Marburg Virus: ಆಫ್ರಿಕಾದಲ್ಲಿ ಬಂತು ಮಾರ್ಬರ್ಗ್ ವೈರಸ್, 8 -9 ದಿನದಲ್ಲಿ ಒಬ್ಬ ಮನುಷ್ಯ ಸಾಯುತ್ತಾನೆ, ಲಕ್ಷಣಗಳು ತಿಳಿದುಕೊಳ್ಳಿ.

ಮಾರ್ಬುರ್ಗ್ ಆಫ್ರಿಕಾ ದೇಶದಲ್ಲಿ ಕಾಣಿಸಿಕೊಂಡಿದ್ದು ಈ ರೋಗ ಎಬೋಲಾ ಲಕ್ಷಣವನ್ನ ಹೋಲುತ್ತದೆ.

Marburg Virus Disease: ಈ ಹಿಂದೆ ಕರೋನ ವೈರಸ್ (Corona Virus) ಎಲ್ಲೆಡೆ ಹರಡಿಕೊಂಡು ಇಡೀ ವಿಶ್ವವನ್ನೇ ಒಮ್ಮೆ ಅನಾರೋಗ್ಯದಿಂದ ಮುಳುಗಿಸಿತ್ತು.

ಕಳೆದ ವರ್ಷದಿಂದ ಕರೋನ ವೈರಸ್ ನಿಂದ ಮುಕ್ತಿ ಸಿಕ್ಕಿತ್ತು. ಆದರೆ ಕರೋನ ವೈರಸ್ ನಂತರ ಅನೇಕ ವೈರಸ್ ಗಳು ಬಂದಿದ್ದವು. ಸಾಕಷ್ಟು ಸಾಂಕ್ರಾಮಿಕ ವೈರಸ್ ಗಳಿಂದಾಗಿ ಜನತೆ ಮತ್ತಷ್ಟು ಕಂಗಾಲಾಗಿದ್ದರು. ಇದೀಗ ಜಗತ್ತಿನಲ್ಲಿ ಹೊಸ ವೈರಸ್ ನ ಹೆಸರು ಕೇಳಿ ಬರುತ್ತಿದೆ.

Marburg's infection appears on Earth and this infection threatens people's lives.
Image Credit: com

ಆಫ್ರಿಕನ್ ದೇಶದಲ್ಲಿ ಕಂಡು ಬರುತ್ತಿದೆ ಮಾರ್ಬರ್ಗ್ ವೈರಸ್ (Marburg Virus) 
ಆಫ್ರಿಕನ್ (Africa) ದೇಶಾದ್ಯಂತ ಈ ಹೊಸ ವೈರಸ್ ಹೆಚ್ಚಾಗಿ ಹರಡುತ್ತಿದೆ. ಇನ್ನು ಈ ಹೊಸ ವೈರಸ್ ಹೇಗೆ ಹರಡುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ಈ ಹೊಸ ಮಾರ್ಬರ್ಗ್ ವೈರಸ್ ಹೆಚ್ಚಾಗಿ ಆಫ್ರಿಕಾ ದೇಶದಲ್ಲಿ ಕಂಡು ಬರುತ್ತಿದೆ. ಸೌದಿ ಅರೇಬಿಯಾಗೆ ಕೂಡ ಸ್ವಲ್ಪ ಮಟ್ಟಿನ ವೈರಸ್ ಹರಡಿರುದರಿಂದ ಆಫ್ರಿಕನ್ ದೇಶಕ್ಕೆ ಪ್ರಯಾಣ ಬಳಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

Marburg infection was found in Africa. The government has warned not to travel to African countries due to the high incidence of infection.
Image Credit: who

ಮಾರ್ಬರ್ಗ್ ವೈರಸ್ ಹೇಗೆ ಹರಡುತ್ತದೆ
ಈಕ್ಟೊರಿಯಲ್ ಗಿನಿಯಾದ ಆರೋಗ್ಯ ಸಚಿವಾಲಯವು ಕೆಲವು ದಿನಗಳ ಹಿಂದೆ ಈ ರೋಗವು ಎಬೋಲವನ್ನು ಹೋಲುತ್ತದೆ ಎಂದು ತಿಳಿಸಿದ್ದಾರೆ. ಮಾರ್ಬರ್ಗ್ ವೈರಸ್ ನಿಂದಾಗಿ 5 ಮಂದಿ ಸಾವನ್ನಪ್ಪಿದ್ದಾರೆ. ಉಗುಳು, ರಕ್ತ ಮತ್ತು ಸ್ಪರ್ಶದ ಮೂಲಕ ರೋಗವು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಇದಕೆ ಯಾವುದೇ ರೀತಿಯ ಲಸಿಕೆ ಅಥವಾ ಆಂಟಿವೈರಲ್ ಚಿಕಿತ್ಸೆ ಇಲ್ಲ.

5 people died due to Marburg virus. It is known by experts that the disease spreads from person to person through spit, blood and touch.
Image Credit: telegraph

ಮಾರ್ಬರ್ಗ್ ವೈರಸ್ ನ ಲಕ್ಷಣಗಳು
ಮಾರ್ಬರ್ಗ್ ವೈರಸ್ ನ ಆರಂಭಿಕ ಹಂತದಲ್ಲಿ ರೋಗಿಯು ತಲೆನೋವು, ದೇಹದ ನೋವು ಮತ್ತು ಆಯಾಸವನ್ನು ಅನುಭವಿಸುತ್ತಾರೆ. ಜ್ವರ, ತೀವ್ರ ತಲೆನೋವು, ಸ್ನಾಯು ನೋವು, ಅತಿಸಾರ, ಹೊಟ್ಟೆನೋವು, ವಾಕರಿಕೆ, ವಾಂತಿ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ವೈರಸ್ ಸೋಂಕಿನ ನಂತರ ರೋಗಿಗಳು ಎಬೋಲಾ ವೈರಸ್ ನ ರೀತಿಯಲ್ಲಿಯೇ ರೋಗ ಲಕ್ಷಣಗಳು ಕಾಣಿಸುತ್ತದೆ.

Join Nadunudi News WhatsApp Group

Join Nadunudi News WhatsApp Group