Iphone 15 Features: ಐಫೋನ್15 ನಲ್ಲಿ ಸಿಮ್ ಕಾರ್ಡ್ ಹಾಕೋಕೆ ಆಗೋದಿಲ್ಲ, ವಿಶೇಷತೆ ಇಲ್ಲಿದೆ

ಈ ವರ್ಷ ಬಿಡುಗಡೆಯಾಗಲಿರುವ ಆಪಲ್(Apple) ಐಫೋನ್ 15 ಭಾಗ್ಯ ಕೆಲವೊಂದು ಮಾಹಿತಿಗಳು ಈಗಾಗಲೇ ಲೀಕ್ ಆಗಿವೆ. ಅದರಲ್ಲಿ ಪ್ರಮುಖವಾಗಿ ಈ ಬಾರಿಯ ಐಫೋನ್ ನಲ್ಲಿ ಸಿಮ್ ಹಾಕಲು ಯಾವುದೇ ಸ್ಲಾಟ್ ಮೊಬೈಲ್ ನಲ್ಲಿ ಇರುವುದಿಲ್ಲ.

Iphone 15 New Features: 2023 ಪ್ರಾರಂಭವಾಗುತ್ತಿದ್ದಂತೆ ಮತ್ತೊಂದು ಚರ್ಚೆ ಕೂಡ ಪ್ರಾರಂಭವಾಗಿದೆ. ಈಗಾಗಲೇ ನಿಮಗೆ ತಿಳಿದಿರುವ ಹಾಗೆ ಈ ವರ್ಷದ ಮೊದಲ ಮೂರು ತಿಂಗಳುಗಳು ಮುಗಿದಿವೆ. ಇನ್ನು ಈ ಬಾರಿ ಈ ವರ್ಷ ಬಿಡುಗಡೆ ಆಗಲಿರುವಂತಹ ಐಫೋನ್15 (iPhone 15) ಬಗ್ಗೆ ಈಗಾಗಲೇ ಪ್ರಪಂಚದಾದ್ಯಂತ ಎಲ್ಲರಲ್ಲೂ ಕೂಡ ಚರ್ಚೆ ಪ್ರಾರಂಭವಾಗಿದೆ.

ಈಗಾಗಲೇ 14ರ ಸೀರೀಸ್ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಜಗತ್ ವ್ಯಾಪಿ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಆಪಲ್ ಪ್ರೊಡಕ್ಟ್ ಗಳು(Apple Product) ಅಂದರೆನೆ ಹಾಗೆ ಎಲ್ಲರೂ ಕೂಡ ಖರೀದಿಸಲು ಮುಗಿ ಬೀಳುತ್ತಾರೆ. ಕ್ವಾಲಿಟಿಗಿಂತ ಹೆಚ್ಚಾಗಿ ಅದೊಂದು ಪ್ರತಿಷ್ಠೆಯ ವಸ್ತುವಾಗಿ ಬಿಟ್ಟಿದೆ.

Iphone 15 New Features
Image Source: The Economic Times

ಹೇಗಿರಲಿದೆ ಈ ವರ್ಷದ ಐಫೋನ್ 15!

ಇನ್ನು ಈ ವರ್ಷ ಬಿಡುಗಡೆಯಾಗಲಿರುವ ಆಪಲ್(Apple) ಐಫೋನ್ 15 ಭಾಗ್ಯ ಕೆಲವೊಂದು ಮಾಹಿತಿಗಳು ಈಗಾಗಲೇ ಲೀಕ್ ಆಗಿವೆ. ಅದರಲ್ಲಿ ಪ್ರಮುಖವಾಗಿ ಈ ಬಾರಿಯ ಐಫೋನ್ ನಲ್ಲಿ ಸಿಮ್ ಹಾಕಲು ಯಾವುದೇ ಸ್ಲಾಟ್ ಮೊಬೈಲ್ ನಲ್ಲಿ ಇರುವುದಿಲ್ಲ.

ಇದರಿಂದಾಗಿ ಸಿಮ್ ಕಾರ್ಡ್ ಅನ್ನು ಬಳಸುವ ಗ್ರಾಹಕರಿಗೆ ದೊಡ್ಡ ಸರ್ಪ್ರೈಸ್ ರೀತಿಯಲ್ಲಿ ಈ ಸುದ್ದಿ ಪರಿಣಮಿಸಲಿದ್ದು ಇದರ ಕುರಿತಂತೆ ಅಧಿಕೃತವಾಗಿ ಆಪಲ್ ಸಂಸ್ಥೆ ಯಾವುದೇ ನ್ಯೂಸ್ ಅನ್ನು ನೀಡಿಲ್ಲ. ಐಫೋನ್ 14 ಕೂಡ ಯಾವುದೇ ಸಿಮ್ ಕಾರ್ಡ್ ಇಲ್ಲದೆ ಚಲಾವಣೆ ಮಾಡಬಹುದಾಗಿದ್ದು ಇದು ಐಫೋನ್ 15ರಲ್ಲಿ ಕೂಡ ಅಧಿಕೃತವಾಗಿ ಕಂಡು ಬರಲಿದೆ ಎನ್ನುವ ಸಮಾಚಾರ ಕೇಳಿ ಬರುತ್ತಿದೆ.

Join Nadunudi News WhatsApp Group

Iphone 15 New Features
Image Source: India Today

 

ಇರಲಿದೆ ಹೊಸ ವಿಭಿನ್ನ ಫೀಚರ್.

Apple iPhone 14 ಗೆ ಹೋಲಿಸಿದರೆ 15ನೇ ಸೀರಿಸ್ ಅನ್ನು ಸಾಕಷ್ಟು ಅಪ್ಗ್ರೇಡ್ ಗಳ ಜೊತೆಗೆ ಲಾಂಚ್ ಮಾಡಲಾಗುತ್ತಿದೆ. USB ಟೈಪ್ C ಸಿಗುವಂತಹ ಸಾಧ್ಯತೆ ಇದೆ. ಈಗಾಗಲೇ ನೀವು ಕೇಳಿರುವ ಪ್ರಕಾರ ಸಿಮ್ ಇಲ್ಲದಿದ್ದರೆ ಐಫೋನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಅನುಮಾನಗಳು ಕೂಡ ನಿಮ್ಮಲ್ಲಿರಬಹುದು ಬನ್ನಿ ಅದನ್ನು ಕೂಡ ಪರಿಹರಿಸಿಕೊಳ್ಳೋಣ. ಸಿಮ್ ಕಾರ್ಡ್ ಹಾಕಿಕೊಳ್ಳಲು ಸ್ಲಾಟ್ ಇಲ್ಲದೆ ಹೋದಲ್ಲಿ ಹೇಗೆ ಮೊಬೈಲ್ ಅನ್ನು ಚಲಾಯಿಸುವುದು ಎಂಬುದಾಗಿ ನಿಮ್ಮ ಅನುಮಾನ ಇರಬಹುದು. ಇದಕ್ಕೆ ಸಿಗುವಂತಹ ಉತ್ತರ e ಸಿಮ್. ಇದು ಡಿಜಿಟಲ್ ಸಿಮ್ ಆಗಿದ್ದು ಫಿಸಿಕಲ್ ಸಿಮ್ ಕಾರ್ಡ್ ನಂತೆ ಕಾರ್ಯನಿರ್ವಹಿಸಲಿದೆ.

Iphone 15 New Features
Image Source: Youtube

ಅಧಿಕೃತ ಮೂಲಗಳ ಪ್ರಕಾರ ಐಫೋನ್ 15(iPhone 15) ನಲ್ಲಿ ಯಾವುದೇ ಸಿಮ್ ಕಾರ್ಡ್ ಗೆ ಯಾವುದೇ ಸ್ಲಾಟ್ ಇರುವುದಿಲ್ಲ. ಇಂತಹ ಫೋನ್ಗಳನ್ನು ಮೊದಲು ಕೇವಲ ಅಮೆರಿಕದಲ್ಲಿ ಮಾತ್ರ ಮಾಡಲಾಗುತ್ತಿತ್ತು ಆದರೆ ಈ ಬಾರಿ ಬರುತ್ತಿರುವ ಹೊಸ ಮಾಡೆಲ್ ಅನ್ನು ಕೇವಲ ಅಮೆರಿಕದಲ್ಲಿ ಮಾತ್ರವಲ್ಲದೆ ಇಂಡಿಯಾ ಸಮೇತ ಹಲವಾರು ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಕಂಪನಿಯ ಪ್ರಕಾರ ಇದೊಂದು ಅತ್ಯಂತ ಸುರಕ್ಷಿತ ಮಾರ್ಗವಾಗಿದೆ ಎಂಬುದಾಗಿ ತಿಳಿದುಬಂದಿದೆ.

Iphone 15 New Features
Image Source: Youtube

Join Nadunudi News WhatsApp Group