iPhone 15: ಐಫೋನ್ 15 ಗಾಗಿ ಕಾಯುತ್ತಿದ್ದ ಜನರಿಗೆ ಬೇಸರದ ಸುದ್ದಿ, ರಾತ್ರೋರಾತ್ರಿ ಘೋಷಣೆ ಮಾಡಿದ Apple.

ಐಫೋನ್ 15 ಖರೀದಿ ಮಾಡಲು ಕುತೂಹಲದಿಂದ ಕಾಯುತ್ತಿದ್ದ ಜನರಿಗೆ ನಿರಾಶೆ.

iPhone 15 Launch: ದೇಶದ ಅತ್ಯಂತ ಜನಪ್ರಿಯ ದುಬಾರಿ ಬ್ರಾಂಡ್ ಆಗಿದಿರುವ ಐಫೋನ್ (iPhone) ಈಗಾಗಲೇ ಹಲವು ಮಾದರಿಯಲ್ಲಿ ಬಿಡುಗಡೆಗೊಂಡಿದೆ. ಇತ್ತೀಚಿಗೆ ಐಫೋನ್ ಮೇಲಿನ ಬೇಡಿಕೆ ಹೆಚ್ಚಿದ್ದು ಆನ್ಲೈನ್ ನಲ್ಲಿ ಅತಿ ಕಡಿಮೆ ಬೆಲೆಗೆ ಐಫೋನ್ ಖರೀದಿಸಬಹುದಾಗಿದೆ.

ಇದೀಗ iPhone 15 ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧತೆ ನಡೆಸುತ್ತಿದೆ. ಆದರೆ ಈ ಐಫೋನ್ 15 ರ ಬಿಡುಗಡೆ ವಿಳಂಬವಾಗಲಿದೆ ಎನ್ನಲಾಗ್ಗುತ್ತಿದೆ. ಆಪಲ್ ಕಂಪನಿಯ ಹೊಸ ಮಾದರಿಯಾದ ಐಫೋನ್ 15 ಅನ್ನು ಖರೀದಿ ಮಾಡಲು ಈಗಾಗಲೇ ಸಾಕಷ್ಟು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಈಗ ಆಪಲ್ ಇನ್ನೊಂದು ಘೋಷಣೆ ಮಾಡಿದ್ದೂ ಇದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. 

iPhone 15 launch delay
Image Credit: Tfipost

 

ಐಫೋನ್ 15
ಐಫೋನ್ 15 ಇನ್ನು ಕೆಲವೇ ಕೆಲವು ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಬಿಡುಗಡೆಗೂ ಮುನ್ನ ಐಫೋನ್ 15 ಬಾರಿ ಸದ್ದು ಮಾಡಿದ್ದು ಇದೀಗ ಐಫೋನ್ 15 ನ ಫೀಚರ್ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಐಫೋನ್ 15 ಬಿಡುಗಡೆಯ ದಿನಾಂಕ ಸದ್ಯದಲ್ಲೆ ಬಹಿರಂಗವಾಗಲಿದ್ದು ಫೀಚರ್ ಸೋರಿಕೆಯಾದ ಕಾರಣ ಬಿಡುಗಡೆಗೂ ಮುನ್ನವೇ ಐಫೋನ್ 15 ನ ಮೇಲಿನ ಕ್ರೇಜ್ ಹೆಚ್ಚಿಸಿದೆ. ಐಫೋನ್ 15 ನಲ್ಲಿ ನಾಲ್ಕು ಮಾದರಿಯ ಫೋನ್ ಅನ್ನು ನೋಡಬಹುದಾಗಿದೆ.

ಐಫೋನ್ 15 ಗಾಗಿ ಕಾಯುತ್ತಿದ್ದ ಜನರಿಗೆ ಬೇಸರದ ಸುದ್ದಿ

Join Nadunudi News WhatsApp Group

ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಐಫೋನ್ 15 ಬಿಡುಗಡೆ ಆಗುತ್ತದೆ ಎಂದು ಜನರು ಕಾಯುತ್ತಿದ್ದರೂ, ಆದರೆ ಈಗ ಆಪಲ್ ಇನ್ನೊಂದು ಘೋಷಣೆ ಮಾಡಿದ್ದು ಮೊಬೈಲ್ ಬಿಡುಗಡೆ ಆಗುವುದು ಇನ್ನಷ್ಟು ವಿಳಂಬ ಆಗಲಿದೆ ಎಂದು ತಿಳಿಸಿದೆ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಐಫೋನ್ 15 ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

iphone 15 feature updates
Image Credit: Dhakaacademy

ಐಫೋನ್ 15 ಫೀಚರ್
iPhone 15 6 .1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು ಡ್ಯುಯೆಲ್ ಕ್ಯಾಮರವನ್ನು ಒಳಗೊಂಡಿದೆ. ಇನ್ನು ಡಿಸ್ ಪ್ಲೇ 120HZ ರಿಫ್ರೆಶ್ ರೆಟ್ ಮತ್ತು ಆಲ್ ವೇಸ್ ಆನ್ ಡಿಸ್ ಪ್ಲೇ ಫೀಚರ್ ಅನ್ನು ಹೊಂದಿದೆ. ಐಫೋನ್ 15 ಪವರ್ ಫುಲ್ ಬಯೋನಿಕ್ A16 SoC ಪ್ರೊಸೆಸರ್ ಅನ್ನು ಹೊಂದಿದೆ. ಐಫೋನ್ 15 ಐಫೋನ್ 14 ನ ಮಾದರಿಯನ್ನು ಹೊಲಲಿದೆ.

ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಗಳು ಬಯೋನಿಕ್ A17 ಪ್ರೊಸೆಸರ್ ನಲ್ಲಿ ಬರಲಿದೆ. ಇನ್ನು ಐಫೋನ್ 15 ಮಾದರಿಯು 1TB ಸ್ಟೋರೇಜ್ ಆಯ್ಕೆಯನ್ನು ಹೊಂದಲಿದೆ. ಐಫೋನ್ 15 48 ಮೆಗಾಪಿಕ್ಸೆಲ್ ರಿಯಲ್ ಕ್ಯಾಮರಾಗಳನ್ನು ಹೊಂದಲಿದೆ. ಐಫೋನ್ 15 3877mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಸದ್ಯ ಐಫೋನ್ 15 ಬೆಲೆಯ ಬಗ್ಗೆ ನಿಖರವಾದ ಮಾಹಿತಿ ಇನ್ನು ಲಭಿಸಿಲ್ಲ.

Join Nadunudi News WhatsApp Group