Today Gold Rate: ಜನವರಿ ತಿಂಗಳ ಮೊದಲ ವಾರದಲ್ಲಿ ಸತತ ಮೂರನೇ ದಿನವೂ ಇಳಿಕೆ ಕಂಡ ಚಿನ್ನದ ಬೆಲೆ, ಇಂದು ಕೂಡ 100 ರೂ. ಇಳಿಕೆ

ಸತತ ಮೂರೂ ದಿನದಿಂದ ಇಳಿಕೆಯತ್ತ ಸಾಗುತ್ತಿರುವ ಬಂಗಾರದ ಬೆಲೆ.

January 5th Gold Rate: ಸದ್ಯ ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷದ ಆರಂಭದಲ್ಲಿ ಜನರು ಹೆಚ್ಚಾಗಿ ಚಿನ್ನದ ಬೆಲೆಯ ಇಳಿಕೆಯ್ನನು ನಿರೀಕ್ಷಿಸಿದ್ದರು. ಚಿನ್ನದ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಹೊಸ ವರ್ಷದ ಮೊದಲ ದಿನ ಯಾವುದೇ ಸಿಹಿ ಸುದ್ದಿ ನೀಡಿಲ್ಲ.

ಹೊಸ ವರ್ಷದ ಮೊದಲ ದಿನದಂದು ಚಿನ್ನದ ಬೆಲೆ ಸ್ಥಿರತೆ ಕಂಡಿತ್ತು. ನಂತರ ಹೊಸ ವರ್ಷದ ಎರಡನೇ ದಿನ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗಿತ್ತು.

gold rate today
Image Credit: Thehansindia

ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ
ವರ್ಷದ ಎರಡನೇ ದಿನ ಚಿನ್ನದ ಬೆಲೆ ಏರಿಕೆಯಾಗಿದ್ದನ್ನು ನೋಡಿ ಆಭರಣ ಪ್ರಿಯರು ಚಿಂತಿಸುವಂತಾಯಿತು. ವರ್ಷದ ಮೊದಲ ಬಾರಿಗೆ ಚಿನ್ನದ ಬೆಲೆ ಏರಿಕೆ ವರ್ಷವಿಡೀ ಏರಿಕೆಯನ್ನು ನೀಡುತ್ತದೆ ಎಂದು ಜನರು ಕಂಗಾಲಾಗಿದ್ದರು. ಈ ವೇಳೆ ಜನವರಿ 3 ರಂದು ಚಿನ್ನದ ಬೆಲೆ 250 ರೂ. ಇಳಿಕೆಯಾಗಿ ಆಭರಣ ಪ್ರಿಯರಿಗೆ ಖುಷಿ ನೀಡಿತ್ತು. ಹಾಗೆಯೆ ಜನವರಿ 4 ರಂದು ಕೂಡ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 400 ರೂ. ಇಳಿಕೆಯಾಗಿತ್ತು. ಜನವರಿ ಮೊದಲ ವಾರದಲ್ಲಿ ಚಿನ್ನದ ಬೆಲೆ ಇಳಿಕೆಯತ್ತ ಸಾಗುತ್ತ ಇಂದು ಕೂಡ ಇಳಿಕೆ ಕಂಡಿದೆ.

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದಲ್ಲಿ 10 ರೂ. ಇಳಿಕೆಯಾಗುವ ಮೂಲಕ 5,810 ರೂ. ಇದ್ದ ಚಿನ್ನದ ಬೆಲೆ 5,800 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 80 ರೂ. ಇಳಿಕೆಯಾಗುವ ಮೂಲಕ 46,480 ರೂ. ಇದ್ದ ಚಿನ್ನದ ಬೆಲೆ 46,400 ರೂ. ತಲುಪಿದೆ.

Join Nadunudi News WhatsApp Group

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 100 ರೂ. ಇಳಿಕೆಯಾಗುವ ಮೂಲಕ 58,100 ರೂ. ಇದ್ದ ಚಿನ್ನದ ಬೆಲೆ 58,000 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 1,000 ರೂ. ಇಳಿಕೆಯಾಗುವ ಮೂಲಕ 5,81,000 ರೂ. ಇದ್ದ ಚಿನ್ನದ ಬೆಲೆ 5,80,000 ರೂ. ತಲುಪಿದೆ.

22 And 24 Carat Gold Rate Today
Image Credit: News 18

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದಲ್ಲಿ 11 ರೂ. ಇಳಿಕೆಯಾಗುವ ಮೂಲಕ 6,338 ರೂ. ಇದ್ದ ಚಿನ್ನದ ಬೆಲೆ 6,327 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 88 ರೂ. ಇಳಿಕೆಯಾಗುವ ಮೂಲಕ 50,704 ರೂ. ಇದ್ದ ಚಿನ್ನದ ಬೆಲೆ 50,616 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 110 ರೂ. ಇಳಿಕೆಯಾಗುವ ಮೂಲಕ 63,380 ರೂ. ಇದ್ದ ಚಿನ್ನದ ಬೆಲೆ 63,270 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 1,100 ರೂ. ಇಳಿಕೆಯಾಗುವ ಮೂಲಕ 6,33,800 ರೂ. ಇದ್ದ ಚಿನ್ನದ ಬೆಲೆ 6,32,700 ರೂ. ತಲುಪಿದೆ.

Join Nadunudi News WhatsApp Group