Congress Scheme: ಮಹಿಳೆಯರ ಜೊತೆಗೆ ಈಗ ಪುರುಷರಿಗೂ ಸಿಗಲಿದೆ ಹಣ, ಇನ್ನೊಂದು ಯೋಜನೆಗೆ ಚಾಲನೆ ನೀಡಿದ ಸರ್ಕಾರ.

ನಾಲ್ಕು ಯೋಜನೆಗಳ ಅನುಷ್ಠಾನದ ಬಳಿಕ ಸರ್ಕಾರ ಮತ್ತೊಂದು ಯೋಜನೆಗೆ ಚಾಲನೆ ನೀಡಿದೆ.

Karnataka Yuva Nidhi Scheme: ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ (Congress) ನ ಒಂದೊಂದೇ ಗ್ಯಾರಂಟಿಗಳು ಅನುಷ್ಠಾನವಾಗುತ್ತಿದೆ. ಈಗಾಗಲೇ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಘೋಷಣೆ ಆಗಿದೆ. ಇನ್ನೇನ್ನು ಕನ್ನಡಿಗರು ಯೋಜನೆಯ ಲಾಭ ಪಡೆಯುವುದು ಬಾಕಿ ಇದೆ.

ಇನ್ನು ಶಕ್ತಿ ಯೋಜನೆಯ ಸಂಪೂರ್ಣ ಲಾಭವನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಇನ್ನು ನಾಲ್ಕು ಯೋಜನೆಗಳ ಅನುಷ್ಠಾನದ ಬಳಿಕ ಇದೀಗ ನಿರುದ್ಯೋಗ ಭತ್ಯೆಗಾಗಿ ಘೋಷಿಸಿರುವ ಯುವ ನಿಧಿ (Yuvanidhi) ಯೋಜನೆ ಜಾರಿಗೊಳಿಸುವತ್ತ ಸರ್ಕಾರ ಗಮನ ಹರಿಸುತ್ತಿದೆ.

Karnataka Yuva Nidhi Scheme
Image Credit: Pmmodiyojana

ಯುವ ನಿಧಿ ಯೋಜನೆಯ ಕುರಿತು ಮಹತ್ವದ ಆದೇಶ
ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ಕುರಿತು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲಾ ಪದವೀಧರರಿಗೆ ಪ್ರತಿ ತಿಂಗಳು 3000 ರೂ. ಹಾಗೂ ಡಿಪ್ಲೋಮ ಪದವೀಧರರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ಸಿಗಲಿದೆ. ಸಚಿವ ಸಂಪುಟ ಸಭೆಯಲ್ಲಿ ಯುವ ನಿಧಿ ಯೋಜನೆಯ ಅರ್ಜಿ ಸಲ್ಲಿಕೆ, ಷರತ್ತು ಹಾಗೂ ಅರ್ಹತೆಯ ಬಗ್ಗೆ ಚರ್ಚಿಸಲಾಗಿದೆ.

ಯುವನಿಧಿ ಯೋಜನೆಗೆ ಯಾರು ಅರ್ಹರು
2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದವರಿಗೆ ಈ ಕರ್ನಾಟಕ ಯುವನಿಧಿ ಯೋಜನೆಯ ಲಾಭ ಸಿಗಲಿದೆ. ಗರಿಷ್ಟ 2 ವರ್ಷಗಳವರೆಗೆ ಈ ನಿರುದ್ಯೋಗ ಭತ್ಯೆ ಸಿಗಲಿದೆ. 2 ವರ್ಷಗಳೊಳಗೆ ಉದ್ಯೋಗ ದೊರೆತರೆ ಯೋಜನೆ ಸೌಲಭ್ಯ ಸ್ಥಗಿತವಾಗಲಿದೆ. ಇನ್ನು ಪ್ರತಿ ತಿಂಗಳು ಡಿಬಿಟಿ ಮೂಲಕ ಹಣ ಪಾವತಿಸಿ ಸೇವಾ ಸಿಂಧು ಪೋರ್ಟಲ್ ನ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Join Nadunudi News WhatsApp Group

Important Order on Yuva Nidhi Scheme
Image Credit: Oneindia

ಉದ್ಯೋಗ ಇರುವವರು ಅರ್ಜಿ ಸಲ್ಲಿಸಿದರೆ ಕಟ್ಟಬೇಕು ಹೆಚ್ಚಿನ ದಂಡ
ಯುವನಿಧಿ ಯೋಜನೆಯಡಿ ಸುಳ್ಳು ದಾಖಲಾತಿ ನೀಡಿ ಅರ್ಜಿ ಸಲ್ಲಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. ಯುವನಿಧಿ ಯೋಜನೆಯಡಿ ಭತ್ಯೆ ಪಡೆಯುತ್ತಿದ್ದು ಮಧ್ಯದಲ್ಲಿ ಉದ್ಯೋಗ ದೊರೆತರೆ ಇದರ ಬಗ್ಗೆ ಘೋಷಣೆ ಮಾಡಿಕೊಳ್ಳಬೇಕು. ಉದ್ಯೋಗ ದೊರೆತ ಮೇಲು ಯೋಜನೆಯ ಲಾಭ ಪಡೆಯುತ್ತಿರುವುದು ತಿಳಿದರೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
*ಅರ್ಜಿದಾರರು 2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರರು ಅರ್ಜಿ ಸಲ್ಲಿಸಬಹುದು.

*ಮತದಾರರ ಗುರುತಿನ ಚೀಟಿ.

karnataka yuva nidhi schem updates
*ಪದವಿ ವಿದ್ಯಾರ್ಥಿಗಳಾಗಿದ್ದರೆ ರೂ. 3000 ಮಾಸಿಕ ಭತ್ಯೆ ಪಡೆಯಲು ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪಿರಾಂನ ಪತ್ರ.

*ಪದವಿ ವಿದ್ಯಾರ್ಥಿಗಳಾಗಿದ್ದರೆ ರೂ. 1500 ಮಾಸಿಕ ಭತ್ಯೆ ಪಡೆಯಲು ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ದಾಖಲೆ ಪಾತ್ರ ನೀಡಬೇಕು.

*ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರ ನೀಡಬೇಕಾಗುತ್ತದೆ.

Join Nadunudi News WhatsApp Group