Mukesh Ambani: ಕಾರುಗಳ ಉದ್ಯಮಕ್ಕೆ ಕಾಲಿಟ್ಟ ಮುಕೇಶ್ ಅಂಬಾನಿ, ಇನ್ನುಮುಂದೆ ಕಡಿಮೆ ಬೆಲೆಗೆ ಸಿಗಲಿದೆ ಕಾರ್ಸ್.

ಎಂ ಜಿ ಮೋಟರ್ಸ್ ಗೆ ಕಾಲಿಟ್ಟ ಉದ್ಯಮಿ ಮುಕೇಶ್ ಅಂಬಾನಿ.

Mukesh Ambani Car Industry: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ (Mukesh Ambani) ಇತ್ತೀಚಿಗೆ ಹೊಸ ಹೊಸ ಉದ್ಯಮಗಳನ್ನು ಪ್ರಾರಂಭಿಸುತ್ತಿದ್ದಾರೆ. ಇದೀಗ ಮುಕೇಶ್ ಅಂಬಾನಿ ಕಾರುಗಳ ಉದ್ಯಮ (Car Industry) ಮಾಡಲು ಕಾಲಿಟ್ಟಿದ್ದಾರೆ. ಈಗಾಗಲೇ ಮುಕೇಶ್ ಅಂಬಾನಿ ಅವರು ತೈಲ ಮತ್ತು ಅನಿಲ, ಟೆಲಿಕಾಂ ಹಾಗೂ ಚಿಲ್ಲರೆ ವ್ಯಾಪಾರಗಳನ್ನು ನಡೆಸುತ್ತಿದ್ದಾರೆ. ಇದೀಗ ಕಾರುಗಳ ಉದ್ಯಮ ಪ್ರಾರಂಭಿಸಲು ಮುಕೇಶ್ ಅಂಬಾನಿ ಪ್ರಾರಂಭಿಸಿದ್ದಾರೆ.

Mukesh Ambani Car Industry
Image Credit: cnn

ಕಾರುಗಳ ಉದ್ಯಮಕ್ಕೆ ಕಾಲಿಟ್ಟ ಮುಕೇಶ್ ಅಂಬಾನಿ
ಪೌರಾಣಿಕ ಕಾರು ಕಂಪನಿ MG ಮೋಟಾರ್ಸ್ (MG Motors) ನ ಭಾರತೀಯ ವ್ಯಾಪಾರವನ್ನು ಮುಕೇಶ್ ಅಂಬಾನಿ ಖರೀದಿಸಬಹುದು ಎನ್ನುವ ಸುದ್ದಿಯಾಗಿದೆ. ಮೂಲಗಳಿಂದ ತಿಳಿದುಬಂದ ವರದಿಯ ಪ್ರಕಾರ, ಚೀನಾದ ಕಂಪನಿ SAIC ಒಡೆತನದ MG ಮೋಟಾರ್ಸ್ ಭಾರತದಲ್ಲಿ ತನ್ನ ವ್ಯವಹಾರವನ್ನು ಮಾರಾಟ ಮಾಡಲು ಪರಿಗಣಿಸುತ್ತಿದೆ.

ಇದಕ್ಕಾಗಿ MG ಮೋಟಾರ್ಸ್ ದೇಶದ ದೇಶದ ಹಲವಾರು ಪ್ರಮುಖ ವ್ಯಾಪಾರ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದ್ದೆ. ಏತನ್ಮತೆ, ರಿಲಯನ್ಸ್ ಇಂಡಸ್ಟ್ರೀಸ್ ಕೂಡ ಕಾರು ವ್ಯಾಪಾರವನ್ನು ಖರೀದಿಸಲು ಮುಂದಾಗಿದೆ ಎಂದು ಮೂಲಗಳಿಂದಾ ವರದಿಯಾಗಿದೆ. ರಿಲಯನ್ಸ್ ಹೊರತುಪಡಿಸಿ, ದ್ವಿಚಕ್ರ ವಾಹನ ತಯಾರಕರಾದ ಹೀರೋ ಗ್ರೂಪ್, ಪ್ರೇಮ್ಜಿ ಇನ್ವೆಸ್ಟ್ ಮತ್ತು ಜೆಎಸ್ಡಬ್ಲ್ಯೂ ಗ್ರೂಪ್ ಕೂಡ ಪೈಪೋಟಿವ್ ನಡೆಸುತ್ತಿದೆ.

MG motors
Image Credit: indiatimes

ಈ ವರ್ಷದ ಅಂತ್ಯದ ವೇಳೆಗೆ ಎಂಜಿ ಮೋಟಾರ್ ಈ ಒಪ್ಪಂದವನ್ನು ಪೂರ್ಣಗೊಳಿಸಬಹುದು ಎನ್ನಲಾಗುತ್ತಿದೆ. ಪ್ರಸ್ತುತ ಎಂಜಿ ಮೋಟಾರ್ಸ್ ನ ಆಡಳಿತವು ಒಪ್ಪಂದಕ್ಕೆ ಸಂಭಂದಿಸಿದಂತೆ ಭಾರತೀಯ ಘಟಕಕ್ಕೆ ಆಕರ್ಷಕ ಮೌಲ್ಯಮಾಪವನ್ನು ಹುಡುಕುತ್ತಿದೆ. ಆದರೆ ಹೀರೋ ಗ್ರೂಪ್, ಪ್ರೇಮ್ಜಿ ಇನ್ವೆಸ್ಟ್ ಮತ್ತು ಜೆಎಸ್ಡಬ್ಲ್ಯೂ ಗ್ರೂಪ್ ಜೊತೆಗಿನ ಮಾತುಕತೆಗಳು ಕೇವಲ ಊಹಾಪೋಹಗಳು ಎನ್ನಲಾಗುತ್ತಿದೆ.

Join Nadunudi News WhatsApp Group

Join Nadunudi News WhatsApp Group