Traffic Rules: 18 ವರ್ಷ ಮೇಲ್ಪಟ್ಟವರಿಗೆ ಜಾರಿಗೆ ಬಂತು ಹೊಸ ಟ್ರಾಫಿಕ್ ರೂಲ್ಸ್, ಇಷ್ಟು ದಂಡದ ಜೊತೆಗೆ ಜೈಲು

18 ವರ್ಷಕ್ಕಿಂತ ಕೆಳಗಿನವರು ವಾಹನ ಚಲಾಯಿಸಿದರೆ ಈ ಶಿಕ್ಷೆ ಜೊತೆಗೆ ಇಷ್ಟು ದಂಡ ಖಚಿತ

Minor’s Traffic Rules 2024: ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳಲ್ಲಿ (Traffic Rules) ಸಾಕಷ್ಟು ಬದಲಾವಣೆ ಆಗಿವೆ. ಹೊಸ ಹೊಸ ನಿಯಮಗಳು ಸಂಚಾರ ನಿಯಮದಲ್ಲಿ ಸೇರಿಕೊಳ್ಳುತ್ತಿವೆ. ಇನ್ನು ಕೇಂದ್ರ ರಸ್ತೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸಂಚಾರ ನಿಯಮದಲ್ಲಿ ಅನೇಕ ಬದಲಾವಣೆಯನ್ನು ಜಾರಿಮಾಡಿದ್ದಾರೆ. ಇದೀಗ ಸಂಚಾರ ನಿಯಮದಲ್ಲಿ ಹೊಸ ಬದಲಾವಣೆ ತರಲಾಗಿದೆ. ಈ ಹೊಸ ನಿಯಮದ ಕುರಿತು ಮಾಹಿತಿ ತಿಳಿಯೋಣ.

Minor's Traffic Rules 2024
Image Credit: Timesbull

ಸಂಚಾರ ನಿಯಮದಲ್ಲಿ ಹೊಸ ಬದಲಾವಣೆ
ರಸ್ತೆ ಅಪಘಾತವನ್ನು ಕಡಿಮೆ ಮಾಡುವ ಸಲುವಾಗಿ ಸಾರಿಗೆ ಇಲಾಖೆ ಹೊಸ ಹೊಸ ನಿಯವನ್ನು ಜಾರಿಗೆ ತರುತ್ತಿರುತ್ತದೆ. ಇದರಿಂದ ಸಂಭವಿಸುವ ಪ್ರಾಣಹಾನಿಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದಾಗಿದೆ. ಇದೀಗ ಸರ್ಕಾರ ಮಕ್ಕಳಿಗೆ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ನೀಡುವುದನ್ನು ನಿಷೇಧಿಸಿದೆ. ಹೌದು ಇದೀಗ ಸಾರಿಗೆ ಇಲಾಖಾ ಮಕ್ಕಳ ಪೋಷಕರಿಗೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

Traffic Rules 2024
Image Credit: Karnatakatimes

18 ವರ್ಷಕ್ಕಿಂತ ಕೆಳಗಿನವರು ವಾಹನ ಚಲಾಯಿಸಿದರೆ ಈ ಶಿಕ್ಷೆ ಜೊತೆಗೆ ಇಷ್ಟು ದಂಡ
ಇನ್ನು ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟವರಿಗೆ ವಾಹನ ಪವಾರವಾನಗಿಯನ್ನು ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರು ವಾಹನವನ್ನು ಚಲಾಯಿಸಲು ಅರ್ಹರಾಗಿರುತ್ತಾರೆ. ಇನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನವನ್ನು ಚಲಾಯಿಸುವುದು ಕಾನೂನು ವಿರೋಧವಾಗಿದೆ. ಹೌದು ಇದೀಗ ಯುಪಿ (Uttar Pradesh Government) ಸರ್ಕಾರ ರಸ್ತೆ ಅಪಘಾತವನ್ನು ಗಮದಲ್ಲಿಟ್ಟುಕೊಂಡು ಹೊಸ ನಿಯಮವನ್ನು ಜಾರಿಗೆ ತಂದಿದೆ.

ಇನ್ನುಮುಂದೆ 18 ವರ್ಷಕ್ಕಿಂತ ಕೆಳಗಿನವರು ವಾಹನ ಚಲಾಯಿಸುವಂತಿಲ್ಲ. ಒಂದು ವೇಳೆ ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸುದು ತಪಾಸಣೆ ವೇಳೆ ಸಿಕ್ಕಿಬಿದ್ದರೆ 25 ಸಾವಿರ ದಂಡ ಹಾಗೂ 3 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಯುಪಿ ಸಾರಿಗೆ ಆಯುಕ್ತರು ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಸದ್ಯ ಈ ನಿಯಮ ಉತ್ತರ ಪ್ರದೇಶ ರಾಜ್ಯದಲ್ಲಿ ಇದ್ದು ನಮ್ಮ ರಾಜ್ಯದಲ್ಲಿ ಕೂಡ 18 ವರ್ಷಕ್ಕಿಂತ ಕೆಳಗಿನವರು ವಾಹನ ಚಲಾಯಿಸುವುದು ನಿಷೇಧವಾಗಿದೆ.

Join Nadunudi News WhatsApp Group

Join Nadunudi News WhatsApp Group