December Rule: ಡಿಸೇಂಬರ್ 1 ರಿಂದ ಬದಲಾಗಲಿವೆ ಈ ಎಲ್ಲ ನಿಯಮಗಳು, ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ

ಡಿಸೇಂಬರ್ ತಿಂಗಳಿನಿಂದ ಯಾವೆಲ್ಲ ನಿಯಮಗಳು ಬದಲಾಗಲಿವೆ ಎಂದು ತಿಳಿದುಕೊಳ್ಳಿ.

New Rule From December 1st: ಸದ್ಯ 2023 ರ ಕೊನೆಯ ತಿಂಗಳು ಇನ್ನೇನು 3 ದಿನಗಳಲ್ಲಿ ಮುಗಿಯಲಿದೆ. ಪ್ರತಿ ತಿಂಗಳು ಆರಂಭವಾಗುತ್ತಿದ್ದಂತೆ ದೇಶದಲ್ಲಿ ಹೊಸ ನಿಯಮ ಜಾರಿಗೆ ಬರುತ್ತದೆ. ಹೌದು ಹೊಸ ವರ್ಷದ ಆರಂಭಕ್ಕೂ ಮುನ್ನವೇ ದೇಶದಲ್ಲಿ ಕೆಲವು ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು ಇದು ಜನರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

ಈ ಬಾರಿ ಕೂಡ 2023 ರ ಕೊನೆಯ ತಿಂಗಳಿನಲ್ಲಿ ಕೂಡ ಕೆಲ ನಿಯಮಗಳು ಬದಲಾಗಲಿವೆ. ಈ ಹೊಸ ನಿಯಮಗಳು ಜನರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಜನರ ವಹಿವಾಟಿನ ಕೆಲಸದಲ್ಲಿ ಬದಲಾವಣೆ ಆಗಲಿದೆ. ಅಷ್ಟಕ್ಕೂ ಡಿ. ತಿಂಗಳಿನಲ್ಲಿ ಬದಲಾಗುವ ನಿಯಮಗಳು ಯಾವುವು..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Google Account Delete
Image Credit: Groovypost

*Google Account Delete
ಸದ್ಯ ಗೂಗಲ್ ಎರಡು ವರ್ಷಗಳಿಂದ ಬಳಸದ Gmail Account ಗಳನ್ನ ಡಿಲೀಟ್ ಮಾಡಲು ತೀರ್ಮಾನವನ್ನ ಮಾಡಿದೆ. ಗೂಗಲ್ ಖಾತೆಯನ್ನು ನಿಷ್ಕ್ರಿಯ ಗೊಳಿಸುವ ಮೊದಲು ತನ್ನ ಬಳಕೆದಾರರಿಗೆ ಸಂದೇಶವನ್ನು ಕಳುಹಿಸುತ್ತದೆ. ನಿಮ್ಮ ಖಾತೆಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಗೂಗಲ್ ನಿಮಗೆ ಇಮೇಲ್ ಗಳನ್ನೂ ಕನಿಷ್ಠ 8 ತಿಂಗಳ ಮೊದಲು ಕಳುಹಿಸುತ್ತದೆ.

ನೀವು ಇತ್ತೀಚೆಗೆ ನಿಮ್ಮ ಖಾತೆಯನ್ನು ಸೈನ್ ಇನ್ ಮಾಡಿದ್ದರೆ ನಿಮ್ಮ ಖಾತೆ ಸಕ್ರಿಯವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಅಳಿಸುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಎರಡು ವರ್ಷಗಳಿಂದ ಸೈನ್ ಇನ್ ಆಗದ ಜಿಮೈಲ್ ಖಾತೆಯನ್ನು December 1 ರ ನಂತರ ಬ್ಯಾನ್ ಮಾಡಲು ಗೂಗಲ್ ನಿರ್ಧರಿಸಿದೆ.

Sim Card Rule
Image Credit: Informalnewz

*Sim Card Rule
ಇನ್ನುಮುಂದೆ ಹೊಸ ಫೋನ್ ಸಿಮ್ ಡೀಲರ್ ಗಳಿಗೆ ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ. ಎಲ್ಲಾ ಸೇಲ್ ಡೀಲರ್ ಗಳಿಗೆ ನೋಂದಣಿ ಕಡ್ಡಾಯವಾಗಿದೆ. ಇನ್ನು ಸಿಮ್ ಕಾರ್ಡ್ ಗಳನ್ನೂ ಮಾರಾಟ ಮಾಡುವ ಅಸ್ತಿತ್ವದಲ್ಲಿರುವ ಅಂಗಡಿಗಳು ಸಹ ಈಗಾಗಲೇ ಹೊಸ ನಿಯಮದ ಪ್ರಕಾರ ತಮ್ಮ KYC ಅನ್ನು ಮಾಡಬೇಕಾಗಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 10 ಲಕ್ಷ ದಂಡ ವನ್ನು ವಿಧಿಸಲಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ. ಡಿ. 1 ರಿಂದ ಹೊಸ ಸಿಮ್ ಖರೀದಿ ಮತ್ತು ಮಾರಾಟಕ್ಕೆ ಹೊಸ ನಿಯಮ ಜಾರಿಗೆ ಬರಲಿದೆ.

Join Nadunudi News WhatsApp Group

Visa Free Entry
Image Credit: Deccan Herald

*Visa Free Entry
ಮಲೇಷ್ಯಾದಲ್ಲಿ ಭಾರತೀಯರು ಮತ್ತು ಚೀನಾದ ಪ್ರಜೆಗಳಿಗೆ 30 ದಿನಗಳವರೆಗೆ ವೀಸಾ ಮುಕ್ತವಾಗಿ ಉಳಿಯಲು ಅವಕಾಶ ನೀಡಲಾಗುವುದು ಎಂದು ಪ್ರಧಾನಿ ಅನ್ವರ್ ಇಬ್ರಾಹಿಂ ಘೋಷಿಸಿದ್ದಾರೆ. ಈ ಕ್ರಮವು ಮಲೇಷಿಯಾದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯಿದೆ, ಇದು ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಹೆಚ್ಚುವರಿ ಪ್ರವಾಸಿಗರನ್ನು ತರುತ್ತದೆ ಎಂದು ಮಲೇಷ್ಯಾ ನಂಬುತ್ತದೆ.

*G20 ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ
ಡಿ. 1 2023 ರ ಸಮಯದಲ್ಲಿ ಬ್ರೆಜಿಲ್ ಜಿ 20 ರಾಷ್ಟ್ರಗಳ ಗುಂಪನ್ನು ಮುನ್ನೆಡೆಸುತ್ತದೆ. ಬ್ರೆಜಿಲ್ ಅಧ್ಯಕ್ಷ ಲಯಿಜ್ ಇನಾಸಿಯೋ ಲೂಲ ಡಾ ಸಿಲ್ವಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಸೆಪ್ಟೆಂಬರ್ ನಲ್ಲಿ ಬ್ರೆಜಿಲ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. 2024ರಲ್ಲಿ ಬ್ರೆಜಿಲ್ ಹಾಗೂ 2025ರಲ್ಲಿ ದಕ್ಷಿಣ ಆಫ್ರಿಕಾ ಜಿ20 ಟೂರ್ನಿಗೆ ಆತಿಥ್ಯ ವಹಿಸಲಿವೆ.

Join Nadunudi News WhatsApp Group