IRCTC Ticket Booking: ರೈಲು ಟಿಕೆಟ್ ಬುಕ್ ಮಾಡುವಾಗ ಈ ತಪ್ಪು ಮಾಡಿದ್ರೆ ಇನ್ಮುಂದೆ ಜೈಲು ಶಿಕ್ಷೆ, ಹೊಸ ನಿಯಮ ಜಾರಿ.

ರೈಲು ಟಿಕೆಟ್ ಬುಕ್ ಮಾಡುವಾಗ ಈ ತಪ್ಪು ಮಾಡಿದ್ರೆ ಇನ್ಮುಂದೆ ಜೈಲು ಶಿಕ್ಷೆ

IRCTC Ticket Booking Rule: ನಿಮಗೆ ತಿಳಿದಿರುವ ಹಾಗೆ ರೈಲು ಪ್ರಯಾಣಕ್ಕೆ ಮುಖ್ಯವಾಗಿ ಟಿಕೆಟ್ ನ ಅಗತ್ಯ ಇರುತ್ತದೆ. ರೈಲ್ವೆ ಇಲಾಖೆಯು ಈ ಟಿಕೆಟ್ ಪಡೆಯುವ ಪ್ರಕ್ರಿಯೆಗೆ ಅದರದ್ದೇ ಆದ ನಿಯಮವನ್ನು ಅಳವಡಿಸಿರುತ್ತದೆ. ಇನ್ನು ಸಾರ್ವಜನಿಕ ವಲಯದ ಸಂಸ್ಥೆಯಾದ IRCTC ಸರ್ಕಾರೀ ಸ್ವಾಮ್ಯದ ಭಾರತೀಯ ರೈಲ್ವೆಗೆ ಟಿಕೆಟಿಂಗ್, ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಸೇವೆಯನ್ನು ಒದಗಿಸುತ್ತದೆ.

ಹೆಚ್ಚಿನ ಜನರಿಗೆ IRCTC ID ಬಳಸಿ ಟಿಕೆಟ್ ಬುಕ್ ಮಾಡುತ್ತಾರೆ. ಈ ಪ್ರಕ್ರಿಯೆಯ ಮೂಲಕ ಟಿಕೆಟ್ ಬುಕ್ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಕಾರಣ ನೀವು ಟಿಕೆಟ್ ಬುಕ್ ಮಾಡುವಲ್ಲಿ ಈ ತಪ್ಪುಗಳನ್ನು ಮಾಡಿದರೆ, ದಂಡದ ಜೊತೆಗೆ ಜೈಲು ಸೇರುವ ಪರಿಸ್ಥಿತಿ ಕೂಡ ಎದುರಿಸಬೇಕಾಗುತ್ತದೆ. ನಾವೀಗ ಈ ಲೇಖನದಲ್ಲಿ IRCTC Ticket Booking ನ ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

IRCTC Ticket Booking Rule
Image Credit: irctc

ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ನಿಯಮ ಜಾರಿ
ರೈಲು ಟಿಕೆಟ್ ಬುಕಿಂಗ್ ಗಾಗಿ IRCTC ಮುಖ್ಯ ನಿಯಮವನ್ನು ಜಾರಿಮಾಡಿದೆ. ನಿಮ್ಮ ಐಡಿ ಬಳಸಿ ಬೇರೆಯವರಿಗೆ ಟಿಕೆಟ್ ಬುಕ್ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಈ ತಪ್ಪಿಗೆ 3 ವರ್ಷ ಜೈಲು ಶಿಕ್ಷೆ ಅಥವಾ 10,000 ರೂ. ದಂಡ ವಿಧಿಸಲಾಗುತ್ತದೆ. ವೈಯಕ್ತಿಕ ಐಡಿ ಬಳಸಿ ಬೇರೆಯವರಿಗೆ ಟಿಕೆಟ್ ಬುಕ್ ಮಾಡುವುದು ಅಪರಾಧ. ಹಾಗಾಗಿ ಪರ್ಸನಲ್ ಐಡಿ ಬಳಸಿ ಇತರರಿಗೆ ಟಿಕೆಟ್ ಬುಕ್ ಮಾಡುವವರು ದಂಡ ತೆರಬೇಕಾಗುತ್ತದೆ.

ರೈಲು ಟಿಕೆಟ್ ಬುಕ್ ಮಾಡುವಾಗ ಈ ತಪ್ಪು ಮಾಡಿದ್ರೆ ಇನ್ಮುಂದೆ ಜೈಲು ಶಿಕ್ಷೆ
•ವಾಸ್ತವವಾಗಿ ರೈಲ್ವೆ ಕಾಯಿದೆಯ ಸೆಕ್ಷನ್ 143 ರ ಪ್ರಕಾರ, ಅಧಿಕೃತವಾಗಿ ನೇಮಕಗೊಂಡ ವ್ಯಕ್ತಿ ಮಾತ್ರ ತಮ್ಮ ಐಡಿಯನ್ನು ಬಳಸಿಕೊಂಡು ಇತರರಿಗೆ ಟಿಕೆಟ್‌ ಗಳನ್ನು ಬುಕ್ ಮಾಡಬಹುದು.

•ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಕುಟುಂಬ ಮತ್ತು ತನ್ನ ವೈಯಕ್ತಿಕ ಐಡಿಯೊಂದಿಗೆ ಅದೇ ಹೆಸರನ್ನು ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಟಿಕೆಟ್‌ ಗಳನ್ನು ಬುಕ್ ಮಾಡಬಹುದು.

Join Nadunudi News WhatsApp Group

•ನಿಮ್ಮ ಸ್ನೇಹಿತರಿಗೆ ಅಥವಾ ಇತರರಿಗೆ ಟಿಕೆಟ್ ಬುಕ್ ಮಾಡಿದರೆ 10,000. ದಂಡ ಅಥವಾ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

•IRCTC ವೆಬ್‌ ಸೈಟ್‌ ಪ್ರಕಾರ, ಒಬ್ಬ ವ್ಯಕ್ತಿ ಒಂದು ID ಯಲ್ಲಿ ಒಂದು ತಿಂಗಳಲ್ಲಿ 24 ಟಿಕೆಟ್‌ ಗಳನ್ನು ಬುಕ್ ಮಾಡಬಹುದು. ಆದರೆ ಅವರ ಐಡಿಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು. ನಿಮ್ಮ ಐಡಿಗೆ ಆಧಾರ್ ಲಿಂಕ್ ಮಾಡದಿದ್ದರೆ ನೀವು ಅವರ ಐಡಿಯಿಂದ ತಿಂಗಳಿಗೆ 12 ಟಿಕೆಟ್‌ ಗಳನ್ನು ಮಾತ್ರ ಬುಕ್ ಮಾಡಲು ಅವಕಾಶವಿದೆ. ಆದರೆ ಆ 12 ಟಿಕೆಟ್‌ ಗಳು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಮಾತ್ರ ಮೀಸಲಿಡಬೇಕು.

•ನೀವು IRCTC ID ಬಳಸಿ ತತ್ಕಾಲ್ AC ಟಿಕೆಟ್ ಅನ್ನು ಬುಕ್ ಮಾಡಲು ಬಯಸಿದರೆ ನೀವು 10 ಗಂಟೆಯ ನಂತರ ಪ್ರಾರಂಭಿಸಬೇಕು. ಅಲ್ಲದೇ ನಾನ್ ಎಸಿ ಟಿಕೆಟ್ ಬುಕ್ ಮಾಡುವವರು ಬೆಳಗ್ಗೆ 11 ಗಂಟೆಯ ನಂತರ ಬುಕ್ ಮಾಡಬಹುದು.

IRCTC Ticket Booking Updates
Image Credit: Informalnewz

Join Nadunudi News WhatsApp Group