Kanya Sumangala: ರಕ್ಷಾ ಬಂಧನದ ಬಂಪರ್ ಆಫರ್, ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಕೇಂದ್ರದಿಂದ 25000 ರೂ.

ರಕ್ಷಾಬಂಧನ ಹಬ್ಬದ ಕೊಡುಗೆಯಾಗಿ ಕನ್ಯಾ ಸುಮಂಗಲಾ ಯೋಜನೆ.

Kanya Sumangala Scheme: ಸರ್ಕಾರ ದಿನ್ಕಕೊಂದು ಯೋಜನೆ ಜಾರಿಗೆ ತರುತ್ತಿದೆ. ತಿಂಗಳಿಗೊಂದರಂತೆ ಅನೇಕ ಯೋಜನೆಗಳು ಈಗಾಗಲೇ ಜಾರಿಗೆ ಬಂದಿದೆ. ಜನ ಸಾಮಾನ್ಯರು ಈಗಿನ ಎಲ್ಲ ಯೋಜನೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ರಕ್ಷಾಬಂಧನ ಹಬ್ಬವನ್ನು ಸಹೋದರ ಸಹೋದರಿಯರಿಗೆ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಹಬ್ಬದಲ್ಲಿ, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ ಮತ್ತು ಸಹೋದರ ಮತ್ತು ಸಹೋದರಿಯ ನಡುವಿನ ಪವಿತ್ರ ಸಂಬಂಧಕ್ಕೆ ಉದಾಹರಣೆಯಾಗುತ್ತಾರೆ. 
ಹಾಗೆ  ರಕ್ಷಾ ಬಂಧನದಂದು ಭರ್ಜರಿ ಉಡುಗೊರೆಯಂತೆ ಸರಕಾರ ಹೆಣ್ಣು ಮಕ್ಕಳಿಗೆಂದೇ ಈ ಯೋಜನೆಯನ್ನು ಹೊರಡಿಸಿದ್ದು, ಮಹಿಳೆಯರಿಗೆ ಇದು ಒಂದು ಉತ್ತಮ ಯೋಜನೆ ಆಗಿದೆ ಹಾಗು ಇದರಿಂದ ಎಲ್ಲಾ ಮಹಿಳೆಯರು ಖುಷಿ ಪಡುವಂತ ವಿಷಯವಾಗಿದೆ. ಈ ಯೋಜನೆಯಡಿ ಸರ್ಕಾರ ಒಂದು ಕುಟುಂಬದಲ್ಲಿ ಹೆಣ್ಣು ಮಗಳು ಹುಟ್ಟಿದರೆ  25,000 ಸಾವಿರ ರೂಪಾಯಿ ನೀಡಲಾಗುವುದು ಎನ್ನಲಾಗಿದೆ.
Kanya Sumanghala Scheme
Image Credit: Hindustantimes

ರಕ್ಷಾಬಂಧನ ಹಬ್ಬದ ಕೊಡುಗೆಯಾಗಿ ಕನ್ಯಾ ಸುಮಂಗಲಾ ಯೋಜನೆ (Kanya Sumanghala Scheme) 
ರಕ್ಷಾಬಂಧನ ಹಬ್ಬ ಬಹಳ ಪವಿತ್ರ ಹಬ್ಬವಾಗಿದ್ದು, ಈ ಪವಿತ್ರ ಹಬ್ಬದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಹೆಣ್ಣು ಮಕ್ಕಳಿಗೆ ಉತ್ತಮ  ಉಡುಗೊರೆಗಳನ್ನು ನೀಡಿದ್ದಾರೆ. ಬುಧವಾರ ಲೋಕಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕನ್ಯಾ ಸುಮಂಗಲಾ ಯೋಜನೆಯ ಅನುದಾನ ಹೆಚ್ಚಿಸುವುದಾಗಿ  ಘೋಷಿಸಿದ್ದಾರೆ. ಇದಾದ ಬಳಿಕ ಸಿಎಂ ಮಾತನಾಡಿ, ಸರಕಾರದಿಂದ ಈ ಸುಮಂಗಲಾ ಯೋಜನೆಯಡಿ ಸರಕಾರ 6 ಹಂತದಲ್ಲಿ 15 ಸಾವಿರ ರೂ.ಗಳ ಪ್ಯಾಕೇಜ್ ನೀಡಿತ್ತು.

ಪೋಷಕರಿಗೆ  ಮಗಳು ಹುಟ್ಟಿದ ತಕ್ಷಣ ಪೋಷಕರಿಗೆ 5,000 ರೂ. ಸಿಗುವುದು, ಮಗಳಿಗೆ 1 ವರ್ಷ ತುಂಬಿದಾಗ ಆಕೆಯ ಹೆಸರಿಗೆ 2 ಸಾವಿರ ರೂ. ಠೇವಣಿ ಮಾಡಲಾಗುವುದು, ಆ ನಂತರ ಮಗಳು ಒಂದನೇ ತರಗತಿಗೆ ಪ್ರವೇಶ ಪಡೆದ ತಕ್ಷಣ 3 ಸಾವಿರ ರೂ, ಹಾಗು 6ನೇ ತರಗತಿಗೆ 3 ಸಾವಿರ ರೂ, ಮತ್ತು 9 ನೇ ತರಗತಿಗೆ ಪ್ರವೇಶಿಸಿದರೆ ಮಗಳಿಗೆ 5 ಸಾವಿರ ರೂ. ಗಳು ಹೇಗೆ  ಹೆಣ್ಣುಮಕ್ಕಳು ಪದವಿ ಮತ್ತು ಡಿಪ್ಲೊಮಾವನ್ನು ಪೂರ್ಣಗೊಳಿಸಿದರೆ ಅಥವಾ ಪ್ರಮಾಣಪತ್ರಕ್ಕಾಗಿ ಯಾರಾದರೂ ಶುಲ್ಕವನ್ನು ತೆಗೆದುಕೊಂಡರೆ ಅವರ ಖಾತೆಗೆ 7,000 ರೂ ಮೊತ್ತವನ್ನು ವರ್ಗಾಯಿಸಲಾಗುತ್ತದೆ.

Yogi Adityanath latest news update
Image Credit: News4social

ಹೀಗೆ ಕಾರ್ಯಕ್ರಮದ ವೇಳೆ ಪುತ್ರಿಯರು ಸಿಎಂ ಯೋಗಿಗೆ ರಾಖಿ ಕಟ್ಟಿ ಸ್ವಾಗತಿಸಿದರು. ಇದಾದ ಬಳಿಕ ಸಿಎಂ ಮಹಿಳೆಯರ ರಕ್ಷಣೆ ಮಾಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸಿಎಂ ಯೋಗಿ ಒಂದೇ ಕ್ಲಿಕ್‌ನಲ್ಲಿ 29,523 ಫಲಾನುಭವಿ ಹೆಣ್ಣು ಮಕ್ಕಳ ಖಾತೆಗೆ 5.82 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದಾರೆ.

ಈ ಯೋಜನೆಯು ಪ್ರತಿ ಕುಟುಂಬಕ್ಕೂ ಬಹಳ ಉಪಯುಕ್ತವಾಗಿದ್ದು, ಎಲ್ಲ ಕುಟುಂಭವು ಈ ಯೋಜನೆಯ ಫಲಾನುಭವಿಗಳಾಗುವುದು ಮುಖ್ಯವಾಗಿರುತ್ತದೆ. ಈ ಯೋಜನೆ ಉತ್ತರ ಪ್ರದೇಶದಲ್ಲಿ ಜಾರಿಗೆ ಬಂದಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.

Join Nadunudi News WhatsApp Group

Join Nadunudi News WhatsApp Group