Driving Rules: ಕಾರ್ ಮತ್ತು ಬೈಕ್ ಇದ್ದವರಿಗೆ ಕೇಂದ್ರ ಹೊಸ ರೂಲ್ಸ್, ಇಂತವರಿಗೆ ವಾಹನ ನೀಡಿದರೆ 25000 ರೂ ದಂಡ

ವಾಹನ ಇದ್ದವರಿಗೆ ಹೊಸ ರೂಲ್ಸ್, ಈ ತಪ್ಪು ಮಾಡಿದರೆ 25000 ರೂ ದಂಡ

Minors Vehicle Driving Fine: ರಸ್ತೆಗಳಲ್ಲಿ ಹೆಚ್ಚಾಗಿ ವಾಹನ ಅಪಘಾತಗಳು ಸಂಭವಿಸುತ್ತದೆ. ಅಪಘಾತಗಳ ತಡೆಗಾಗಿ ಸರ್ಕಾರ ವಿವಿಧ ರೀತಿಯ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಸಾಕಷ್ಟು ಸಂಚಾರ ನಿಯಮಗಳು ಜಾರಿಯಾಗಿವೆ. ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕೂಡ ರಸ್ತೆ ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿರುತ್ತದೆ.

ಇದೀಗ ಅಪ್ರಾಪ್ತ ಮಕ್ಕಳು ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುತ್ತಿರುವುದು ಸಂಚಾರಿ ಪೋಲೀಸರ ಗಮನಕ್ಕೆ ಬಂದಿದೆ. ಈ ಹಿನ್ನಲೆ ಸರ್ಕಾರ ಅಪ್ರಾಪ್ತ ಮಕ್ಕಳ ವಾಹನ ಸವಾರಿಗೆ ಹೊಸ ನಿಯನವನ್ನೇ ರೂಪಿಸಿದೆ.

Minors Vehicle Driving
Image Credit: Original Source

ಪೋಷಕರೇ ಈ ಹೊಸ ಟ್ರಾಫಿಕ್ ನಿಯಮದ ಬಗ್ಗೆ ತಿಳಿದುಕೊಳ್ಳಿ
ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟವರಿಗೆ ವಾಹನ ಪವಾರವಾನಗಿಯನ್ನು ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರು ವಾಹನವನ್ನು ಚಲಾಯಿಸಲು ಅರ್ಹರಾಗಿರುತ್ತಾರೆ. ಇನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನವನ್ನು ಚಲಾಯಿಸುವುದು ಕಾನೂನು ವಿರೋಧವಾಗಿದೆ. ಈ ಕಾನೂನಿನ ನಿಯಮವನ್ನು ಉಲ್ಲಂಘಿಸಿ ಕೆಲ ಪೋಷಕರು ತಮ್ಮ ಮಕ್ಕಳಿಗೆ ವಾಹನವನ್ನು ಚಲಾಯಿಸಲು ಕೊಡುತ್ತಾರೆ. ಈ ಕಾರಣದಿಂದ ಸಂಚಾರ ನಿಯಮದಲ್ಲಿ ಬದಲಾವಣೆ ತರಲಾಗಿದೆ.

ಅಪ್ರಾಪ್ತರು ವಾಹನ ಚಲಾಯಿಸಿದರೆ ಕಟ್ಟಬೇಕು 25 ಸಾವಿರ ದಂಡ
ವಾಹನ ಚಲಾಯಿಸಲು ನಿಗದಿತ ವಯೋಮಿತಿಯನ್ನು ಇರಿಸಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವುದು ಅಪರಾಧವಾಗಿದೆ. ಇನ್ನು ದ್ವಿಚಕ್ರವಾಹನದಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ.

Minors Vehicle Driving Fine
Image Credit: Hindustantimes

ಕಾನೂನಿನ ನಿಯಮವನ್ನು ವಿರೋಧಿಸಿ ನೀವು ನಿಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನವನ್ನು ನೀಡಿದರೆ 25 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಇನ್ನುಮುಂದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವ ಮುನ್ನ ಪೋಷಕರು ಎಚ್ಚರ ವಹಿಸುವುದು ಸೂಕ್ತ. ಸಂಚಾರ ನಿಯಮ ಉಲ್ಲಂಘಿಸಿದರೆ ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ ಎನ್ನುವುದು ನಿಮ್ಮ ಗಮನದಲ್ಲಿರಲಿ.

Join Nadunudi News WhatsApp Group

Join Nadunudi News WhatsApp Group