Mahendra Singh Dhoni: ಭಾರತ ತಂಡಕ್ಕೆ ಮರಳಿದ ಮಹೇಂದ್ರ ಸಿಂಗ್ ಧೋನಿ, ಹೊಸ ರೂಪದಲ್ಲಿ ಕಮ್ ಬ್ಯಾಕ್

Mahendra Singh Dhoni Back To Indian Cricket Team 2022: ಸದ್ಯ ಇತ್ತೀಚೆಗಷ್ಟೇ ಮುಗಿದ ಟಿ20 ವಿಶ್ವಕಪ್ 2022ರ ಸೆಮಿಫೈನಲ್‌ನಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿತ್ತು. ಹೌದು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋತು ಮನೆಗೆ ತೆರಳಿತ್ತು ಟೀಂ ಇಂಡಿಯಾ.

ಇನ್ನು ಈ ಬಾರಿ ಹೇಗಾದರೂ ಮಾಡಿ ಕಪ್ ಗೆಲ್ಲುತ್ತೇವೆ ಎಂದುಕೊಂಡಿದ್ದ ಭಾರತಕ್ಕೆ ನಾಕೌಟ್ ಪಂದ್ಯದಲ್ಲಿ ಸೋಲು ಕಂಡಾಗ ಅಭಿಮಾನಿಗಳು ಮತ್ತು ಮಾಜಿ ಆಟಗಾರರು ಬೆಚ್ಚಿಬಿದ್ದರು. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಅಂತಿಮವಾಗಿ 2011 ರಲ್ಲಿ ವಿಶ್ವಕಪ್ ಗೆದ್ದಿದ್ದು 11 ವರ್ಷಗಳ ನಂತರವೂ ಟೀಂ ಇಂಡಿಯಾ ಮತ್ತೊಂದು ವಿಶ್ವಕಪ್ ಗೆದ್ದಿಲ್ಲ.

ಇನ್ನು ಐಸಿಸಿ ಪಂದ್ಯಗಳಲ್ಲಿ ಭಾರತದ ವೈಫಲ್ಯಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಚಿಂತಿಗೆ ದೂಡಿದ್ದು 2023ರಲ್ಲಿ ಏಕದಿನ ವಿಶ್ವಕಪ್ ಮತ್ತು 2024ರಲ್ಲಿ ಟಿ20 ವಿಶ್ವಕಪ್ ಇದೆ.

mahendra singh dhoni returns back to india team
Image Credit: Hindustan Times

ಈ ಮೆಗಾ ಟೂರ್ನಿಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಲು ಬಿಸಿಸಿಐ ಈಗಾಗಲೇ ಪ್ರಯತ್ನ ಆರಂಭಿಸಿದೆ ಎಂದು ವರದಿಯಾಗಿದೆ. ಹೌದು ಎರಡು ವಿಶ್ವಕಪ್ ಗೆದ್ದಿರುವ ಎಂಎಸ್ ಧೋನಿಯನ್ನು ಉತ್ತಮ ಪ್ರದರ್ಶನಕ್ಕಾಗಿ ಭಾರತ ಕಣಕ್ಕಿಳಿಸಲಿದೆ ಎಂದು ದಿ ಟೆಲಿಗ್ರಾಫ್ ತನ್ನ ವರದಿಯಲ್ಲಿ ತಿಳಿಸಿದೆ.

ಖಾಯಂ ಪಾತ್ರಕ್ಕಾಗಿ ಎಂಎಸ್ ಧೋನಿ

Join Nadunudi News WhatsApp Group

ಹೌದು ಭಾರತೀಯ ಕ್ರಿಕೆಟ್‌ನಲ್ಲಿ ಖಾಯಂ ಪಾತ್ರಕ್ಕಾಗಿ ಎಂಎಸ್ ಧೋನಿ ಅವರನ್ನು ನೇಮಿಸಲು ಬಿಸಿಸಿಐ ಮಂಡಳಿ ಯೋಜಿಸುತ್ತಿದೆ ಎಂದು ವರದಿಯಾಗಿದ್ದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಜವಾಬ್ದಾರಿಗಳನ್ನು ನಿಭಾಯಿಸಲು ತುಂಬಾ ಕಷ್ಟಪಡುತ್ತಿದ್ದಾರೆ ಎಂದು ಬಿಸಿಸಿಐ ಭಾವಿಸಿದೆ.

dhoni back to Indian Team
Image Credit: Hindustan Times

ಹೌದು ಅದಕ್ಕಾಗಿಯೇ ಕೋಚ್‌ಗಳ ಪಾತ್ರವನ್ನು ವಿಂಗಡಿಸಲು ಬಿಸಿಸಿಐ ಯೋಜಿಸುತ್ತಿದ್ದು ಟಿ20 ಮಾದರಿಯಲ್ಲಿ ಧೋನಿ ಅವರನ್ನು ನೇಮಕ ಮಾಡಲು ಮಂಡಳಿ ಆಸಕ್ತಿ ತೋರಿಸುತ್ತಿದೆ. ಇದಲ್ಲದೆ ಭಾರತ ಕ್ರಿಕೆಟ್ ತಂಡವು ಮಹಿ ಅವರ ಕೌಶಲ್ಯವನ್ನು ಬಳಸಿಕೊಂಡು ಮಟ್ಟವನ್ನು ಹೆಚ್ಚಿಸಲು ನೋಡುತ್ತಿದೆ ಎನ್ನಬಹುದು.

ಧೋನಿ ಟೀಂ ಇಂಡಿಯಾದ ನಿರ್ದೇಶಕ

ಇನ್ನು ಟಿ20 ಮಾದರಿಯಲ್ಲಿ ಕೋಚ್ ಪಾತ್ರದ ಜೊತೆಗೆ ಎಂಎಸ್ ಧೋನಿ ಯವರನ್ನು ಟೀಂ ಇಂಡಿಯಾದ ನಿರ್ದೇಶಕರನ್ನಾಗಿ ನೇಮಿಸಲು ಬಿಸಿಸಿಐ ಪ್ರಯತ್ನ ನಡೆಸುತ್ತಿದ್ದು ಬಿಸಿಸಿಐ ನಾಯಕರು ಈ ತಿಂಗಳ ಅಂತ್ಯದಲ್ಲಿ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಿದ್ದಾರೆ.

dhoni back to india team as a coach and mentor
Image Credit: The Economic Times

ಹೌದು ಇದು ನಿಜವಾದರೆ ಐಪಿಎಲ್‌ಗೆ ಧೋನಿ ನಿವೃತ್ತಿಯಾಗಬೇಕಾಗುತ್ತದೆ. ಇನ್ನು ಮುಂದಿನ ವರ್ಷ ಐಪಿಎಲ್‌ನಲ್ಲಿ ಮಹಿ ಆಡುವುದು ಸಂಶಯವಾಗುತ್ತಿದ್ದು ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ 2021 ರ ಸಂದರ್ಭದಲ್ಲಿ ಮಹಿ ಭಾರತ ತಂಡದೊಂದಿಗೆ ಕೆಲಸ ಮಾಡಿದ್ದು ಗೊತ್ತೇ ಇದೆ. ಹೌದು ಒಟ್ಟಿನಲ್ಲಿ ಧೋನಿಯ ಅನುಭವ ಮತ್ತು ತಾಂತ್ರಿಕ ಕುಶಾಗ್ರಮತಿಯನ್ನು ಬಳಸಿಕೊಳ್ಳಲು ಬಿಸಿಸಿಐ ಮುಂದಾಗಿದೆ.

ಹೀನಾಯ ಸೋಲಿಗೆ ಆಕ್ರೋಶ

ಇನ್ನು ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಟೀಂ ಇಂಡಿಯಾದ ಹೀನಾಯ ಸೋಲಿಗೆ ಆಕ್ರೋಶ ಕಡಿಮೆಯಾಗಿಲ್ಲ. ಹಲವರು ಕನಿಷ್ಠ ಹೋರಾಟ ನೀಡದೆ ಮುಗ್ಗರಿಸಿದ ಟೀಂ ಇಂಡಿಯಾ ವಿರುದ್ಧ ಟ್ರೋಲ್ ಮಾಡಿದ್ದಾರೆ.

ಮತ್ತೆ ಕೆಲವರು ಪಾಕಿಸ್ತಾನ ವಿರುದ್ಧದ ಹೀನಾಯ ಸೋಲಿಗಿಂತ ಇಂಗ್ಲೆಂಡ್ ವಿರುದ್ಧದ ಸೋಲೇ ಒಕೆ ಎಂದು ಸಮಾಧಾನ ಪಟ್ಟುಕೊಂಡಿದ್ದಾರೆ. ಇತ್ತ ಪಾಕಿಸ್ತಾನ ಅಭಿಮಾನಿಗಳು ಭಾರತ ತಂಡವನ್ನು ಟ್ರೋಲ್ ಮಾಡಿದ್ದು ಇದರ ಜೊತೆಗೆ ಹಲವರು ಸೇರಿಕೊಂಡಿದ್ದಾರೆ.

dhoni comes back india team

Image Credit: Zee News

ಚೋಕರ್ಸ್ ಪಟ್ಟ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೋಕರ್ಸ್ ಪಟ್ಟವನ್ನು ಟೀಂ ಇಂಡಿಯಾಗೆ ನೀಡಿದ್ದು ಸೌತ್ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಕ್ಕಿಂತ ಭಾರತವೇ ಚೋಕರ್ಸ್ ಎಂದಿದೆ. ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ಚೋಕರ್ಸ್ ಟ್ರೆಂಡ್ ಆಗುತ್ತಿದೆ.

Join Nadunudi News WhatsApp Group