No Interest Loan: ರಾಜ್ಯದ ಪ್ರತಿ ಮಹಿಳೆಗೆ ಸಿಗಲಿದೆ ಬಡ್ಡಿ ಇಲ್ಲದೆ 3 ಲಕ್ಷ ರೂ ಸಾಲ, ಸರ್ಕಾರದ ಇನ್ನೊಂದು ಸ್ಕೀಮ್

ಮಹಿಳೆಯರು ಉದ್ಯಮಿಗಳಾಗಿ ಸ್ವಾವಲಂಬಿ ಜೀವನ ನೆಡೆಸಲು ಸರ್ಕಾರದ ಹೊಸ ಯೋಜನೆ

Karnataka Udyogini Yojana: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆಯನ್ನು ಪರಿಚಯಿಸಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ರೂ ಹಣವನ್ನು ಸರ್ಕಾರ ನೀಡುತ್ತಿದೆ.

ಸದ್ಯ ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಆರಂಭಿಸಲು ಉತ್ತೇಜನ ನೀಡಲು ಸರ್ಕಾರ ಈ ಹೊಸ ಯೋಜನೆಯನ್ನು ಪರಿಚಯಿಸಿದೆ. ಸರ್ಕಾರದ ಈ ಯೋಜನೆಯಡಿ ಏನೆಲ್ಲಾ ಸೌಲಭ್ಯ ಸಿಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Udyogini Scheme Details
Image Credit: Kannadanews

ಮಹಿಳೆಯರಿಗಾಗಿ Udyogini Yojana 
ಮಹಿಳೆಯರಿಗಾಗಿ ಸರ್ಕಾರವು ಉದ್ಯೋಗಿನಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ಹೊಸ ಅವಕಾಶವನ್ನು ನೀಡಲಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 3 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ಮಹಿಳೆಯರು 88 ಬಗೆಯ ಸಣ್ಣ ಉದ್ಯೋಗಗಳನ್ನು ಸ್ಥಾಪಿಸಲು ಈ ಯೋಜನೆಯು ನೆರವಾಗಲಿದೆ. ಇನ್ನು ಮಹಿಳೆಯರು ಉದ್ಯಮಿಗಳಾಗಿ ಸ್ವಾವಲಂಬಿ ಜೀವನ ನೆಡೆಸಲಿ ಎನ್ನುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದೆ.

ಮಹಿಳೆಯರಿಗೆ ಸಿಗಲಿದೆ ಬಡ್ಡಿರಹಿತ 3 ಲಕ್ಷ ಸಾಲ
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಲು ಸರ್ಕಾರ ಉದ್ಯೋಗಿನಿ ಯೋಜನೆಯನ್ನು ರೂಪಿಸಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ 48,000 ಮಹಿಳೆಯರು ಸಣ್ಣ ಉದ್ಯಮಿಗಳಾಗಿದ್ದಾರೆ. 18 ರಿಂದ 55 ವರ್ಷದವರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಇನ್ನು ಅಂಗವಿಕಲ ಮಹಿಳೆಯರು, ವಿಧವೆಯರಿಗೆ ಸಾಲದ ಮಿತಿ ಇಲ್ಲ.

Udyogini Scheme In Karnataka
Image Credit: Krishijagran

ವ್ಯವಹಾರ ಮತ್ತು ವಿದ್ಯಾರ್ಹತೆಯ ಆಧಾರದ ಮೇಲೆ ಅಂಗವಿಕಲ ಮಹಿಳೆಯರು, ವಿಧವೆಯರಿಗೆ ಹೆಚ್ಚಿನ ಸಾಲವನ್ನು ನೀಡಲಾಗುತ್ತದೆ. ಅಂಗವಿಕಲರಿಗೆ ಹಾಗೂ ವಿಧವೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ. ಇತರ ಮಹಿಳೆಯರಿಗೆ ಶೇ. 10 ರಿಂದ ಶೇ. 12 ರ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಉದ್ಯೋಗನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ರೇಷನ್ ಕಾರ್ಡ್ ಸೇರಿದಂತೆ ಇನ್ನಿತರ ಮುಖ್ಯ ದಾಖಲೆಯ ವಿವರವನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group