New Rules: ಜೂನ್ 1 ರಿಂದ ಬದಲಾಗಲಿವೆ ಈ ನಿಯಮಗಳು, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ.

ಜೂನ್ 1 ರಿಂದ ಹಲವು ನಿಯಮಗಳು ಬದಲಾಗಲಿದ್ದು ಜನರು ಬದಲಾದ ನಿಯಮಗಳ ಕಡೆ ಗಮನವನ್ನ ಕೊಡಬೇಕು.

New Rules For June 1: ಪ್ರತಿ ತಿಂಗಳ ಆರಂಭದಿಂದ ಹೊಸ ಹೊಸ ನಿಯಮಗಳು ಆರಂಭವಾಗುತ್ತದೆ. ಇನ್ನು ಜೂನ್ ತಿಂಗಳು ಆರಂಭವಾಗಲು ಕೆಲವೇ ದಿನಗಳು ಬಾಕಿ ಇದೆ. ಮೇ ಅಂತ್ಯದ ಜೊತೆಗೆ ಅನೇಕ ನಿಯಮಗಳು ಸಹ ಬದಲಾಗಲಿವೆ. ಪ್ರತಿ ತಿಂಗಳ ಮೊದಲ ದಿನಾಂಕದಂದು ಅನೇಕ ನಿಯಮಗಳು ಬದಲಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಜೂನ್ 1 ರ ನೇರ ಪರಿಣಾಮ ನಿಮ್ಮ ಜೇಬಿನ ಮೇಲೆ ಬೀಳುತ್ತದೆ.

ಈ ಬಾರಿ ದೇಶಿಯ ಎಲ್ ಪಿ ಜಿ ಸಿಲಿಂಡರ್ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ರೆಪೋ ದರವನ್ನು ಹೆಚ್ಚಿಸಿದ ನಂತರ ಇತರ ಕೆಲವು ಬ್ಯಾಂಕುಗಳು ತಮ್ಮ ಬಡ್ಡಿದರಗಳನ್ನು ಹೆಚ್ಚಿಸಲಿವೆ. ಇದು ಸಾಲಗಾರರ ಮೇಲೆ ನೇರ ಪರಿಣಾಮ ಬೀರುತ್ತದೆ. ಅದೇ ರೀತಿಯಲ್ಲಿ ಅನೇಕ ವಿಶೇಷ ರೈಲುಗಳು ಜೂನ್ 1 ರಿಂದ ಪ್ರಾರಂಭವಾಗಲಿವೆ.

This time the domestic LPG cylinder price is likely to decrease.
Image Credit: economictimes

ಜೂನ್ 1 ರಿಂದ ಬದಲಾಗಲಿವೆ ಈ ನಿಯಮಗಳು
ಥರ್ಡ್ ಪಾರ್ಟಿ ವಿಮೆ ನಿಯಮ ಮಾಹಿತಿಯ ಪ್ರಕಾರ ಜೂನ್ 1 ರಿಂದ ಥರ್ಡ್ ಪಾರ್ಟಿ ವಿಮೆಯನ್ನು ಹೆಚ್ಚಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಕಂಪನಿಗಳಿಂದ ಇನ್ನು ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲವಾದರೂ ಥರ್ಡ್ ಪಾರ್ಟಿ ವಿಮೆಯ ಅವಧಿಯನ್ನು ಜೂನ್ 1 ರಂದು ವಿಸ್ತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಲ್ ಪಿ ಜಿ ಸಿಲಿಂಡರ್ ಬೆಲೆ ಇಳಿಕೆ ಆಗಬಹುದು
ಇನ್ನು ಜೂನ್ 1 ರಿಂದ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಸ್ವಲ್ಪ ಕಡಿಮೆಯಾಗಬಗಹುದು. ಏಕೆಂದರೆ ಕಳೆದ ಒಂದು ವಾರದಿಂದ ಕಚ್ಚಾ ತೈಲ ಬೆಲೆಗಳು ಕುಸಿಯುತ್ತವೆ ಎಂದು ಹೇಳಲಾಗುತ್ತಿವೆ. ಈ ಕಾರಣದಿಂದಾಗಿ ದೇಶಿಯ ಸಿಲಿಂಡರ್ ಗಳ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ.

ಕಳೆದ ತಿಂಗಳು ಎಲ್ ಪಿ ಜಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಇದರೊಂದಿಗೆ ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಸಹ ಹೆಚ್ಚಿಸಬಹುದು. ಈ ಹೆಚ್ಚಳ ಎಷ್ಟಾಗಬಹುದು ಎಂದು ಜೂನ್ 1 ರವರೆಗೆ ಕಾಯಬೇಕಾಗಿದೆ.

Join Nadunudi News WhatsApp Group

Hallmarking of gold jewelery and artefacts will be made mandatory in 256 districts of the country from June 1
Image Credit: brecorder

ಚಿನ್ನಕ್ಕೆ ಹಾಲ್ ಮಾರ್ಕಿಂಗ್
ಚಿನ್ನದ ಎರಡನೇ ಸುತ್ತಿನ ಹಾಲ್ಮಾರ್ಕಿಂಗ್ ಜೂನ್ 1, 2023 ರಿಂದ ಪ್ರಾರಂಭವಾಗಲಿದೆ. ಜೂನ್ 1 ರಿಂದ ದೇಶದ 256 ಜಿಲ್ಲೆಗಳಲ್ಲಿ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲ್ಮಾರ್ಕಿಂಗ್ ಕಡ್ಡಾಯವಾಗಲಿದೆ ಮತ್ತು 32 ಹೊಸ ಜಿಲ್ಲೆಗಳನ್ನು ಸೇರಿಸಲಾಗುವುದು. ಆದೇಶವು ಕಳೆದ ವರ್ಷದದ್ದಾಗಿದ್ದರೂ, ಅನೇಕ ಜಿಲ್ಲೆಗಳಲ್ಲಿ ಈ ಆದೇಶವನ್ನು ಇನ್ನೂ ಅನುಸರಿಸಲಾಗುತ್ತಿಲ್ಲ.

Join Nadunudi News WhatsApp Group