Modi Viral Video: ಪಾಕಿಸ್ತಾನದಲ್ಲಿ ವೈರಲ್ ಆಯಿತು ಮೋದಿ ಹಳೆ ವಿಡಿಯೋ.

Narendra Modi Viral Video In Pakistan: ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದಲ್ಲಿ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಬಡವರಿಗೆ, ಮಾಧ್ಯಮ ವರ್ಗದವರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಇನ್ನು ಮುಂದೆ ಸಹ ಹೊಸ ಹೊಸ ಯೋಜನೆಗಳನ್ನು ನರೇಂದ್ರ ಮೋದಿ ಜಾರಿಗೆ ತರಲಿದ್ದಾರೆ.

Modi's old video went viral in Pakistan.
Image Credit: thestatesman

ಪಾಕಿಸ್ತಾನದಲ್ಲಿ ಮೋದಿ ಭಾಷಣ ವೈರಲ್
ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡು ಆಹಾರಕ್ಕೂ ತತ್ವಾರ ಎದುರಾಗಿದೆ. ಇಂತಹ ಸ್ಥಿತಿಯಲ್ಲಿ ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ನೇತೃತ್ವದಲ್ಲಿ ಪಕ್ಷ ಪಾಕಿಸ್ತಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಹಳೆಯ ವಿಡಿಯೋ ಒಂದನ್ನು ವೈರಲ್ ಮಾಡಿದೆ.

ಇಸ್ಲಾಮಾಬಾದ್ ಪಾಕಿಸ್ತಾನದಲ್ಲಿ ಪ್ರಧಾನಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದ್ದು ಆಹಾರಕ್ಕೂ ತತ್ವಾರ ಎದುರಾಗಿದೆ. ಇಂತಹ ಸ್ಥಿತಿಯಲ್ಲಿ ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಕ್ಷ ಪಾಕಿಸ್ತಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಹಳೆಯ ವಿಡಿಯೋ ಒಂದನ್ನು ವೈರಲ್ ಮಾಡಿದೆ.

A video of Narendra Modi's speech during Pakistan's economic crisis has gone viral
Image Credit: timesofindia.indiatimes

ಪಾಕಿಸ್ತಾನದ ಅಹಂಕಾರ ಮುರಿದಿದ್ದೇವೆ ಎಂದು ಭಾಷಣ ಮಾಡಿದ ನರೇಂದ್ರ ಮೋದಿ
ಪಾಕ್ ನಲ್ಲಿ ಪ್ರಧಾನಿ ಮೋದಿ ಅವರ ವಿಡಿಯೋ ಟ್ರೆಂಡ್ ಆಗುತ್ತಿದೆ. ಈ ವಿಡಿಯೋ ಅನ್ನು ಆಡಳಿತಾ ರೂಢ ಶೆಹಬಾಜ್ ಶರೀಫ್ ನೇತ್ರತದ ಸರ್ಕಾರವನ್ನು ಟೀಕಿಸಲು ಇಮ್ರಾನ್ ಖಾನ್ ಸರ್ಕಾರ ಅಸ್ತ್ರವಾಗಿ ಬಳಸಿಕೊಳ್ಳತೊಡಗಿದೆ.

Join Nadunudi News WhatsApp Group

ಪಾಕಿಸ್ತಾನದಲ್ಲಿ ವೈರಲ್ ಆಗುತ್ತಿರುವ ಮೋದಿಯ ಭಾಷಣ ಇದಾಗಿದ್ದು 2019 ರ ಸಾರ್ವತ್ರಿಕ ಚುನಾವಣೆ ವೇಳೆ ರಾಜಸ್ಥಾನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನಾವು ಪಾಕಿಸ್ತಾನದ ಅಹಂಕಾರವನ್ನು ಮುರಿದಿದ್ದೇವೆ. ಅವರು ಜಾಗತಿಕ ಸಮುದಾಯದ ಎದುರು ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತೆ ಮಾಡಿದ್ದೇವೆ ಎಂದು ಹೇಳಿದ್ದರು.

Modi's speech saying that Pakistan's pride has been broken has now gone viral in Pakistan
Image Credit: indianexpress

ನರೇಂದ್ರ ಮೋದಿ ಅವರ ಹಳೆಯ ಭಾಷಣ ವೈರಲ್
ಭಾರತಕ್ಕೆ ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಯ ಬಗ್ಗೆಯೂ ಮಾತನಾಡಿರುವ ಪ್ರಧಾನಿ ಮೋದಿ, ನಾವು ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ಹೆದರುವುದನ್ನು ನಿಲ್ಲಿಸಿದ್ದೇವೆ. ಅವರ ಬಳಿ ಅಣ್ವಸ್ತ್ರ ಶಸ್ತ್ರಾಸ್ತ್ರಗಳು ಇದ್ದಾರೆ, ನಮ್ಮದೇನು ದೀಪಾವಳಿಗಾಗಿಯೇ ಇಟ್ಟಿದ್ದೇವೆಯೇ ಎಂದು ಪ್ರಶ್ನಿಸಿದರು.

ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ದಿವಾಳಿಯಾಗುವ ಅಂಚಿನಲ್ಲಿದ್ದು, ಪಿಟಿಐ (PTI) ಬೆಂಬಲಿಗರು ಪಾಕ್ ಆರ್ಥಿಕತೆಯನ್ನು ಸರಿದಾರಿಗೆ ತರಲಾಗದ ಶೆಹಬಾಜ್ ಷರೀಫ್ ಸರ್ಕಾರವನ್ನು ಟೀಕಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಭಾಷಣದ ವಿಡಿಯೋವನ್ನು ವೈರಲ್ ಮಾಡತೊಡಗಿದ್ದಾರೆ.

Join Nadunudi News WhatsApp Group