Loan Waiver 2024: ರೈತರ ನೋವಿಗೆ ಸ್ಪಂದಿಸಿದ ಸರ್ಕಾರ, ಇಂತಹ ರೈತರ 2 ಲಕ್ಷದ ವರೆಗಿನ ಈ ಸಾಲ ಮನ್ನಾ.

ಈ ಸರ್ಕಾರದಿಂದ ರೈತರ 2 ಲಕ್ಷದ ವರೆಗಿನ ಈ ಸಾಲ ಮನ್ನಾ, ಚುನಾವಣೆಯ ನಡುವೆ ಇನ್ನೊಂದು ಘೋಷಣೆ

Loan Waiver Latest Update: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗಾಗಿ ಸಾಕಷ್ಟು ಸೌಲಭ್ಯವನ್ನು ನೀಡುತ್ತಿದೆ. ರೈತರ ಕೃಷಿ ಬೆಳವಣಿಗೆಗಾಗಿ ಈಗಾಗಲೇ ಸಾಕಷ್ಟು ಯೋಜನೆಗಳು ಜಾರಿಯಾಗಿವೆ. ರೈತರು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಬಹುತೇಕ ರೈತರು ತಮ್ಮ ಕೃಷಿಗಾಗಿ Bank ನಲ್ಲಿ ಸಾಲವನ್ನು ಪಡೆಯುತ್ತಾರೆ. ರೈತರಿಗೆ ಸಾಲದ ಮರುಪಾವತಿ ಒಂದು ದೊಡ್ಡ ಹೊರೆಯಾಗಿರುತ್ತದೆ. ಸದ್ಯ ರಾಜ್ಯ ಸರ್ಕಾರ ರೈತರ ಹೊರೆಯನ್ನು ಕಡಿಮೆ ಮಾಡಲು ಸಾಲ ಮನ್ನಾ ಮಾಡಲು ಮುಂದಾಗಿದೆ.

Loan Waiver Latest Update
Image Credit: Tractornews

ರೈತರ ನೋವಿಗೆ ಸ್ಪಂಧಿಸಿದ ಕೇಂದ್ರ
ಇನ್ನು ಚುನಾವಣೆಯ ಸಮಯದಲ್ಲಿ ಸರ್ಕಾರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಇನ್ನು ಕೆಲವು ರಾಜ್ಯಗಳಲ್ಲಿ ರೈತರ ಸಲ ಮನ್ನಾ ಘೋಷಣೆಯಾಗಿದೆ. Jharkhand ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಈಗಾಗಲೇ 50 ಸಾವಿರದಿಂದ 1 ಲಕ್ಷದವರೆಗೆ Loan Waiver ಘೋಷಿಸಲಾಗಿದೆ. ಇದೀಗ Jharkhand ಸರ್ಕಾರ ರೈತರಿಗೆ ಹೊಸ ಘೋಷಣೆ ಹೊರಡಿಸಿದೆ. ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಸರ್ಕಾರದಿಂದ ರೈತರ 2 ಲಕ್ಷದ ವರೆಗಿನ ಈ ಸಾಲ ಮನ್ನಾ
Jharkhand Govt ಈಗಾಗಲೇ ರೈತರಿಗೆ 50 ಸಾವಿರ ರೂ. ವರೆಗಿನ ಸಾಲ ಮನ್ನವನ್ನು ಘೋಷಿಸಿದೆ. ಸದ್ಯ ರೈತರ 50 ಸಾವಿರ ರೂ.ವರೆಗಿನ Loan Waiver 2 ಲಕ್ಷಕ್ಕೆ ಏರಿಸಲು ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಈ ಪ್ರಸ್ತಾವನೆಗಳನ್ನು 2024-25ರ ಬಜೆಟ್‌ ನಲ್ಲಿ ಪರಿಚಯಿಸಲಾಗುತ್ತದೆ. ಮುಂದಿನ ಬಜೆಟ್ ನಲ್ಲಿ Jharkhand ಸರ್ಕಾರ ರೈತರಿಗೆ 2 ಲಕ್ಷದವರೆಗೆ ಸಾಲ ಮನ್ನವನ್ನು ಘೋಷಿಸುವ ಸಾಧ್ಯತೆ ಇದೆ.

Loan Waiver 2024
Image Credit: Down To Earth

ಸರ್ಕಾರದ ಲೆಕ್ಕಾಚಾರದ ಪ್ರಕಾರ ರೂ.50 ಸಾವಿರದಿಂದ ರೂ.1 ಲಕ್ಷದವರೆಗೆ ಸಾಲ ಮಾಡಿರುವ ರೈತರ ಸಂಖ್ಯೆ 3 ಲಕ್ಷದವರೆಗೆ ಇದೆ. ಒಂದು ಲಕ್ಷದಿಂದ ಎರಡು ಲಕ್ಷದವರೆಗೆ ಸಾಲ ಮಾಡಿರುವ ಒಂದು ಲಕ್ಷ ರೈತರಿದ್ದಾರೆ. ಈ ಸಾಲ ಮನ್ನಾ ಯೋಜನೆಗೆ ರಾಜ್ಯ ಸರ್ಕಾರ 500 ಕೋಟಿ ಖರ್ಚು ಮಾಡುವ ನಿರೀಕ್ಷೆಯಿದೆ. ಸಂಸತ್ ಚುನಾವಣೆ ಮತ್ತು Jharkhand ವಿಧಾನಸಭಾ ಚುನಾವಣೆ ಶೀಘ್ರದಲ್ಲೇ ಬರುವುದರಿಂದ ಇಂತಹ ಸಾಲ ಮನ್ನಾ ಯೋಜನೆಯನ್ನು ಪರಿಚಯಿಸಲಾಗುತ್ತಿದೆ ಎನ್ನಲಾಗುತ್ತಿದೆ. ಸದ್ಯ ಜಾರ್ಖಂಡ್ ಸರ್ಕಾರ ಈ ಘೋಷಣೆಯನ್ನ ಮಾಡಿದ್ದು ನಮ್ಮ ಕರ್ನಾಟಕ ಈ ಘೋಷಣೆ ಮಾಡಬೇಕು ಅನ್ನುವುದು ಸಾಕಷ್ಟು ರೈತರ ಆಶಯವಾಗಿದೆ.

Join Nadunudi News WhatsApp Group

Join Nadunudi News WhatsApp Group