NPS: ಮಹಿಳೆ ಪುರುಷರು ಎಲ್ಲರಿಗೂ ಸಿಗಲಿದೆ ಈ ಹೊಸ ಪಿಂಚಣಿ ಸ್ಕೀಮ್, ಕೇವಲ 100 ರೂನಲ್ಲಿ.

ಹಿರಿಯ ನಾಗರೀಕರಿಗಾಗಿ ಬಂತು ಹೊಸ ಪಿಂಚಣಿ ಯೋಜನೆ, 100 ರೂಪಾಯಿ ಹೂಡಿಕೆ ಮಾಡುವ ಮೂಲಕ ಪಡೆಯಿರಿ 57 ಸಾವಿರ ರೂಪಾಯಿ ಲಾಭ.

National Pension Scheme: ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು ಜಾರಿಯಲ್ಲಿದೆ. ಹಿರಿಯ ನಾಗರೀಕರಿಗಾಗಿ ಪಿಂಚಣಿ ಯೋಜನೆಗಳು ಸಹ ಲಭ್ಯವಿದೆ. ವೃದ್ದಾಪ್ಯಕ್ಕಾಗಿ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ.

ಕೇಂದ್ರ ಸರ್ಕಾರ(Central Government) ಜನಸಾಮಾನ್ಯರಿಗಾಗಿ ವಿವಿಧ ಯೋಜನೆಯನ್ನು ಜಾರಿಗೊಳಿಸುತ್ತದೆ. ದೇಶದ ಬಡ ನಾಗರಿಕರು ಸರಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಾರೆ. ಇನ್ನು ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ ಹಾಗು ಹಿರಿಯ ನಾಗರೀಕರ ಅನುಕೂಲಕ್ಕಾಗಿ ಸರಕಾರ ಹೊಸ ಹೊಸ ಯೋಜನೆಯನ್ನು ಜಾರಿಗೊಳಿಸುತ್ತದೆ.

New pension scheme for senior citizens
Image Credit: Odishatv

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(National Pension System)
ಕೇಂದ್ರ ಸರ್ಕಾರವು ಕೆಲವು ಪಿಂಚಣಿ ಯೋಜನೆಗಳನ್ನು ಪರಿಚಯಿಸಿದೆ. ಕೆಲಸದಿಂದ ನಿವೃತ್ತರಾದ ನಂತರವೂ ನೀವು ನಿಯಮಿತ ಆದಾಯವನ್ನು ಪಡೆಯಬಹುದು. ಪಿಂಚಣಿ ನಿಮಗೆ ಹಣದ ಕೊರತೆಯಾಗಲು ಬಿಡುವುದಿಲ್ಲ. ಸರ್ಕಾರದಿಂದ ಅನೇಕ ಪಿಂಚಣಿ ಯೋಜನೆಗಳು ನಡೆಯುತ್ತಿವೆ. ಇವುಗಳಲ್ಲಿ ಒಂದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ. ಯಾವುದೇ ನಾಗರಿಕರು ಈ ಯೋಜನೆಯಡಿ ಹೂಡಿಕೆ ಮಾಡಬಹುದು.

NPS ನಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಿರಿ
ನಿವೃತ್ತಿಯ ನಂತರ ಇದರ ಅಡಿಯಲ್ಲಿ ಒಟ್ಟು ಮೊತ್ತವನ್ನು ಪಡೆಯುವುದಲ್ಲದೆ, ಪ್ರತಿ ತಿಂಗಳು ಪಿಂಚಣಿ ಪ್ರಯೋಜನವೂ ಲಭ್ಯವಿದೆ. NPS ನ ವೆಬ್ ಸೈಟ್ ಮೂಲಕ ನೀವು ಅದರಲ್ಲಿ ಹೂಡಿಕೆ ಮಾಡಬಹುದು ಮತ್ತು ಇಲ್ಲಿ ಆದಾಯ ಮತ್ತು ಪ್ರಯೋಜನಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. NPS ಕ್ಯಾಲ್ಕುಲೇಟರ್ ಸಹ ಇಲ್ಲಿ ಲಭ್ಯವಿದೆ. ನೀವು ಹೂಡಿಕೆ ಮಾಡಲು ಬಯಸಿದರೆ, ಅಗತ್ಯಕ್ಕೆ ಅನುಗುಣವಾಗಿ ಹೂಡಿಕೆಯ ಲಾಭವನ್ನು ನೀವು ಪಡೆಯಬಹುದು.

national pension scheme latest update
Image Credit: Businesstoday

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಅತಿ ಕಡಿಮೆ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ದಿನಕ್ಕೆ 100 ರೂಪಾಯಿ ಉಳಿಸುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ದಿನಕ್ಕೆ 100 ರೂಪಾಯಿ ಉಳಿಸುವ ಮೂಲಕ ನೀವು 57000 ರೂಪಾಯಿ ಪಿಂಚಣಿ ಪಡೆಯಬಹುದು.

Join Nadunudi News WhatsApp Group

NPS ನಲ್ಲಿ ನೀವು 25 ನೇ ವಯಸ್ಸಿನಲ್ಲಿ ದಿನಕ್ಕೆ 50 ರೂಪಾಯಿಗಳನ್ನು ಹೂಡಿಕೆ ಮಾಡಲು ಪ್ರಾರಂಭಿಸಿದರೆ ನಂತರ 60 ನೇ ವಯಸ್ಸಿನಲ್ಲಿ 5742416 ರೂಪಾಯಿಗಳನ್ನು ಪಡೆಯಬಹುದು. ಇದಕ್ಕೆ ವಾರ್ಷಿಕ ಶೇಕಡಾ 10 ಬಡ್ಡಿ ನೀಡಬೇಕು. ನೀವು 75 ವರ್ಷ ವಯಸ್ಸಿನವರೆಗೂ ಹೂಡಿಕೆ ಮಾಡಬಹುದು. ಈ ಯೋಜನೆಯಿಂದ ಹೊರ ಹೋಗುವ ಸಮಯದಲ್ಲಿ ಹೂಡಿಕೆದಾರರು 100 ಪ್ರತಿಶತದಷ್ಟು ಕಾರ್ಪಸ್ ನೊಂದಿಗೆ ವರ್ಷಾಶನ ಯೋಜನೆಯನ್ನು ಖರೀದಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

Join Nadunudi News WhatsApp Group