iPhone Ban: iPhone 15 ಬಿಡುಗಡೆಯ ಬೆನ್ನಲ್ಲೇ ಗ್ರಾಹಕರಿಗೆ ಶಾಕ್, iPhone ನ ಈ ನಾಲ್ಕು ಪ್ರಮುಖ ಮಾದರಿಗಳು ಸ್ಥಗಿತ.

Apple ಕಂಪನಿಯು ತನ್ನ ನಾಲ್ಕು ಪ್ರಮುಖ iPhone Model ಗಳನ್ನೂ ನಿಲ್ಲಿಸಿದೆ.

iPhone 4 Models Ban: ದೇಶಿಯ ಮಾರುಕಟ್ಟೆಯಲ್ಲಿ Apple ಬ್ರಾಂಡ್ ಅತೀ ಹೆಚ್ಚು ಜನಪ್ರಿಯತೆ ಪಡೆದಿದೆ. ಕಂಪನಿಯು ವಿವಿಧ ಮಾದರಿಯ ಐಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ. iPhone ಮಾರುಕಟ್ಟೆಯಲ್ಲಿ ಲಭ್ಯವಿರುವ ಅತೀ ದುಬಾರಿ ಬ್ರಾಂಡ್ ಆಗಿದೆ. ಇತರ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗಿಂತ iPhone ಹೆಚ್ಚಿನ ಬೆ೩ಡಿಕೆ ಪಡೆದುಕೊಂಡಿದೆ.

iPhone ದುಬಾರಿ ಬ್ರಾಂಡ್ ಆದರೂ ಕೂಡ ಜನರು ಹೆಚ್ಚಾಗಿ iPhone ಖರೀದಿಗೆ ಮನಸ್ಸು ಮಾಡುತ್ತಾರೆ. ಏಕೆಂದರೆ iPhone ಬಳಕೆದಾರರಿಗೆ ಹೆಚ್ಚಿನ ಫಚರ್ ಅನ್ನು ನೀಡುತ್ತದೆ. ಇನ್ನು Apple ಕಂಪನಿಯು ಈಗಾಗಲೇ ಹಲವಾರು ಮಾದರಿಯಲ್ಲಿ iPhone ಅನ್ನು ಬಿಡುಗಡೆ ಮಾಡಿದೆ. ಸಧ್ಯ ಮಾರುಕಟ್ಟೆಯಲ್ಲಿ iPhone 15 ಬಾರಿ ವೈರಲ್ ಆಗುತ್ತಿದೆ. ಇದೀಗ iPhone 15 ಬಿಡುಗಡೆಗೊಳಿಸಿದ ಬೆನ್ನಲೇ ಕಂಪನಿಯು ಮಹತ್ವವಾದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

Apple iPhone 12 ban
Image Credit: Vivanicemk

iPhone 15 ಬಿಡುಗಡೆಯ ಬೆನ್ನಲ್ಲೇ ಗ್ರಾಹಕರಿಗೆ ಶಾಕ್
ಬಹುನಿರೀಕ್ಷಿತ iPhone 15 ಮಾರುಕಟ್ಟೆಗೆ ಬಂದು ಭರ್ಜರಿ ಸದ್ದು ಮಾಡಿದ್ದು, ಐಫೋನ್ 15 ನಲ್ಲಿ iPhone 15, iPhone 15 Pro, iPhone 15 Plus, iPhone 15 Pro Max ನಾಲ್ಕು ಮಾದರಿಯ ಫೋನ್ ಅನ್ನು ನೋಡಬಹುದಾಗಿದೆ. ಗ್ರಾಹಕರು iPhone 15 ನ ನಿರೀಕ್ಷೆಯಲ್ಲಿರುವಾಗಲೇ ಇದೀಗ ಕಂಪನಿ ಬಿಗ್ ಶಾಕ್ ನೀಡಿದೆ.

iPhone 15 ಸರಣಿಯ ಬಿಡುಗಡೆಯ ಬೆನ್ನಲ್ಲೇ Apple ಇದೀಗ ಕೆಲ iPhone Model ಗಳನ್ನೂ ಸ್ಥಗಿತಗೊಳಿಸಿದೆ. Apple ಕಂಪನಿಯು ತನ್ನ ನಾಲ್ಕು ಪ್ರಮುಖ iPhone Model ಗಳನ್ನೂ ನಿಲ್ಲಿಸಿದೆ. ಇನ್ನು ಸ್ಥಗಿತಗೊಳ್ಳಲಿರುವ iPhone ಮಾದರಿಗಳು Amazon , Flipkart ನಲ್ಲಿ ಸ್ಟಾಕ್ ಇರುವವರೆಗೂ ಖರೀದಿಗೆ ಲಭ್ಯವಿರುತ್ತದೆ. Amazon , Flipkart ಈ ಮಾದರಿಗಳ ಖರೀದಿಯ ಮೇಲೆ ಕೆಲ ರಿಯಾಯಿತಿಯನ್ನು ಘೋಷಿಸಲಿದೆ. ಸದ್ಯ iPhone 15 ಬಿಡುಗಡೆಗೊಂಡಿದ್ದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿದೆ.

Apple iPhone 13 Mini ban
Image Credit: Notebookcheck

iPhone ನ ಈ ನಾಲ್ಕು ಪ್ರಮುಖ ಮಾದರಿಗಳು ಸ್ಥಗಿತ
*Apple iPhone 14 Pro Max
* Apple iPhone 14 Pro
* Apple iPhone 13 Mini
* Apple iPhone 12

Join Nadunudi News WhatsApp Group

Join Nadunudi News WhatsApp Group