Modi About Varaha Roopam: ವರಾಹ ರೂಪಂ ಹಾಡಿನ ನೃತ್ಯ ವೀಕ್ಷಿಸಿದ ಮೋದಿ, ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ.

Narendra Modi Like Kantara Varaha Roopam Song: ರಿಷಬ್ ಶೆಟ್ಟಿ (Rishabh Shetty) ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರ (Kantara Movie) ದೇಶದಾದ್ಯಂತ ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದೆ.

ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ, ಮಲಯಾಳಂ, ತುಳು ಭಾಷೆಗಳಲ್ಲೂ ಕೂಡ ಕಾಂತಾರ ಹೆಸರು ಗಳಿಸಿದೆ. ಕಾಂತಾರ ಚಿತ್ರವನ್ನು ಇಡೀ ದೇಶಕ್ಕೆ ದೇಶವೇ ಮೆಚ್ಚಿಕೊಂಡಿವೆ.

 Barisu Kannada Dindimava program held in Delhi.
Image Credit: hindustantimes

ಕಾಂತಾರ ಚಿತ್ರದ ಜೊತೆಗೆ ಚಿತ್ರದಲ್ಲಿನ ಪ್ರತಿಯೊಂದು ಹಾಡು ಕೂಡ ಎಲ್ಲರ ಮನ ಗೆದ್ದಿದೆ. ಇದೀಗ ದೇಶದ ಪ್ರಧಾನಿ ಮೋದಿ (Pradhani Modi) ಅವರು ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ (Varaha Roopam Song) ನ್ರತ್ಯವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

Prime Minister Narendra Modi expressed his appreciation after seeing the dance of the Varaha Rupam song from the movie Kantara.
Image Credit: Youtube

ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ
ಫೆಬ್ರವರಿ 25 ರಂದು ದೆಹಲಿಯ ಟಾಲ್ಕಟೋರ ಸ್ಟೇಡಿಯಂ ನಲ್ಲಿ ನಡೆದ ಬಾರಿಸು ಕನ್ನಡ ಡಿಂಡಿಮವ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೂಡ ಭಾಗವಹಿಸಿದ್ದರು.

ದೆಹಲಿಯ ಕರ್ನಾಟಕ ಸಂಘದ ಚಾರಿತ್ರಿಕ ಪಾರಂಪರಿಕ ಸಂಭ್ರಮಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶೇಷ ಅತಿಥಿಗಳಲ್ಲಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Join Nadunudi News WhatsApp Group

Prime Minister Narendra Modi watched the dance of Varaha Rupam song from the movie Kantara.
Image Credit: youtube

ವರಾಹ ರೂಪಂ ಹಾಡಿಗೆ ನ್ರತ್ಯ ಮಾಡಿದ ಕಲಾ ತಂಡ
ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದಲ್ಲಿ ಕಲಾ ತಂಡ ಕಾಂತಾರ ಚಿತ್ರದ ಜನಪ್ರಿಯ ಹಾಡು ವರಾಹ ರೂಪಂ ಹಾಡಿಗೆ ನ್ರತ್ಯ ಮಾಡಿದ್ದರು. ವರಾಹ ರೂಪಂ ಹಾಡಿನ ನ್ರತ್ಯವನ್ನು ಪ್ರಧಾನಿ ಮೋದಿ ಅವರು ಕೂಡ ವೀಕ್ಷಿಸಿದ್ದರು. ವಿದ್ವಾನ್ ಕೋಲಾರ್ ರಮೇಶ್ ನೇತೃತ್ವದಲ್ಲಿ ನ್ರತ್ಯ ರೂಪಕವನ್ನ ಪ್ರದರ್ಶನ ಮಾಡಲಾಗಿತ್ತು.

Prime Minister Narendra Modi watched the dance of Varaha Rupam song from the movie Kantara.
Image Credit: youtube

ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ವೀರೇಂದ್ರ ಹೆಗ್ಡೆ ಅವರು ಕೂಡ ಭಾಗವಹಿಸಿದ್ದರು. ಪ್ರಧಾನಿ ಮೋದಿ ಅವರು ಕಾಂತಾರ ಚಿತ್ರವನ್ನು ವೀಕ್ಷಿಸಿ ರಿಷಬ್ ಶೆಟ್ಟಿ ಅವರಿಗೆ ಮೆಚ್ಚುಗೆ ಸೂಚಿಸಿದ್ದರು. ಇದೀಗ ವರಾಹ ರೂಪಂ ಹಾಡಿನ ನ್ರತ್ಯ ವೀಕ್ಷಿಸಿದ ನರೇಂದ್ರ ಮೋದಿ ಅವರು ನ್ರತ್ಯವನ್ನು ಕೂಡ ಮೆಚ್ಚಿಕೊಂಡಿದ್ದಾರೆ.

Join Nadunudi News WhatsApp Group