LKG Admission: ಎಲ್ ಕೆಜಿ ದಾಖಲಾತಿಯಲ್ಲಿ ಹೊಸ ನಿಯಮ, ದಾಖಲಾತಿಗೆ 4 ವರ್ಷ ಕಡ್ಡಾಯ.

ಎಲ್ ಕೆಜಿ ದಾಖಲಾತಿಯಲ್ಲಿ ಹೊಸ ನಿಯಮವನ್ನು ಜಾರಿಗೆಯನ್ನು ತಂದ ಶಿಕ್ಷಣ ಇಲಾಖೆ.

New Rule For LKG Students: ಇತ್ತೀಚಿನ ದಿನಗಳಲ್ಲಿ ಶಾಲಾ ಶೈಕ್ಷಣಿಕ ವಿಚಾರವಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತವೆ. ಈ ಸಾಲಿನ ಶೈಕ್ಷಣಿಕ ವರ್ಷ ಸಾಕಷ್ಟು ರೀತಿಯ ಬದಲಾವಣೆಯನ್ನು ತಂದಿದೆ. ಇನ್ನು ಶಾಲಾ ಮಕ್ಕಳು ಇದೀಗ ಬೇಸಿಗೆ ರಜೆಯನ್ನು ಪಡೆದಿದ್ದಾರೆ. ಶಾಲೆಗಳಿಂದ ದೂರ ಇದ್ದು ಮನೆಯಲ್ಲಿ ಬೇಸಿಗೆ ರಜೆಯನ್ನು ಕಳೆಯುತ್ತಿದ್ದಾರೆ. ಇನ್ನು ಇದೀಗ ಎಲ್ ಕೆಜಿ ದಾಖಲಾತಿಯಲ್ಲಿ ಶಿಕ್ಷಣ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಶಿಕ್ಷಣ ಇಲಾಖೆಯ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯೋಣ.

new rule for lkg kids
Image Credit: you tube

ಎಲ್ ಕೆಜಿ ದಾಖಲಾತಿಯಲ್ಲಿ ಹೊಸ ನಿಯಮ
ಇನ್ನು ಶಾಲಾ ಮಕ್ಕಳಿಗೆ ಮೇ 29 ರಿಂದ ಶಾಲಾ ಕಾಲೇಜುಗಳು ಪುನಃ ಆರಂಭಗೊಳ್ಳಲಿದೆ. ಈಗಾಗಲೇ ಶಾಲಾ ದಾಖಲಾತಿಯಲ್ಲಿ ಅನೇಕ ನಿಯಮಗಳು ಬದಲಾಗಿವೆ. ಇದೀಗ ಎಲ್ ಕೆಜಿ ದಾಖಲಾತಿಯಲ್ಲಿ ಕೂಡ ಅನೇಕ ನಿಯಮಗಳು ಬದಲಾವಣೆ ಆಗಿದೆ. ಪೋಷಕರು ಮಕ್ಕಳ ದಾಖಲಾತಿ ಮಾಡುವಾಗ ಹೊಸ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.

ಜೂನ್ 1 ನೇ ತಾರೀಕಿನಿಂದ ಹೊಸ ನಿಯಮ
ಶಿಕ್ಷಣ ಇಲಾಖೆಯು ಜ್ಞಾಪಕ ಪತ್ರ ಹೊರಡಿಸಿದೆ. ಜೂನ್ 1 ಕ್ಕೆ ನಾಲ್ಕು ವರ್ಷ ಪೂರ್ಣಗೊಂಡ ಮಕ್ಕಳು ಮಾತ್ರ ಈ ಬಾರಿ ಎಲ್ ಕೆಜಿ ಸೇರಿಸಬಹುದಾಗಿದೆ. ಒಂದನೇ ತರಗತಿ ಪ್ರವೇಶ ನೀಡಬೇಕಾದರೆ ಒಂದು ಮಗುವಿಗೆ ಆರು ವರ್ಷ ಆಗಿರಬೇಕು ಎಂದು ಇಲಾಖೆ ಆದೇಶ ಹೊರಡಿಸಿದೆ.

New rule in registration of LKG
Image Credit: syft

ಈ ಆದೇಶವನ್ನು 2023 -24 ಸಾಲಿನಿಂದ ಜಾರಿಗೆ ತರಬೇಕು ಎಂದು ಸೂಚಿಸಲಾಗಿದೆ. ಇನ್ನು ಈ ಆದೇಶಕ್ಕೆ ಶಾಲಾ ಆಡಳಿತ ಮಂಡಳಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಈ ಕಾರಣದಿಂದ 2025 -26 ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದೆ. ಹೀಗಾಗಿ 2025 -26 ಸಾಲಿನಲ್ಲಿ ಎಲ್ ಕೆಜಿ ಸೇರುವ ಮಗುವಿಗೆ ನಾಲ್ಕು ವರ್ಷಗಳು ಪೂರ್ಣಗೊಂಡಿರಬೇಕು.

Join Nadunudi News WhatsApp Group

Join Nadunudi News WhatsApp Group