Education System: 9, 10, 11 ಮತ್ತು 12 ನೇ ತರಗತಿ ಮಕ್ಕಳ ಪಠ್ಯದಲ್ಲಿ ಹೊಸ ನಿಯಮ, ಶಿಕ್ಷಣ ಇಲಾಖೆ ಮಹತ್ವದ ಘೋಷಣೆ.

ಮಕ್ಕಳ ಪಠ್ಯ ಕ್ರಮದಲ್ಲಿ ಬದಲಾವಣೆಯನ್ನ ಜಾರಿಗೆ ತಂದ ಶಿಕ್ಷಣ ಇಲಾಖೆ, ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ನಿಯಮ.

New Education In Karnataka: ವಿದ್ಯಾರ್ಥಿಗಳ ಶಿಕ್ಷಣ ನೀತಿಯಲ್ಲಿ ಇತ್ತೀಚಿಗೆ ಶಿಕ್ಷಣ ಇಲಾಖೆ ಸಾಕಷ್ಟು ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಲು ಯೋಜನೆ ಹೂಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇದೀಗ ಪರೀಕ್ಷೆಗಳು ಮುಗಿದು ಇನ್ನೇನು ಬೇಸಿಗೆ ರಜೆ ಆರಂಭವಾಗಲಿದೆ.

ಎಸ್ ಎಸ್ ಎಲ್ ಸಿ (SSLC) ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಇನ್ನು ಮೇ 29 2023 ರಿಂದ ಮತ್ತೆ ಶಾಲಾ ಕಾಲೇಜುಗಳು ಆರಂಭಗೊಳ್ಳಲಿದೆ. ಇದೀಗ ಶಿಕ್ಷಣ ಇಲಾಖೆ 9, 10, 11, 12 ತರಗತಿಗಳ ಶಿಕ್ಷಣದಲ್ಲಿ ಬಾರಿ ಬದಲಾವಣೆ ತರಲಿದ್ದಾರೆ. ಈ ಬಾರಿಯ ಶಿಕ್ಷಣ ನೀತಿಯಲ್ಲಿನ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳೋಣ.

New rule in text for 9th, 10th, 11th and 12th class children, Education Department Important Announcement
Image Credit: abplive

ಕರಡು ಪೂರ್ವ ಪಠ್ಯ ಕ್ರಮ ಬಿಡುಗಡೆ
9 ರಿಂದ 12 ನೇ ತರಗತಿಗಳ ಶಿಕ್ಷಣದಲ್ಲಿ ಈ ಬಾರಿ ಕೇಂದ್ರ ಸರ್ಕಾರ ಬಾರಿ ಬದಲಾವಣೆ ತರಲಿದೆ. ಕರಡು ಪೂರ್ವ ಪಠ್ಯ ಕ್ರಮ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಪಿಯುಸಿ (PUC) ವಿದ್ಯಾರ್ಥಿಗಳಿಗೆ ಎರಡು ಬಾರಿ ಸೆಮಿಸ್ಟರ್ ಪರೀಕ್ಷೆಯನ್ನು ಜಾರಿಗೆ ತರಲಿದ್ದಾರೆ. ಈ ಹಿಂದೆ ಇರುವ 10 +2 ನೀತಿಯ ಬದಲಾಗಿ 5 +3 +3 +4 ಪದ್ಧತಿ ಜಾರಿಗೆ ಬರಲಿದೆ.

Karnataka Education Department to implement new education policy for middle and higher level children
Image Credit: indiatvnews

ಎಸ್ಎಸ್ಎಲ್ ಸಿ ಹಾಗು ಪಿಯುಸಿ ಶಿಕ್ಷಣದಲ್ಲಿ ಬಾರಿ ಬದಲಾವಣೆ
ಈ ಬಾರಿ ಶಿಕ್ಷಣ ನೀತಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಅಂಕಗಳನ್ನು ನೀಡುವ ಸಮಯದಲ್ಲಿ ಹಿಂದಿನ ತರಗತಿಯ ಪರೀಕ್ಷಾ ಅಂಕಗಳನ್ನು ಪರಿಗಣಿಸಲಾಗುತ್ತದೆ.

ಅಂದರೆ 10 ನೇ ತರಗತಿಗೆ 9 ನೇ ತರಗತಿಯ ಅಂಕ ಹಾಗೂ 12 ನೇ ತರಗತಿಗೇ 11 ತರಗತಿಯ ಅಂಕಗಳನ್ನು ಪರೀಕ್ಷಾ ಮೌಲ್ಯಮಾಪನ ಸಮಯದಲ್ಲಿ ಪರಿಗಣಿಸಲಾಗುತ್ತದೆ. ಈ ಬಾರಿ 11 ಮತ್ತು 2 ನೇ ತರಗತಿಯ ವಿದ್ಯಾರ್ಥಿಗಳು ಒಟ್ಟು 16 ವಿಷಯಗಳು ಹಾಗು 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು 8 ವಿಷಯಗಳನ್ನು ಓದಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group