Jio Cinema: ಜಿಯೋ ಸಿನಿಮಾ ಬಳಸುವವರಿಗೆ ಬೇಸರದ ಸುದ್ದಿ, IPL ನೋಡಲು ಕಟ್ಟಬೇಕು ಶುಲ್ಕ.

ಜಿಯೋ ಸಿನಿಮಾ ಮೂಲಕ ಐಪಿಎಲ್ ಮ್ಯಾಚ್ ನೋಡಲು ಈಗ ರಿಚಾರ್ಜ್ ಮಾಡಿಕೊಳ್ಳಬೇಕು.

Jio Reliance: ಜಿಯೋ ರಿಲಯನ್ಸ್ (Jio Reliance) ದೇಶದಲ್ಲಿಯೇ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿದೆ. ಜಿಯೋ ರಿಲಯನ್ಸ್ ತನ್ನ ಬಳಕೆದಾರರಿಗೆ ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಜಿಯೋ ರಿಲಯನ್ಸ್ ಇದೀಗ ಜಿಯೋ ಸಿನಿಮಾ ಪ್ಲಾಟ್ ಫಾರ್ಮ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇನ್ನು ಜಿಯೋ ಸಿನಿಮಾದಲ್ಲಿ (Jio Cinema) ಮುಂದಿನ ದಿನಗಳಲ್ಲಿ ಕೆಲವು ಬದಲಾವಣೆ ಆಗಲಿದೆ.

There has been a change in the Jio Cinema Recharge Plan.
Image Credit: hindustantimes

IPL ನೋಡುವವರಿಗೆ ಬೇಸರದ ಸುದ್ದಿ
ಜಿಯೋ ಸಿನಿಮಾದ ಮೂಲಕ IPL ನೋಡಲು ಕ್ರಿಕೆಟ್ ಪ್ರಿಯರು ಕಾತುರರಾಗಿದ್ದರು. ಆದರೆ ಜಿಯೋ ರಿಲಯನ್ಸ್ ಇದೀಗ ಐಪಿಎಲ್ ನೋಡುವವರಿಗೆ ಶಾಕ್ ನೀಡಿದೆ. ಜಿಯೋ ಸಿನಿಮಾ ತನ್ನ ಸೇವೆಗಳಿಗೆ ಶುಲ್ಕ ವಿಧಿಸುವ ನಿರ್ಧಾರ ಮಾಡಿದೆ.

ಜಿಯೋ ಸಿನಿಮಾದ ಉಚಿತ ಪ್ಲಾಟ್ ಫಾರ್ಮ್ ಚಂದಾದಾರಿಕೆ ಬದಲಾಗಲಿದೆ. ಜಿಯೋ ಸಿನಿಮಾ ಸೇವೆಗಳಿಗೆ 3 ರೀತಿಯ ಚಂದಾದಾರಿಕೆಯ ಯೋಜನೆಗಳನ್ನು ಆನ್ಲೈನ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಒಂದು ತಿಂಗಳು, ಮೂರು ತಿಂಗಳು ಹಾಗೂ ವಾರ್ಷಿಕ ಯೋಜನೆಯನ್ನು ಜಿಯೋ ಸಿನಿಮಾದಲ್ಲಿ ಬಿಡುಗಡೆ ಮಾಡಲಾಗಿದೆ.

People watching IPL through Jio Cinema will have to pay the fee and watch IPL in the coming days
Image Credit: mediaoneonline

ಜಿಯೋ ಸಿನಿಮಾದ ಯೋಜನೆಗಳ ವಿವರ
ಜಿಯೋ ಸಿನಿಮಾ ಪ್ರತಿದಿನದ ಚಂದಾದಾರಿಕೆಯ ಯೋಜನೆಯನ್ನು ನೀಡಿದೆ. ಇದು ಒಂದು ದಿನದ ಬಳಕೆಗೆ ಮಾತ್ರ ಸೀಮಿತವಾಗಿದೆ. ಜಿಯೋ ಸಿನಿಮಾದ ಈ ಯೋಜನೆಯ ಬೆಲೆ 2 ರೂಪಾಯಿದ್ದಾಗಿದೆ. ಆದರೆ ಇದರ ಸಾಮಾನ್ಯ ಬೆಲೆ ಒಂದು ದಿನಕ್ಕೆ 29 ರೂ ಆಗಿದೆ. ಈ ಪ್ಯಾಕೇಜ್ ನಲ್ಲಿ ಎರಡು ಪ್ರತ್ಯೇಕ ಡಿವೈಸ್ ಗಳನ್ನೂ ಬಳಸಬಹುದು.

ಜಿಯೋ ಸಿನಿಮಾ ಮೂರು ತಿಂಗಳ ಪ್ಯಾಕೇಜ್ ಅನ್ನು 99 ರೂಗಳಿಗೆ ನೀಡಿದೆ. ಇನ್ನು 599 ರೂ. ಗಳಿಗೆ 12 ತಿಂಗಳ ಮಾನ್ಯತೆಯ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ಮೂಲ ಬೆಲೆ 1199 ರೂ. ಆಗಿದೆ. ಜಿಯೋ ಸಿನಿಮಾದ ಈ ಯೋಜನೆಗಳ ಬಗ್ಗೆ ಇನ್ನು ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Join Nadunudi News WhatsApp Group

Join Nadunudi News WhatsApp Group