Modi Guarantee: ದೇಶದ ಜನತೆಗೆ ಇನ್ನೊಂದು ಗ್ಯಾರೆಂಟಿ ನೀಡಿದ ನರೇಂದ್ರ ಮೋದಿ, ಪ್ರತಿ ಪೈಸೆ ಕೂಡ ನಿಮಗೆ ವಾಪಸ್ ಸಿಗಲಿದೆ

ಕೋಟಿ ಕೋಟಿ ಹಣ ವಂಚನೆಯ ಕುರಿತು ನರೇಂದ್ರ ಮೋದಿ ಪ್ರತಿಕ್ರಿಯೆ

Narendra Modi Tweet About Dhiraj Sahu: ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ನಡೆದ ದಾಳಿಯಲ್ಲಿ ಇದುವರೆಗೆ 100 ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆಯಾಗಿದೆ. ಇಷ್ಟು ದೊಡ್ಡ ಮೊತ್ತದ ನಗದು ಪತ್ತೆಯಾಗಿರುವ ಕಾರಣ ಆದಾಯ ತೆರಿಗೆ ಇಲಾಖೆ ತಂಡ ಯಂತ್ರದ ಮೂಲಕ ನೋಟುಗಳನ್ನು ಎಣಿಕೆ ಮಾಡಬೇಕಾಗಿ ಬಂದಿದೆ.

ಜಾರ್ಖಂಡ್‌ನ ಧೀರಜ್ ಸಾಹು ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ಸತತ ಮೂರನೇ ದಿನವೂ ಮುಂದುವರೆದಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಿ Narendra Modi ಸಿಡಿದೆದ್ದಿದ್ದು, ಲೆಕ್ಕಕ್ಕೆ ಸಿಗದ ಹಣಗಳ ಬಗ್ಗೆ ಜನಸಾಮಾನ್ಯರಿಗೆ ಒಂದು ಮಾಹಿತಿಯನ್ನು ನೀಡಿದ್ದಾರೆ.

narendra modi tweet about dhiraj sahu
Image Credit: Opindia

ಬಹುಕೋಟಿ ಒಡೆಯ ಸಂಸದ ಧೀರಜ್ ಸಾಹು

ರೆಡ್ ಬೌದ್ಧ ಡಿಸ್ಟಿಲರಿ ಇದು ಸಂಸದ ಧೀರಜ್ ಸಾಹು ಅವರ ಕುಟುಂಬದ ಕಂಪನಿಯಾಗಿದೆ. ಅವರು ಒಡಿಶಾದಲ್ಲಿ ಅನೇಕ ಮದ್ಯ ತಯಾರಿಕಾ ಕಾರ್ಖಾನೆಗಳನ್ನು ಹೊಂದಿದ್ದಾರೆ. ಅವಿಭಕ್ತ ಕುಟುಂಬದ ಬೆಂಬಲದೊಂದಿಗೆ ಈ ವ್ಯವಹಾರ ನಡೆಸಲಾಗುತ್ತಿದೆ. ಜಾರ್ಖಂಡ್‌ನ ಬೋಲಂಗಿರ್ ಮತ್ತು ಒಡಿಶಾದ ಸಂಬಲ್‌ ಪುರದ ಧೀರಜ್ ಸಾಹು ಅವರ ಪೂರ್ವಜರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

200 ಕೋಟಿ ನಗದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿವೆ. ಜಾರ್ಖಂಡ್‌ನ ರಾಂಚಿ ಮತ್ತು ಲೋಹರ್ಡಗಾದಲ್ಲಿರುವ ಸಂಸ್ಥೆಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ನಗದು ಪತ್ತೆಯಾಗಿರುವ ಚಿತ್ರಗಳು ಕೂಡ ಹೊರಬಿದ್ದಿದ್ದು, ಅಲ್ಮೇರಾದಲ್ಲಿ 500 ಮತ್ತು 200 ರೂಪಾಯಿ ನೋಟುಗಳ ಬಂಡಲ್‌ ಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ.

Join Nadunudi News WhatsApp Group

ಪ್ರತಿ ಪೈಸೆಯನ್ನೂ ವಾಪಸ್ ಕೊಡಲೇಬೇಕು

ಜಾರ್ಖಂಡ್‌ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ನಿವಾಸದ ಮೇಲೆ ಆದಾಯ ತೆರಿಗೆ ದಾಳಿ ಮತ್ತು ನೂರಾರು ಕೋಟಿ ಮೌಲ್ಯದ ನಗದು ವಶಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ PM Modi ಅವರು ಟ್ವೀಟ್​ನಲ್ಲಿ, ‘ದೇಶವಾಸಿಗಳು ಈ ನೋಟುಗಳ ರಾಶಿಯನ್ನು ನೋಡಿ ಆ ನಂತರ ಪ್ರಾಮಾಣಿಕತೆಯನ್ನು ನಿರ್ಣಯಿಸಬೇಕು. ಯಾವುದೇ ನಾಯಕ ಸಾರ್ವಜನಿಕರಿಂದ ಏನೇ ಲೂಟಿ ಮಾಡಿದ್ದರೂ ಪ್ರತಿ ಪೈಸೆಯನ್ನೂ ವಾಪಸ್ ಕೊಡಲೇಬೇಕು. ಇದು ಮೋದಿ ಗ್ಯಾರಂಟಿ ಎಂದಿದ್ದಾರೆ.

ಕಾಂಗ್ರೆಸ್ ನಾಯಕರು ದೇಶವನ್ನು ಹಾಳು ಮಾಡಿದ್ದಾರೆ

ಜಾರ್ಖಂಡ್‌ನ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ದೀಪಕ್ ಪ್ರಕಾಶ್ ಮಾತನಾಡಿ, ‘ಕಾಂಗ್ರೆಸ್‌ನ ಒಬ್ಬ ಸಂಸದನ ಮನೆಯಿಂದ ಇಷ್ಟು ದೊಡ್ಡ ಮೊತ್ತ ವಶಪಡಿಸಿಕೊಂಡಿದ್ದು, 70 ವರ್ಷದಿಂದ ದೇಶವನ್ನು ಹಾಳು ಮಾಡುತ್ತಿರುವವರು ಇನ್ನೂ ಎಷ್ಟು ಮಂದಿ ಇರಬಹುದೆಂದು ಊಹಿಸಬಹುದು ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್, ಐಟಿ ದಾಳಿಯಲ್ಲಿ 200 ಕೋಟಿ ರೂ. ಪತ್ತೆಯಾಗಿದ್ದು, ಕಾಂಗ್ರೆಸ್ ಭ್ರಷ್ಟಾಚಾರ ಎಲ್ಲರಿಗೂ ಗೊತ್ತು. ಈ ಬಗ್ಗೆ ಜನರೂ ತಮ್ಮ ಆಕ್ರೋಶ ವ್ಯಕ್ತಪಡಿಸಬೇಕು ಎಂದಿದ್ದಾರೆ.

Join Nadunudi News WhatsApp Group