗಾಗಿ ಇಂತಿಷ್ಟು ಆಸನಗಳು ರಿಸರ್ವ್ ಆಗಿ ಇರುತ್ತದೆ. ಮಹಿಳೆಯರ ಅನುಕೂಲ ಮತ್ತು ಸುರಕ್ಷತೆಯ ಉದ್ದೇಶದಿಂದ ಈ ನಿಯಮಗಳನ್ನ ಜಾರಿಗೆ ತರಲಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇನ್ನುಮುಂದೆ ಎಕ್ಸ್ಪ್ರೆಸ್ ರೈಲುಗಳ ಸ್ಲೀಪರ್ ಕ್ಲಾಸ್ ಗಳಲ್ಲಿ ಮಹಿಳೆಯರು ಆರು ಬರ್ತ್ ಗಳನ್ನ ಮೀಸಲು ಇಡಲಾಗುತ್ತದೆ ಮತ್ತು 3 ಟೈರ್ AC ಕ್ಲಾಸ್ ಗಳಲ್ಲಿ 5 ಬರ್ತ್ ಗಳು ಮತ್ತು 2 ಟೈರ್ ac ಬರ್ತ್ ಗಳಲ್ಲಿ ನಾಲ್ಕು ಸೀಟುಗಳನ್ನ ರಿಸರ್ವ್ ಇಡಲಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.

ಕೆಲವು ರೈಲುಗಳಲ್ಲಿ ಸೀಟುಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಉಂಟಾಗುತ್ತಿರುವ ಕಾರಣ ಈ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳಲ್ಲಿ ಮಹಿಳೆಯರು ಸೀಟುಗಳು ಮೀಸಲು ಇರುತ್ತದೆ ಎಂದು ಸಚಿವರು ತಳಿಸಿದ್ದಾರೆ. ಸದ್ಯ ಈ ನಿಯಮ ದೇಶದ ಮಹಿಳಾ ರೈಲು ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ. ಈ ನಿಯಮ ಸದ್ಯದಲ್ಲೇ ಎಲ್ಲಾ ರೈಲುಗಳಲ್ಲಿ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆಯ ಸಚಿವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆಯರನ್ನ ಗಮನದಲ್ಲಿ ಇರಿಸಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ನಿಯಮಗಳನ್ನ ಜಾರಿಗೆ ತರಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group