Milk Price: ರಾಜ್ಯದ ಜನತೆಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಹಾಲಿನ ದರದಲ್ಲಿ 2 ರೂ. ಇಳಿಕೆ.

ಹಾಲಿನ ದರದಲ್ಲಿ 2 ರೂ. ಇಳಿಕೆ.

Milk Price Down: ಸದ್ಯ ರಾಜ್ಯದಲ್ಲಿ ಜನರು ಬೆಲೆ ಏರಿಕೆಯ ಪರಿಣಾಮಕ್ಕೆ ಕಂಗಾಲಾಗಿದ್ದಾರೆ ಎನ್ನಬಹುದು. ದಿನ ನಿತ್ಯ ಬಳಕೆಯ ಎಲ್ಲ ಅಗತ್ಯ ವಸ್ತುಗಳ ಬೆಲೆ ಬಾರಿ ಏರಿಕೆಯಾಗುತ್ತಿದೆ. ಜನಸಾಮಾನ್ಯರು ಬೆಲೆ ಏರಿಕೆಯ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿದ್ದರೂ ಕೂಡ ಸರಕಾರ ಬೆಲೆ ಇಳಿಕೆಗೆ ಮುಂದಾಗುತ್ತಿಲ್ಲ.

ಇನ್ನು ಇತೀಚೆಗಷ್ಟೇ ಸಿದ್ದರಾಮಯ್ಯ ಸರ್ಕಾರ ದಿನ ನಿತ್ಯ ಬಳಸುವಂತಹ ಹಾಲಿನ ದರವನ್ನು ಹೆಚ್ಚಿಸಿತ್ತು. ಹಾಲಿನ ದರದಲ್ಲಿ 2 ರೂ. ಹೆಚ್ಚಿಸಿದ ಸರ್ಕಾರ, ಹಾಲಿನ ಪ್ರಮಾಣವನ್ನು ಕೂಡ ಹೆಚ್ಚಿಸುವುದಾಗಿ ಘೋಷಿಸಿತ್ತು. ಸದ್ಯ ಜನಸಾಮಾನ್ಯರು ಹಾಲಿನ ದರದ ಹೆಚ್ಚಳದ ಚಿಂತೆಯಲ್ಲಿದ್ದಾರೆ ಎನ್ನಬಹುದು. ಆದಾಗ್ಯೂ, ಈ ರಾಜ್ಯದಲ್ಲಿ ಸರ್ಕಾರ ಹಾಲಿನ ದರವನ್ನು ಕಡಿಮೆ ಮಾಡಲು ಮುಂದಾಗಿದೆ. ಈ ಮೂಲಕ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದೆ.

Milk Price Down
Image Credit: Theprint

ರಾಜ್ಯದ ಜನತೆಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ
ಸದ್ಯ ತಮಿಳುನಾಡು ಸರ್ಕಾರ ರಾಜ್ಯ ಸರ್ಕಾರದ ಸಹಕಾರಿ ಸಂಸ್ಥೆಯಾದ ಅವಿನ್ ಹಾಲಿನ ದರದಲ್ಲಿ ರೂ. 2 ಇಳಿಕೆ ಮಾಡಿದೆ. ಈ ಮೂಲಕ ತಮಿಳುನಾಡು ಸರ್ಕಾರ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಅವಿನ್ ಹಾಲು ವಿವಿಧ ಪ್ಯಾಕೆಟ್‌ಗಳಲ್ಲಿ ಲಭ್ಯವಿದೆ. ಕಿತ್ತಳೆ, ಹಸಿರು, ನೀಲಿ ಮತ್ತು ನೇರಳೆ ಬಣ್ನದ ಪ್ಯಾಕೆಟ್ ಗಳಲ್ಲಿ ಅವಿನ್ ಹಾಲು ಲಭ್ಯವಿದೆ.ಈ ಹಾಲಿಗೆ ಕೂಡ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು.

ಪ್ರತಿಯೊಂದೂ ವಿಭಿನ್ನ ಗ್ರಾಹಕರ ಅಗತ್ಯಗಳನ್ನು ಪೂರೈಸಲು ವಿಭಿನ್ನ ಕೊಬ್ಬಿನಂಶವನ್ನು ಸೂಚಿಸುತ್ತದೆ. ಸಾಮಾನ್ಯ ಹಾಲಿನ ಜೊತೆಗೆ, ಅವಿನ್ ಶೀತಲೀಕರಿಸದ ಹಾಲನ್ನು ಸಹ ಒದಗಿಸುತ್ತದೆ. ಇದು ಚಂಡಮಾರುತಗಳು ಮತ್ತು ಭಾರೀ ಮಳೆಯಂತಹ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಮತ್ತು ದೂರದ ಪ್ರಯಾಣಿಕರಿಗೆ ನಿರ್ಣಾಯಕವಾಗಿದೆ. ತುರ್ತು ಸಂದರ್ಭಗಳಲ್ಲಿ ಸ್ಥಿರ ಪೂರೈಕೆಯನ್ನು ನಿರ್ವಹಿಸಲು ಈ ರೀತಿಯ ಹಾಲು ಅತ್ಯಗತ್ಯ.

Milk Price Down News
Image Credit: tv9hindi

ಹಾಲಿನ ದರದಲ್ಲಿ 2 ರೂ. ಇಳಿಕೆ
ಈ ಹಿಂದೆ ರೆಫ್ರಿಜರೇಟೆಡ್ ಹಾಲಿನ ಪ್ಯಾಕೆಟ್ 450 ಎಂಎಲ್ ಗೆ 30 ರೂ., 150 ಎಂಎಲ್ ಗೆ 12 ರೂ. ಇತ್ತು. ಆದಾಗ್ಯೂ, ಹೊಸ ದರ ಕಡಿತದಿಂದ ಈಗ 450 ಎಂಎಲ್‌ ಗೆ 28 ​​ರೂ. ಮತ್ತು 150 ಎಂಎಲ್‌ಗೆ 10 ರೂ. ಆಗಿದೆ. ಹಾಗೆಯೆ ಆರೋಕ್ಯ ಕೆನೆಭರಿತ ಹಾಲಿನ ದರವನ್ನು ಲೀಟರ್‌ಗೆ 3 ರೂ. ಕಡಿಮೆ ಮಾಡಲಾಗಿದೆ. ಈ ಕ್ರಮವು ಚಹಾ ಅಂಗಡಿಗಳು ಮತ್ತು ಹೋಟೆಲ್‌ ಗಳಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ. ಇದಲ್ಲದೆ, ಮೊಸರು ಬೆಲೆ ಕೆಜಿಗೆ 6 ರೂಪಾಯಿ ಇಳಿಕೆಯಾಗಿದೆ.

Join Nadunudi News WhatsApp Group

Milk Price Down In Karnataka
Image Credit: Business-standard

Join Nadunudi News WhatsApp Group