PM Modi: ಗಾಂಧಿ ಯಾರು ಅಂತಾನೆ ನನಗೆ ಗೊತ್ತಿಲ್ಲ, ಮಹಾತ್ಮಾ ಗಾಂಧಿ ಬಗ್ಗೆ ನರೇಂದ್ರ ಮೋದಿ ಸ್ಪೋಟಕ ಹೇಳಿಕೆ.

ಮಹಾತ್ಮಾ ಗಾಂಧಿ ಬಗ್ಗೆ ನರೇಂದ್ರ ಮೋದಿ ಸ್ಪೋಟಕ ಹೇಳಿಕೆ

Modi About Mahatma Gandhi: ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ಚುನಾವಣಾ ಪ್ರಚಾರಗಳು ಜೋರಾಗಿಯೇ ನಡೆಯುತ್ತಿದೆ. ಪಕ್ಷಗಳು ತಮ್ಮ ಪ್ರತಿಪಕ್ಷಗಳನ್ನು ಟೀಕಿಸುವುದು ನಡೆಯುತ್ತಲೇ ಇದೆ. ಇದರಿಂದಾಗಿಯೇ ಅದೆಷ್ಟೋ ವಿವಾದ ಹುಟ್ಟಿಕೊಂಡಿದೆ.

ಸದ್ಯ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸದ್ಯ ಹೊಸ ವಿವಾದವನ್ನು ಹುಟ್ಟಿಹಾಕಿದೆ. ಹೌದು, ಸಂದರ್ಶನವೊಂದರಲ್ಲಿ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ಅವರ ಬಗ್ಗೆ ಆಡಿದ ಮಾತುಗಳು ಸದ್ಯ ವಿವಾದವನ್ನು ಸೃಷ್ಟಿಸಿದೆ. ಮೋದಿ ಅವರ ಈ ಸ್ಪೋಟಕ ಹೇಳಿಕೆ ಬಾರಿ ಚರ್ಚೆಯನ್ನು ಹುಟ್ಟುಹಾಕಿದೆ ಎನ್ನಬಹುದು.

Modi About Mahatma Gandhi
Image Credit: News 18

ಗಾಂಧಿ ಯಾರು ಅಂತಾನೆ ನನಗೆ ಗೊತ್ತಿಲ್ಲ
1982ರಲ್ಲಿ ರಿಚರ್ಡ್ ಅಟೆನ್ಬರೋ ಅವರ ‘ಗಾಂಧಿ’ ಸಿನಿಮಾ ನಿರ್ಮಾಣವಾಗುವವರೆಗೂ ಮಹಾತ್ಮಾ ಗಾಂಧಿ ಬಗ್ಗೆ ಜಗತ್ತಿಗೆ ಗೊತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಮಹಾತ್ಮ ಗಾಂಧಿ ಅವರಿಗೆ ಅರ್ಹವಾದ ರೀತಿಯಲ್ಲಿ ಪ್ರಚಾರ ಮಾಡಲಿಲ್ಲ ಎಂದು ಮೋದಿ ಟೀಕಿಸಿದರು. ಸಂದರ್ಶನವೊಂದರಲ್ಲಿ ಮಾತನಾಡಿದ ಮೋದಿ, ಕಳೆದ 75 ವರ್ಷಗಳಲ್ಲಿ ಗಾಂಧಿಯವರ ಉನ್ನತ ಜಾಗತಿಕ ಖ್ಯಾತಿಯನ್ನು ಭದ್ರಪಡಿಸುವುದು ದೇಶದ ಕೆಲಸವಲ್ಲವೇ ಎಂದು ಪ್ರಶ್ನಿಸಿದರು.

ಮಹಾತ್ಮಾ ಗಾಂಧಿ ಬಗ್ಗೆ ನರೇಂದ್ರ ಮೋದಿ ಸ್ಪೋಟಕ ಹೇಳಿಕೆ
ಮಹಾತ್ಮ ಗಾಂಧಿ ಒಬ್ಬ ಮಹಾನ್ ಚೇತನ. ಕಳೆದ 75 ವರ್ಷಗಳಲ್ಲಿ ಅವರಿಗೆ ಆ ಮಟ್ಟದ ಜಾಗತಿಕ ಮನ್ನಣೆ ಸಿಗುವಂತೆ ಮಾಡುವುದು ನಮ್ಮ ಜವಾಬ್ದಾರಿಯಲ್ಲವೇ…? ಯಾರಿಗೂ ತಿಳಿದಿರಲಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ. ಮೊದಲ ಬಾರಿಗೆ, ಗಾಂಧಿ ಚಲನಚಿತ್ರವನ್ನು (1982) ಮಾಡಿದಾಗ, ಅವರು ಯಾರಾಗಿರಬಹುದು ಎಂದು ಜಗತ್ತು ಆಶ್ಚರ್ಯ ಪಡಿತು. ಅಗತ್ಯವಿರುವುದನ್ನು ನಾವು ಮಾಡಲಿಲ್ಲ… ಜಗತ್ತಿಗೆ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ತಿಳಿದಿದ್ದರೆ, ಗಾಂಧಿ ಅವರಿಗಿಂತ ಕಡಿಮೆಯಿಲ್ಲ ಮತ್ತು ನೀವು ಅದನ್ನು ಒಪ್ಪಿಕೊಳ್ಳಬೇಕು. ಗಾಂಧಿ ಮತ್ತು ಅವರ ಮೂಲಕ ಭಾರತವನ್ನು ಗುರುತಿಸಬೇಕಾಗಿತ್ತು ಎಂದು ನಾನು ಪ್ರಪಂಚದಾದ್ಯಂತ ಪ್ರಯಾಣಿಸಿದ ನಂತರ ಹೇಳುತ್ತಿದ್ದೇನೆ, ”ಎಂದು ಅವರು ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಪ್ರತಿಪಕ್ಷಗಳ ತಿಳುವಳಿಕೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Mahatma Gandhi And Prime Minister Narendra Modi
Image Credit: India Today

Join Nadunudi News WhatsApp Group

Join Nadunudi News WhatsApp Group