Modi Meditation: ಕಡಲ ಮಧ್ಯೆ ಹಗಲು ರಾತ್ರಿ ಧ್ಯಾನ, ಫಲಿತಾಂಶಕ್ಕೂ ಮುನ್ನ ಮೋದಿಯ ಹೊಸ ತಂತ್ರ ಏನು.

ಚುನಾವಣೆಯ ಫಲಿತಾಂಶಕ್ಕೂ ಮೊದಲೇ ನರೇಂದ್ರ ಮೋದಿ ಕನ್ಯಾಕುಮಾರಿಗೆ ಹೋಗಿದ್ದೇಕೆ

Modi Meditation In Kanyakumari: ಪ್ರಸ್ತುತ ಲೋಕಸಭಾ ಚುನಾವಣೆ 2024 ಕೊನೆಯ ಹಂತದಲ್ಲಿದೆ. ಇನ್ನು ಜೂನ್ 1 ರಂದು ಕೊನೆಯ ಹಂತದ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರವನ್ನು ಪಡೆಯಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಕೊನೆಯ ಹಂತದ ಚುನಾವಣೆಯು ಬಾಕಿ ಇದ್ದ ಕಾರಣ ಚುನಾವಣಾ ಪ್ರಚಾರಗಳು ಜೋರಗಿಯೇ ನಡೆಯುತ್ತಿದೆ.

ಇನ್ನು 5 ವರ್ಷಗಳ ಕಾಲ ಅಧಿಕಾರವನ್ನು ಪಡೆಯಲು ಪ್ರಧಾನಿ ಮೋದಿ ಅವರು ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಚುನಾವಣೆಯ ಮುಕ್ತಾಯ ಎರಡು ದಿನಗಳ ಹಿಂದೆ ಪ್ರಚಾರವನ್ನು ನಿಲ್ಲಿಸಬೇಕಾಗುತ್ತದೆ. ಸದ್ಯ ಮೋದಿ ಅವರು ಕೊನೆಯ ಹಂತದ ಚುನಾವಣೆಯ ಸಮಯದಲ್ಲಿ ಹೊಸ ಯೋಜನೆ ಹಾಕಿಕೊಂಡಿದ್ದಾರೆ.

Modi Meditation In Kanyakumari
Image Credit: Onmanorama

ಫಲಿತಾಂಶಕ್ಕೂ ಮುನ್ನ ಮೋದಿಯ ಹೊಸ ತಂತ್ರ ಏನು
ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ಮೋದಿ ವಿಶ್ರಾಂತಿಗಾಗಿ ಆಧ್ಯಾತ್ಮಿಕತೆಯತ್ತ ಮುಖ ಮಾಡಲಿದ್ದಾರೆ. ಮೇ 30 ರಿಂದ ಜೂನ್ 1 ರ ವರೆಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಮೋದಿ ಇರಲಿದ್ದು, ಪ್ರಸಿದ್ಧ ವಿವೇಕಾನಂದ ಸ್ಮಾರಕದಲ್ಲಿ ಹಗಲು ರಾತ್ರಿ ಧ್ಯಾನದಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ. ಗುರುವಾರ ಸಂಜೆ ಕನ್ಯಾಕುಮಾರಿಯಲ್ಲಿರುವ ತಮಿಳು ಸಂತ ತಿರುವಳ್ಳುವರ್ ಅವರ ಏಕಶಿಲಾ ಪ್ರತಿಮೆ ಬಳಿಯಿರುವ ಸುಂದರ ವಿಆರ್‌ಎಂ ಗೆ ಪ್ರಧಾನಿ ಆಗಮಿಸುವ ನಿರೀಕ್ಷೆಯಿದೆ. ಜೂನ್ 1 ರಂದು ದೆಹಲಿಗೆ ಹೋಗಬಹುದು. ಅವರ ಭೇಟಿ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ ಇಲ್ಲ.

ಮೋದಿಯವರ ವೇಳಾಪಟ್ಟಿಯನ್ನು ನಾವು ಒಂದು ದಿನ ಮುಂಚಿತವಾಗಿಯೇ ತಿಳಿಯುತ್ತೇವೆ ಎಂದು ಬಿಜೆಪಿ ನಾಯಕರು ಪಿಟಿಐಗೆ ತಿಳಿಸಿದ್ದಾರೆ. ಮೋದಿ ತಮ್ಮ ಆಧ್ಯಾತ್ಮಿಕ ತಾಣವಾಗಿ ಕನ್ಯಾಕುಮಾರಿಯನ್ನು ಆರಿಸಿಕೊಂಡರು. ಇದು ದೇಶಕ್ಕಾಗಿ ವಿವೇಕಾನಂದರ ದೃಷ್ಟಿಕೋನವನ್ನು ಅನುಷ್ಠಾನಗೊಳಿಸುವ ಅವರ ಬದ್ಧತೆಯನ್ನು ತೋರಿಸುತ್ತದೆ ಎಂದು ಪಕ್ಷದ ಪದಾಧಿಕಾರಿಗಳು ಹೇಳಿದ್ದಾರೆ.

Modi Meditation
Image Credit: Newsdrum

ಕಡಲ ಮಧ್ಯೆ ಹಗಲು ರಾತ್ರಿ ಧ್ಯಾನ
ಪ್ರಧಾನ ಮಂತ್ರಿಗಳು ಧ್ಯಾನ ಮಾಡುವ ಈ ಬಂಡೆಯು ವಿವೇಕಾನಂದರ ಜೀವನದ ಮೇಲೆ ಪ್ರಮುಖ ಪ್ರಭಾವ ಬೀರಿತು. ವಿವೇಕಾನಂದರು ದೇಶ ಸುತ್ತಿದ ನಂತರ ಇಲ್ಲಿಗೆ ಆಗಮಿಸಿದರು ಮತ್ತು ಮೂರು ದಿನಗಳ ಕಾಲ ಧ್ಯಾನ ಮಾಡಿದರು. ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಹೊಂದಿದ್ದರು. ಅದೇ ಸ್ಥಳದಲ್ಲಿ ಧ್ಯಾನ ಮಾಡುವುದು ವೀಕ್ಷಿತ್ ಭಾರತ್‌ ನ ದೃಷ್ಟಿಕೋನವನ್ನು ಜೀವಂತಗೊಳಿಸುವ ಪ್ರಧಾನಿ ಮೋದಿಯವರ ಬದ್ಧತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

Join Nadunudi News WhatsApp Group

Modi Meditation Latest News
Image Credit: ETV Bharat

Join Nadunudi News WhatsApp Group