New Rules For Ramzan: ರಂಜಾನ್ ಗಾಗಿ ಹೊಸ ಗೈಡ್ ಲೈನ್ಸ್! ದ್ವನಿವರ್ಧಕ ಬಳಕೆ ಮಾಡುವಂತಿಲ್ಲ.

New Guidlines For Ramzan: ಇದೇ ತಿಂಗಳು ಅಂದರೆ ಮಾರ್ಚ್(March) 22 ರಿಂದ ರಂಜಾನ್(Ramzan) ಹಬ್ಬ ಶುರುವಾಗಲಿದೆ. ಹಾಗಾಗಿ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವವರು ಅಥವಾ ಅಲ್ಲಿಗೆ ಹೋಗಲು ಬಯಸುವವರು ಈ ವಿಷಯವನ್ನು ಗಮನಿಸಬೇಕು. ಏಕೆಂದರೆ ಸೌದಿ ಅರೇಬಿಯಾ ಸರ್ಕಾರವು ಮಾರ್ಚ್ 22 ರಿಂದ ಸೌದಿಯಲ್ಲಿ ರಂಜಾನ್ ಆಚರಣೆಗೆ ಸಂಬಂಧಪಟ್ಟ ಹಾಗೆ ಹೊಸ ಮಾರ್ಗಸೂಚಿಗಳನ್ನ ಜಾರಿಗೆ ತಂದಿದೆ.

ಆ ನಿಯಮಗಳ ಮುಖ್ಯ ಭಾಗವಾಗಿ ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳ ಮೇಲೆ ನಿಷೇಧ ಹೇರಲಾಗಿದೆ. ಪ್ರಾರ್ಥನೆಯ ನೇರ ಪ್ರಸಾರವು ಇರುವುದಿಲ್ಲ.

New Guide Lines for RamZan
Image Source: I Stock

ರಂಜಾನ್ ನ ಮಾರ್ಗಸೂಚಿಗಳು;

1. ರಂಜಾನ್ ಸಂದರ್ಭದಲ್ಲಿ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ.
2. ರಂಜಾನ್ ಸಮಯದಲ್ಲಿ ಹಬ್ಬಕ್ಕಾಗಿ ದೇಣಿಗೆ ಕೇಳುವುದನ್ನ ನಿಷೇಧಿಸಲಾಗಿದೆ.
3. ಮಸೀದಿಯೊಳಗೆ ರಂಜಾನ್ ಹಬ್ಬವನ್ನು ನಡೆಸುವಂತಿಲ್ಲ. ಬದಲಿಗೆ ಹೊರ ಪ್ರದೇಶದಲ್ಲಿ ರಂಜಾನ್ ಹಬ್ಬದ ಆಯೋಜನೆ ಮಾಡಲಾಗುವುದು. ಈ ಹಬ್ಬದ ಆಚರಣೆಯ ಮೇಲ್ವಿಚಾರಣೆ ಇಮಾಮ್ ಅವರು ನೋಡಿಕೊಳ್ಳುತ್ತಾರೆ.
4. ಇನ್ನು ಇಮಾಮ್ ರಂಜಾನ್ ತಿಂಗಳ ಪೂರ್ತಿ ಮಸೀದಿಯಲ್ಲಿಯೇ ಇರುತ್ತಾರೆ.
5. ಇಮಾಮ್ ಗಳು ಪ್ರಾರ್ಥನೆಯನ್ನು ಸರಿಯಾದ ಸಮಯಕ್ಕೆ ಮುಗಿಸಿ ಇತರರಿಗೂ ಪ್ರಾರ್ಥನೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು.
6. ಮಕ್ಕಳಿಗೆ ಮಸೀದಿಯಲ್ಲಿ ನಮಾಜ್ ಮಾಡುವುದಕ್ಕೆ ಅವಕಾಶವಿಲ್ಲ.
7. ರಂಜಾನ್ ಸಮಯದಲ್ಲಿ ಯಾವುದೇ ಪ್ರಚಾರವನ್ನು ಮಾಡುವಂತಿಲ್ಲ ಅದರ ಮೇಲೆಯೂ ನಿಷೇಧ ಹೇರಲಾಗಿದೆ.

New Guide Lines for RamZan
Image Source: BBC

ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದೇನು!?
ಸೌದಿ ಕ್ರೌನ್ ಪ್ರಿನ್ಸ್ ಹಾಗೂ ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ತಮ್ಮ ವಿಷನ್ 2030ರ ಅಡಿಯಲ್ಲಿ ರಂಜಾನ್ ಆಚರಣೆಗೆ ಸಂಬಂಧಪಟ್ಟ ಹಾಗೆ ಈ ಹೊಸ ಹಾಗೂ ದೊಡ್ಡ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.

Join Nadunudi News WhatsApp Group

New Guide Lines for RamZan
Image Source: India Today

ಸೌದಿ, ತೈಲದ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಅವರ ಪ್ರಯತ್ನಗಳಲ್ಲಿ ಒಂದು. ಸೌದಿ ಅರೇಬಿಯಾದಿಂದ ತೈಲ ಆರ್ಥಿಕತೆಯ ಟ್ಯಾಗ್ ಹೊಂದಿರುವುದನ್ನ ಮೊದಲು ತೆಗೆದು ಹಾಕಬೇಕು. ಈ ಮಾರ್ಗಸೂಚಿಗಳನ್ನು 2030ಕ್ಕೆ ಲಿಂಕ್ ಮಾಡಿ ಕ್ರೌನ್ ಪ್ರಿನ್ಸ್ ಹೊರಡಿಸಿದ್ದಾರೆ.

New Guide Lines for RamZan
Image Source: India Today

Join Nadunudi News WhatsApp Group