Minimum Balance Rules: ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ಗುಡ್ ನ್ಯೂಸ್, ಮಿನಿಮಂ ಬ್ಯಾಲೆನ್ಸ್ ನಿಯಮದಲ್ಲಿ ಮತ್ತೆ ಬದಲಾವಣೆ.
ಬ್ಯಾಂಕ್ ಮಿನಿಮಂ ಬ್ಯಾಲೆನ್ಸ್ ವಿಷಯವಾಗಿ ಹೊಸ ರೂಲ್ಸ್ ಜಾರಿಗೆ ತಂದ RBI
Minimum Balance New Rule: ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಖಾತೆಗಳನ್ನು ತೆರೆಯುದರ ಜೊತೆಗೆ ಅದರ ನಿರ್ವಹಣೆ ಮಾಡುವುದು ಕೂಡ ಮುಖ್ಯವಾಗಿರುತ್ತದೆ.
Account ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಿಸುದು ಅತಿ ಅಗತ್ಯವಾಗಿದೆ. Minimum Balance ಇಲ್ಲದ ಖಾತೆಗಳಿಗೆ ಎಲ್ಲಾ ಬ್ಯಾಂಕುಗಳು ದಂಡ ವಿಧಿಸುತ್ತವೆ. ಸದ್ಯ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಇದ್ದವರಿಗೆ RBI ನಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ. RBI ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ಹೊಸ ನಿಯಮ ಜಾರಿಮಾಡಿದೆ.
![Minimum Balance Latest Update](https://nadunudi.in/wp-content/uploads/2024/03/Minimum-Balance-Latest-Update.jpg)
ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ಗುಡ್ ನ್ಯೂಸ್
Reserve Bank of India (RBI) ಖಾತೆಗಳಲ್ಲಿನ ಕನಿಷ್ಠ ಬ್ಯಾಲೆನ್ಸ್ ಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ನೀವು ಬ್ಯಾಂಕ್ ಖಾತೆಯನ್ನು ಬಳಸದಿದ್ದರೆ ನೀವು ಕನಿಷ್ಟ ಬ್ಯಾಲೆನ್ಸ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ನಿಷ್ಕ್ರಿಯವಾಗಿರುವ ಖಾತೆಗಳ ಮೇಲೆ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ ಬ್ಯಾಂಕ್ ಗಳು ದಂಡ ವಿಧಿಸುವಂತಿಲ್ಲ ಎಂದು RBI ಹೇಳಿದೆ. ಇದು 2 ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ವಹಿವಾಟು ಮಾಡದ ಖಾತೆಗಳನ್ನು ಒಳಗೊಂಡಿರುತ್ತದೆ. ಈ ಹೊಸ ನಿಯಮ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
![Minimum Balance Rules](https://nadunudi.in/wp-content/uploads/2024/03/Minimum-Balance-Rules.jpg)
ಮಿನಿಮಂ ಬ್ಯಾಲೆನ್ಸ್ ನಿಯಮದಲ್ಲಿ ಮತ್ತೆ ಬದಲಾವಣೆ
ಸ್ಕಾಲರ್ ಶಿಪ್ ಅಥವಾ ನೇರ ಲಾಭ ವರ್ಗಾವಣೆಯನ್ನು ಪಡೆಯಲು ತೆರೆದಿರುವ ಖಾತೆಗಳನ್ನು ನಿಷ್ಕ್ರಿಯ ಎಂದು ಬ್ಯಾಂಕ್ ಗಳು ವರ್ಗೀಕರಿಸಲು ಸಾಧ್ಯವಿಲ್ಲ ಎಂದು ಆರ್ಬಿಐ ಹೇಳಿದೆ. ಈ ಖಾತೆಗಳನ್ನು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬಳಸದಿದ್ದರೂ ಸಹ ನಿಷ್ಕ್ರಿಯ ಖಾತೆಗಳ ಪಟ್ಟಿಗೆ ಸೇರಿಸುವಂತಿಲ್ಲ ಎಂದು ಆರ್ಬಿಐ ಸುತ್ತೋಲೆ ಹೊರಡಿಸಿದೆ.
ಆರ್ಬಿಐನ ಹೊಸ ಸುತ್ತೋಲೆಯ ಪ್ರಕಾರ, ನಿಷ್ಕ್ರಿಯಗೊಳಿಸಿದ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ ಬ್ಯಾಂಕ್ಗಳಿಗೆ ದಂಡ ವಿಧಿಸಲು ಅವಕಾಶವಿಲ್ಲ. ನಿಯಮಗಳ ಪ್ರಕಾರ, ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸಲು ಯಾವುದೇ ಶುಲ್ಕವನ್ನು ತೆಗೆದುಕೊಳ್ಳಲಾಗುವುದಿಲ್ಲ.
![Minimum Balance New Rule](https://nadunudi.in/wp-content/uploads/2024/03/Minimum-Balance-New-Rule.jpg)