Indian Currency: ಭಾರತದ ನೋಟುಗಳಲ್ಲಿ ಮೊದಲ ಬಾರಿಗೆ ಗಾಂಧೀಜಿ ಫೋಟೋ ಹಾಕಿದ್ದು ಯಾವಾಗ…? ಇಲ್ಲಿದೆ ನೋಡಿ.

ನೋಟುಗಳಲ್ಲಿ ಮೊದಲ ಬಾರಿಗೆ ಗಾಂಧೀಜಿ ಫೋಟೋ ಹಾಕಿದ್ದು ಯಾವಾಗ...?

Mahatma Gandhi Photo In Indian Currency: ಪ್ರಸ್ತುತ ದೇಶದಲ್ಲಿ ಚಲಾವಣೆಯಲ್ಲಿರುವ ಎಲ್ಲ ನೋಟುಗಳಲ್ಲಿ ಮಹಾತ್ಮಾ ಗಾಂಧೀಜಿ ಅವರನ್ನು ಮುದ್ರಿಸಲಾಗುತ್ತಿದೆ. ಮಹಾತ್ಮಾ ಗಾಂಧಿ ಇದ್ದ ನೋಟುಗಳು ಮಾತ್ರ ಪ್ರಸ್ತುತ ದೇಶದಲ್ಲಿ ಭಾರತೀಯ ಕರೆನ್ಸಿಯಾಗಿ ಉಳಿದುಕೊಂಡಿದೆ. ಪ್ರತಿನಿತ್ಯ ಜನರು ನೋಟುಗಳನ್ನು ಬಳಸುತ್ತಾರೆ.

ದೈನಂದಿನ ವಹಿವಾಟುಗಳು ನೋಟುಗಳ ಮೂಲಕವೇ ನಡೆಯುತ್ತದೆ. ನಿಮಗೆ ನೋಟುಗಳ ಮೇಲೆ ಮುದ್ರಿಸಲಾದ ಮಹಾತ್ಮಾ ಗಾಂಧೀಜಿಯವರ ಫೋಟೋದ ಹಿನ್ನ್ನೆಲೆಯ ಬಗ್ಗೆ ಮಾಹಿತಿ ತಿಳಿದಿದೆಯೇ…? ನೋಟುಗಳಲ್ಲಿ ಮೊದಲ ಬಾರಿಗೆ ಗಾಂಧೀಜಿ ಫೋಟೋ ಹಾಕಿದ್ದು ಯಾವಾಗ…?ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.

Indian Currency Notes
Image Credit: India Times

ಭಾರತೀಯ ಕರೆನ್ಸಿಯಲ್ಲಿ ಗಾಂಧೀಜಿ ಫೋಟೋ
ಸ್ವಾತಂತ್ರ್ಯದ ನಂತರ, ಭಾರತೀಯ ಕರೆನ್ಸಿ ನೋಟುಗಳಲ್ಲಿ ಗಾಂಧೀಜಿಯವರ ಫೋಟೋವನ್ನು ಮುದ್ರಿಸಲಾಯಿತು. ಅದೇ ಸಮಯದಲ್ಲಿ ಭಾರತೀಯ ಕರೆನ್ಸಿಯನ್ನು ಕಾಗದದ ಮೇಲೆ ಮುದ್ರಿಸಲಾಯಿತು. ಸ್ವಾತಂತ್ರ್ಯದ 22 ವರ್ಷಗಳ ನಂತರ, ಗಾಂಧೀಜಿ ಅವರ ಚಿತ್ರವು ಕರೆನ್ಸಿ ನೋಟುಗಳಲ್ಲಿ ಕಾಣಿಸಿಕೊಂಡಿತು, ಅದೂ ಒಂದು ರೂಪಾಯಿ ನೋಟಿನ ಮೇಲೆ ಮಾತ್ರ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ ಸೈಟ್ ಪ್ರಕಾರ, ಭಾರತ ಸರ್ಕಾರವು 1949 ರಲ್ಲಿ ಒಂದು ರೂಪಾಯಿ ನೋಟಿಗೆ ಹೊಸ ವಿನ್ಯಾಸವನ್ನು ಮೊದಲು ಸಿದ್ಧಪಡಿಸಿತು. ನಂತರ ಸ್ವತಂತ್ರ ಭಾರತಕ್ಕೆ ಚಿಹ್ನೆಯನ್ನು ಆಯ್ಕೆ ಮಾಡಬೇಕಾಗಿತ್ತು.

ಭಾರತದ ನೋಟುಗಳಲ್ಲಿ ಮೊದಲ ಬಾರಿಗೆ ಗಾಂಧೀಜಿ ಫೋಟೋ ಹಾಕಿದ್ದು ಯಾವಾಗ…?
ಮೊದಮೊದಲು ನೋಟುಗಳಲ್ಲಿ ಬ್ರಿಟನ್ ರಾಜನ ಬದಲು ಮಹಾತ್ಮಾ ಗಾಂಧಿ ಅವರ ಚಿತ್ರವಿರುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಒಮ್ಮತ ಮೂಡದ ಕಾರಣ ಮಹಾತ್ಮ ಗಾಂಧಿ ಬದಲಿಗೆ ಅಶೋಕ ಸ್ತಂಭದ ಫೋಟೋ ಮುದ್ರಿಸಲು ನಿರ್ಧರಿಸಲಾಯಿತು. ಇದಾದ ನಂತರ 1950 ರಲ್ಲಿ ಭಾರತ ಗಣರಾಜ್ಯವಾದಾಗ ಮೊಟ್ಟಮೊದಲ ಬಾರಿಗೆ 2, 5, 10 ಮತ್ತು 100 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಯಿತು ಅದರಲ್ಲಿ ಗಾಂಧೀಜಿಯವರ ಫೋಟೋ ಇರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ 49 ವರ್ಷಗಳ ನಂತರ ಮಹಾತ್ಮ ಗಾಂಧಿಯವರ ಚಿತ್ರವಿರುವ ನೋಟುಗಳ ಸಂಪೂರ್ಣ ಸರಣಿಯನ್ನು ಬಿಡುಗಡೆ ಮಾಡಲಾಗಿದೆ.

Mahatma Gandhi Photo In Indian Currency
Image Credit: Zeenews

1969 ರಲ್ಲಿ ಮೊದಲ ಬಾರಿಗೆ, ರಿಸರ್ವ್ ಬ್ಯಾಂಕ್ ಮಹಾತ್ಮ ಗಾಂಧಿಯವರ 100 ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಅವರ ಫೋಟೋವನ್ನು ಹೊಂದಿರುವ ಒಂದು ರೂಪಾಯಿ ನೋಟನ್ನು ಬಿಡುಗಡೆ ಮಾಡಿತು. ಅದರಲ್ಲಿ ಮಹಾತ್ಮ ಗಾಂಧಿ ಕುಳಿತಿರುವ ಚಿತ್ರವಿದ್ದು, ಹಿನ್ನಲೆಯಲ್ಲಿ ಸೇವಾಗ್ರಾಮ ಆಶ್ರಮವಿತ್ತು. 18 ವರ್ಷಗಳ ನಂತರ RBI ಮತ್ತೊಂದು ನೋಟು ಸಿದ್ಧಪಡಿಸಿದೆ. 1987ರಲ್ಲಿ ಬಿಡುಗಡೆಯಾದ ಈ ನೋಟಿನಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ಮುದ್ರಿಸಲಾಗಿತ್ತು. RBI ಈ 500 ರೂಪಾಯಿ ನೋಟನ್ನು 1996 ರಲ್ಲಿ ನಿಲ್ಲಿಸಿತ್ತು. ನಂತರ 1996 ರಲ್ಲಿ ರಿಸರ್ವ್ ಬ್ಯಾಂಕ್ ಗಾಂಧಿಯವರ ಚಿತ್ರವಿರುವ ಹೊಸ ಸರಣಿಯ ನೋಟುಗಳನ್ನು ಬಿಡುಗಡೆ ಮಾಡಿತು.

Join Nadunudi News WhatsApp Group

Indian Currency Latest News
Image Credit: Times Now Hindi

Join Nadunudi News WhatsApp Group