PM Modi: ಕರೋನ ಸಮಯದಲ್ಲಿ ಚಪ್ಪಾಳೆ ತಟ್ಟಲು ಹೇಳಿದ್ದರ ಹಿಂದೆ ಇರುವ ಅಸಲು ಕಾರಣ ತಿಳಿಸಿದ ಮೋದಿ, ನಿಜಕ್ಕೂ ಗ್ರೇಟ್

ಕರೋನ ಮಹಾಮಾರಿ ಸಮಯದಲ್ಲಿ ಚಪ್ಪಾಳೆ ತಟ್ಟಿದ್ದರ ಹಿಂದಿನ ಸತ್ಯ ಹೇಳಿಕೊಂಡ ನರೇಂದ್ರ ಮೋದಿ

PM Modi Latest News: ಸೋಮವಾರ ದೆಹಲಿಯ ಭಾರತ್ ಮಂಟಪದಲ್ಲಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗಳ (ಪರೀಕ್ಷಾ ಪೇ ಚರ್ಚಾ 2024) ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಚರ್ಚಿಸಿದರು. ವಿದ್ಯಾರ್ಥಿಗಳ ಜೊತೆ ಪರೀಕ್ಷೆಯ ಭಯ ಹೋಗಲಾಡಿಕೆಯ ಬಗ್ಗೆ ಸಂವಾದ ನಡೆಸಿದ ಮೋದಿ ಯವರು ಪೋಷಕರು ಮಕ್ಕಳನ್ನು ಪರೀಕ್ಷೆಯ ಸಮಯದಲ್ಲಿ ಹೇಗೆ ರೆಡಿ ಮಾಡಬೇಕು,

ಶಿಕ್ಷಕರು ಯಾವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಬೇಕು ಅಂತೆಲ್ಲ ಮಾತನಾಡಿದ್ದರು ಈ ವೇಳೆ ಕೊರೊನಾ ಅವಧಿಯ ಬಗ್ಗೆಯೂ ಪ್ರಧಾನಿ ಮಾತನಾಡಿ ಅಂದಿನ ಕ್ಷಣಗಳನ್ನು ನೆನಪಿಸಿಕೊಂಡರು. ಕರೋನ ಸಮಯದಲ್ಲಿ ಚಪ್ಪಾಳೆ ತಟ್ಟಿದರೆ ಹಿಂದಿನ ಸತ್ಯವನ್ನ ನರೇಂದ್ರ ಮೋದಿಯವರು ಹೇಳಿಕೊಂಡಿದ್ದಾರೆ 

PM Modi Latest News
Image Credit: Zeebiz

ಪ್ರಧಾನಿ ಮೋದಿಯವರು ಕೊರೊನ ಸಮಯದಲ್ಲಿ ಹೇಳಿದ್ದೇನು?

ಕೊರೊನ ಇಡೀ ದೇಶವನ್ನು ವ್ಯಾಪಿಸಿತು, ಅನೇಕ ಸಾವು ನೋವುಗಳು ಸಂಭವಿಸಿದ್ದನ್ನು ಕೇಳಿದ್ದೇವೆ. 22 ಮಾರ್ಚ್ 2020 ರಂದು (ಭಾನುವಾರ) ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಸಾರ್ವಜನಿಕ ಕರ್ಫ್ಯೂ ಘೋಷಿಸಿದರು. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಮಾಧ್ಯಮದವರಿಗೆ ಧನ್ಯವಾದ ಹೇಳಬೇಕೆಂದು ಅವರು ಸಾರ್ವಜನಿಕರಿಗೆ ಕರೆ ನೀಡಿದರು.

ಪ್ರಧಾನಿ ಮೋದಿ ಕೃತಜ್ಞತೆ ವ್ಯಕ್ತಪಡಿಸುವ ಮಾರ್ಗವನ್ನೂ ಹೇಳಿದರು. ಮಾರ್ಚ್ 22ರಂದು ಸರಿಯಾಗಿ ಸಂಜೆ 5 ಗಂಟೆಗೆ ನಿಮ್ಮ ಮನೆ ಬಾಗಿಲಿಗೆ, ಕಿಟಕಿ ಅಥವಾ ಬಾಲ್ಕನಿಯಲ್ಲಿ ನಿಂತು ನಿಮ್ಮ ಕೈಗಳನ್ನ ಚಪ್ಪಾಳೆ ತಟ್ಟುವ ಮೂಲಕ ಮತ್ತು ನಿಮ್ಮ ಫಲಕಗಳನ್ನ 5 ನಿಮಿಷಗಳ ಕಾಲ ಬಡಿಯುವ ಮೂಲಕ ನಿಮ್ಮ ಕೃತಜ್ಞತೆಯನ್ನ ತೋರಿಸಿ. ಸಂಜೆ 5 ಗಂಟೆಗೆ ಸೈರನ್ ಬಾರಿಸುವ ಮೂಲಕ ಜನರಿಗೆ ಈ ಬಗ್ಗೆ ನೆನಪಿಸುವಂತೆ ಪ್ರಧಾನಿ ಮೋದಿ ಅಧಿಕಾರಿಗಳಿಗೆ ಸೂಚಿಸಿದರು.

Join Nadunudi News WhatsApp Group

PM Modi At Pariksha Pe Charcha 2024
Image Credit: Morungexpress

ಕಷ್ಟದ ಸಮಯಗಳನ್ನ ಧೈರ್ಯದಿಂದ ಎದುರಿಸುವುದು ಮುಖ್ಯ

“ಕರೋನಾ ಸಮಯದಲ್ಲಿ ಚಪ್ಪಾಳೆ ತಟ್ಟುವಂತೆ ನಾನು ದೇಶದ ಜನರನ್ನ ಕೇಳಿದ್ದೆ. ಆದ್ರೆ, ಇದು ಕೊರೊನಾವನ್ನ ತೊಡೆದುಹಾಕುವುದಿಲ್ಲ. ಆದ್ರೆ, ಸಾಮೂಹಿಕ ಶಕ್ತಿಯನ್ನ ಹೆಚ್ಚಿಸುತ್ತದೆ. ಆಟದ ಮೈದಾನಕ್ಕೆ ಹೋದವರು ಕೆಲವೊಮ್ಮೆ ಜಯಶಾಲಿಯಾಗಿ ಹಿಂತಿರುಗುತ್ತಾರೆ. ಅನೇಕರು ವಿಫಲರಾಗುತ್ತಾರೆ. ಯಾರಿಗೆ ಅಧಿಕಾರವಿದೆಯೋ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಉತ್ತಮ ಸರ್ಕಾರ ನಡೆಸಲು, ಈ ಸಮಸ್ಯೆಗಳನ್ನ ಪರಿಹರಿಸಲು ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ಕ್ಷೇತ್ರದಿಂದ ಬರಬೇಕು ಎಂದು ಪ್ರಧಾನಿ ಹೇಳಿದರು.

ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಗಾಬರಿಯಾಗಬೇಡಿ ಎಂದು ಮಕ್ಕಳಿಗೆ ಪ್ರಧಾನಿ ಸಲಹೆ ನೀಡಿದರು. “ನಾನು ಎಂದಿಗೂ ಒಂಟಿತನ ಅನುಭವಿಸಲು ಸಾಧ್ಯವಿಲ್ಲ. 140 ಕೋಟಿ ದೇಶವಾಸಿಗಳು ನನ್ನೊಂದಿಗಿದ್ದಾರೆ ಎಂದು ನಾನು ನಂಬುತ್ತೇನೆ. ನಾವು ಪ್ರತಿ ಸವಾಲನ್ನು ಜಯಿಸುತ್ತೇವೆ. ಇದು ನನ್ನ ನಂಬಿಕೆ, ಅದಕ್ಕಾಗಿಯೇ ನಾನು ದೇಶವನ್ನ ಮುನ್ನಡೆಸಲು ನನ್ನ ಶಕ್ತಿಯನ್ನ ವಿನಿಯೋಗಿಸುತ್ತಿದ್ದೇನೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಈ ಸಂಕಷ್ಟದ ಕಾಲದಿಂದ ಹೊರಬರುತ್ತೇವೆ. ಅದಕ್ಕಾಗಿಯೇ ನಾನು ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ನಾನು ಜನರೊಂದಿಗೆ ಮಾತನಾಡುತ್ತಿದ್ದೆ” ಎಂದು ಪ್ರಧಾನಿ ಹೇಳಿದರು.

Join Nadunudi News WhatsApp Group