ITR Form 16: ಪ್ರತಿ ತಿಂಗಳು ಸಂಬಳ ಪಡೆಯುವ ನೌಕರರು ಆದಾಯ ತೆರಿಗೆ ಈ ಫಾರಂ ಭರ್ತಿ ಮಾಡಬೇಕು, ತೆರಿಗೆ ನಿಯಮ.

ಪ್ರತಿ ತಿಂಗಳು ಸಂಬಳ ಪಡೆಯುವ ಜನರು ಆದಾಯ ತೆರಿಗೆ ಫಾರ್ಮ್ ಭರ್ತಿ ಮಾಡಬೇಕು.

Tax Rules For Salary Holders: ಹೊಸ ಹಣಕಾಸು ವರ್ಷದ ಆರಂಭದಿಂದ ಅನೇಕ ನಿಯಮಗಳು ಬದಲಾಗಿವೆ. ಇನ್ನು ಆದಾಯ ತೆರಿಗೆ (Income Tax) ಸಲ್ಲಿಕೆಯಲ್ಲಿ ಕೂಡ ಸಾಕಷ್ಟು ನಿಯಮಗಳು ಬದಲಾಗಿವೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ವಿವಿಧ ರೀತಿಯ ನಿಯಮಗಳು ಜಾರಿಗೆ ಬರುತ್ತಿವೆ. ಇನ್ನು ಐಟಿ ರಿಟರ್ನ್ (ITR) ಸಲ್ಲಿಕೆಗೆ ಸಂಬಂಧಿಸಿದಂತೆ ತೆರಿಗೆ ಇಲಾಖೆ ಈಗಾಗಲೇ ಸಾಕಷ್ಟು ಅಪ್ಡೇಟ್ ಗಳನ್ನು ಹೊರಡಿಸಿದೆ.

ಇದೀಗ ಐಟಿ ರಿಟರ್ನ್ ಸಲ್ಲಿಕೆಯ ಕುರಿತು ಆದಾಯ ಇಲಾಖೆ ಮಹತ್ವದ ಸೂಚನೆಯನ್ನು ಹೊರಡಿಸಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಫಾರ್ಮ್ ಗಳನ್ನೂ ಭರ್ತಿ ಮಾಡಬೇಕು. ವಿವಿಧ ನಮೂನೆಗಳನ್ನು ಸಲ್ಲಿಸುವ ಕೆಲವು ನಿಯಮಗಳನ್ನು ಅನುಸರಿಸಬೇಕು. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

It is mandatory for income tax payers to fill this form
Image Credit: indiafilings

ಐಟಿ ರಿಟರ್ನ್ ಸಲ್ಲಿಕೆಯ ಕೊನೆಯ ದಿನಾಂಕ ನಿಗದಿ
ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ. ಐಟಿ ರಿಟರ್ನ್ ಸಲಿಕೆಯಲ್ಲಿ ಕೂಡ ಆದಾಯ ಇಲಾಖೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ.

ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಐಟಿಆರ್ ತುಂಬುವ ಪ್ರಕ್ರಿಯೆಯು ಮೇ ಹಾಗೂ ಜೂನ್ ನಲ್ಲಿ ಪ್ರಾರಂಭವಾಗುತ್ತದೆ. ITR-1 ಮತ್ತು ITR-4 ಸಹ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿವೆ, ಆದ್ದರಿಂದ ITR ಅನ್ನು ಭರ್ತಿ ಮಾಡಬಹುದು.

It is mandatory for income tax payers to fill this form
Image Credit: edition

ಆದಾಯ ತೆರಿಗೆ ಕಟ್ಟುವವರು ಈ ಫಾರ್ಮ್ ಭರ್ತಿ ಮಾಡುವುದು ಕಡ್ಡಾಯ
2023 ರ ಹಣಕಾಸು ವರ್ಷಕ್ಕೆ ಫಾರ್ಮ್ 16 ಅನ್ನು ಜೂನ್ 15, 2023 ರಂದು ಅಥವಾ ನಂತರ ನೀಡಲು ಪ್ರಾರಂಭಿಸಬಹುದು. ಜೂನ್ 15 ರಿಂದ, ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಈ ಫಾರ್ಮ್ ಅನ್ನು ನೀಡಲು ಪ್ರಾರಂಭಿಸುತ್ತವೆ. ನಿಮ್ಮ TDS ಅನ್ನು ಏಪ್ರಿಲ್-2022 ರಿಂದ ಮಾರ್ಚ್-2023 ರ ನಡುವೆ ಕಡಿತಗೊಳಿಸಿದರೆ, ಅದು ಜೂನ್ ಅಂತ್ಯದವರೆಗೂ ಬರಬಹುದು.

Join Nadunudi News WhatsApp Group

ನಿಮ್ಮ ಫಾರ್ಮ್-16 ಅನ್ನು ಯಾವಾಗ ಬಿಡುಗಡೆ ಮಾಡಬಹುದು ಎಂದು ನಿಮ್ಮ ಕಂಪನಿಯಿಂದ ನೀವು ಮಾಹಿತಿಯನ್ನು ತೆಗೆದುಕೊಳ್ಳಬಹುದು. ಈ ಅವಧಿಯಲ್ಲಿ ನೀವು ಉದ್ಯೋಗವನ್ನು ಬದಲಾಯಿಸಿದ್ದರೆ, ನಿಮ್ಮ ಹಳೆಯ ಕಂಪನಿಯಿಂದ ಫಾರ್ಮ್ 16 ಅನ್ನು ಸಹ ನೀವು ಕೇಳಬಹುದು.

ಸಾಮಾನ್ಯವಾಗಿ, ಕಂಪನಿಗಳು ಉದ್ಯೋಗಿಯನ್ನು ಬಿಡುಗಡೆ ಮಾಡುವ ಸಮಯದಲ್ಲಿ ಫಾರ್ಮ್ 16 ಅನ್ನು ನೀಡುತ್ತವೆ. ಫಾರ್ಮ್ 16 ತೆರಿಗೆದಾರರ ಸಂಬಳದ ಆದಾಯ, ಟಿಡಿಎಸ್ ಕಡಿತ ಇತ್ಯಾದಿಗಳ ಮಾಹಿತಿಯನ್ನು ಒಳಗೊಂಡಿರುತ್ತದೆ.

Join Nadunudi News WhatsApp Group